ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್
ಕೊರೋನಾವೈರಸ್ ಸೋಂಕಿನ ಬಗ್ಗೆ ತಿಳುವಳಿಕೆ ನೀಡಲು ಈಗಾಗಲೇ ಹಲವಾರು ಆ್ಯಪ್‌ಗಳು ಗೂಗಲ್ ಪ್ಲೇನಲ್ಲಿ ಲಭ್ಯವಿವೆ. ನಿಮ್ಮ ಸುತ್ತಮುತ್ತಲು ಕೊರೋನಾ ಭಾದಿತ ವ್ಯಕ್ತಿಯಿದ್ದಾರೆಯೇ ಎಂದು ತಿಳಿಯಲು ಕೇಂದ್ರ ಸರ್ಕಾರವೇ ಹೊಸ ಆ್ಯಪ್‌ಗೆ ಚಾಲನೆ ನೀಡಿದೆ.
ಬೆಂಗಳೂರು (ಏ.02): ತನ್ನ MyGov ಮೊಬೈಲ್ ಆ್ಯಪ್ ಮೂಲಕ ಕೇಂದ್ರ ಸರ್ಕಾರವು ಕೊರೋನಾವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈಗ ಕೊರೋನಾವೈರಸ್ ಟ್ರ್ಯಾಕಿಂಗ್‌ಗಾಗಿ ಹೊಸ ಆ್ಯಪ್‌ಗೆ ಕೇಂದ್ರ ಚಾಲನೆ ನೀಡಿದ್ದು, ನಿಮ್ಮ ಸುತ್ತಮುತ್ತ ಕೊರೋನಾ ಸೋಂಕಿತರು ಇದ್ದರೆ ಮಾಹಿತಿ ನೀಡುತ್ತದೆ.
ಆರೋಗ್ಯ ಸೇತು ಎಂಬ ಈ ಆ್ಯಪ್, ಸ್ಮಾರ್ಟ್‌ಫೋನ್ ಲೊಕೇಶನ್ ಮತ್ತು ಬ್ಲೂಟೂತ್ ಮಾಹಿತಿಯ ಆಧಾರದಲ್ಲಿ, ನೀವಿರುವ ಸ್ಥಳ ಎಷ್ಟು ಸುರಕ್ಷಿತ ಎಂಬುವುದನ್ನು ತಿಳಿಸುತ್ತದೆ. ಸ್ಮಾರ್ಟ್‌ಫೋನ್ ಲೊಕೇಶನ್ ಮೂಲಕ ವ್ಯಕ್ತಿಯ ಇರುವಿಕೆ ಗೊತ್ತಾದರೆ, ಬ್ಲೂಟೂತ್ ಮೂಲಕ ಇಬ್ಬರ ನಡುವಿನ ದೂರ 6 ಫೀಟ್‌ಗಿಂತ ಹೆಚ್ಚಿದೆಯೋ ಅಥವಾ ಕಡಿಮೆಯಿದೆಯೋ ಎಂದು ಗೊತ್ತಾಗುತ್ತದೆ.
ಇದನ್ನೂ ಓದಿ | Fact Check: 25 GB ಉಚಿತ ಡಾಟಾ ಆಫರ್, ಎಚ್ಚರಿಕೆ ನೀಡಿ ರಿಲಯನ್ಸ್ ಜಿಯೋ !...
ಕೊವಿಡ್-19 ಭಾದಿತ ವ್ಯಕ್ತಿ ಹಾಗೂ ಬಳಕೆದಾರರ ನಡುವಿನ ಅಂತರ 6 ಫೀಟ್‌ಗಿಂತ ಕಡಿಮೆಯಿದ್ದರೆ, ಹೈರಿಸ್ಕ್‌ನಲ್ಲಿದ್ದಾರೆ ಎಂದರ್ಥ.
ಹೈರಿಸ್ಕ್‌ನಲ್ಲಿದ್ದರೆ ಟೆಸ್ಟಿಂಗ್ ಮಾಡಿಸುವಂತೆಯೂ, ಸಹಾಯವಾಣಿ 1075ಗೆ ಕರೆಮಾಡುವಂತೆ ಈ ಆ್ಯಪ್ ಸೂಚಿಸುತ್ತದೆ. ಹಾಗೂ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಆ್ಯಪ್‌ನಲ್ಲಿರುವ ಚಾಟ್‌ಬಾಟ್ ಉತ್ತರಗಳನ್ನು ನೀಡುವುದಲ್ಲದೇ, ಸೋಂಕಿನ ಲಕ್ಷಣಗಳಿವೆಯೋ ಇಲ್ಲವೋ ಎಂಬುವುದನ್ನು ತಿಳಿಸುತ್ತದೆ.
ಜೊತೆಗೆ, ಕೊರೋನಾ ಸೋಂಕನ್ನು ತಡೆಯುವ ಬಗ್ಗೆಯೂ ಈ ಆ್ಯಪ್ ಟಿಪ್ಸ್ ನೀಡುತ್ತದೆ.