ಟೆಲಿಕಾಂ, ತಂತ್ರಜ್ಞಾನ ಮತ್ತು ಸಂಪರ್ಕ, 6ಜಿ, ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿ, ಸೆಮಿಕಂಡಕ್ಟರ್‌, ಡ್ರೋನ್‌, ಬಾಹ್ಯಾಕಾಶ, ಆಲ ಸಮುದ್ರ ಮತ್ತು ಹಸಿರು ಇಂಧನ ಕ್ಷೇತ್ರಗಳು ಭವಿಷ್ಯದಲ್ಲಿ ಭಾರತದ ಯುವಕರ ಕೈಯಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ನವದೆಹಲಿ (ಅಕ್ಟೋಬರ್ 28, 2023): ಅತ್ಯಂತ ವೇಗವಾಗಿ 5ಜಿ ತಂತ್ರಜ್ಞಾನವನ್ನು ನೋಡಿದ ಭಾರತ 6ಜಿ ತಂತ್ರಜ್ಞಾನದಲ್ಲೂ ಸಹ ಮುಂಚೂಣಿಗೆ ಬಂದು, ಜಾಗತಿಕ ನಾಯಕನಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ಇಲ್ಲಿ ನಡೆದ ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ವೇದಿಕೆಯಾದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನ 7ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಡವಾಳ, ಸಂಪನ್ಮೂಲ ಮತ್ತು ತಂತ್ರಜ್ಞಾನ ಒದಗಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದರಿಂದಾಗಿ ಭಾರತದಲ್ಲಿ ಉಂಟಾಗುತ್ತಿರುವ ಡಿಜಿಟಲ್‌ ಮೂಲಸೌಕರ್ಯ ಅಭಿವೃದ್ಧಿ ವಿಶ್ವದ ಆರ್ಥಿಕ ಅಭಿವೃದ್ಧಿಗೆ ಸಹಾಯ ಒದಗಿಸುತ್ತಿದೆ ಎಂದು ಹೇಳಿದರು.

ಪ್ರಸ್ತುತ ನಮ್ಮ ದೇಶ ಮೊಬೈಲ್‌ ಉದ್ಯಮದಲ್ಲಿ ಜಾಗತಿಕವಾಗಿ ಹೆಸರು ಮಾಡಿದೆ. ಹೆಸರಾಂತ ಕಂಪನಿಗಳಾದ ಗೂಗಲ್‌ ಮತ್ತು ಆ್ಯಪಲ್‌ ನಮ್ಮಲ್ಲಿ ಶಾಖೆಗಳನ್ನು ತೆರೆಯಲು ಮುಂದೆ ಬಂದಿವೆ. 5ಜಿ ಆವಿಷ್ಕಾರವಾದ ಒಂದೇ ವರ್ಷದಲ್ಲಿ 4 ಲಕ್ಷ ಬೇಸ್‌ ಸ್ಟೇಷನ್‌ಗಳನ್ನು ಸ್ಥಾಪಿಸಿ 6ಜಿಯತ್ತ ಮುಂದುವರೆದಿದ್ದೇವೆ. ಬ್ರಾಡ್‌ಬಾಂಡ್‌ ಸ್ಪೀಡ್‌ನಲ್ಲಿ 118ನೇ ಸ್ಥಾನದಿಂದ ದಾಖಲೆಯ 43ನೇ ಸ್ಥಾನಕ್ಕೆ ಬಂದಿದ್ದೇವೆ. ದೇಶದ ಶೇ. 70ರಷ್ಟು ನಗರಗಳು ಹಾಗೂ ಶೇ. 80ರಷ್ಟು ಜನ 5ಜಿಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನು ಓದಿ: ಕಲ್ಯಾಣ ಯೋಜನೆಗಳ ಪೂರ್ಣ ಜಾರಿಗೆ ಮೋದಿ 6 ತಿಂಗಳ ಡೆಡ್‌ಲೈನ್: ಚುನಾವಣೆಗೂ ಮುನ್ನ ದೇಶದಲ್ಲಿ ಬೃಹತ್‌ ಆಂದೋಲನ

ಟೆಲಿಕಾಂ, ತಂತ್ರಜ್ಞಾನ ಮತ್ತು ಸಂಪರ್ಕ, 6ಜಿ, ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿ, ಸೆಮಿಕಂಡಕ್ಟರ್‌, ಡ್ರೋನ್‌, ಬಾಹ್ಯಾಕಾಶ, ಆಲ ಸಮುದ್ರ ಮತ್ತು ಹಸಿರು ಇಂಧನ ಕ್ಷೇತ್ರಗಳು ಭವಿಷ್ಯದಲ್ಲಿ ಭಾರತದ ಯುವಕರ ಕೈಯಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ. 2014ಕ್ಕೂ ಮೊದಲು ಭಾರತ ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇದೀಗ ಭಾರತ ಮೊಬೈಲ್‌ ಫೋನ್‌ಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು. ಅಲ್ಲದೇ ಇದೇ ವೇಳೆ ದೇಶಾದ್ಯಂತ ಇರುವ ಕಾಲೇಜುಗಳಲ್ಲಿ 100ಕ್ಕೂ ಹೆಚ್ಚು 5ಜಿ ಲ್ಯಾಬ್‌ಗಳಿಗೆ ಅವರು ಚಾಲನೆ ನೀಡಿದರು.

2014ರಲ್ಲೇ ಜನ ಹಳೇ ಮೊಬೈಲ್‌ ಬಿಸಾಕಿದ್ದಾರೆ: ಮೋದಿ
ನವದೆಹಲಿ: 2014ರಲ್ಲಿ ದೇಶದ ಜನತೆ ಹೆಪ್ಪುಗಟ್ಟಿದ ಸ್ಕ್ರೀನ್‌ಗಳಿದ್ದ ಹಳತಾದ ಮೊಬೈಲ್‌ಗಳನ್ನು ಜನರು ಬಿಸಾಕಿದ್ದು, ದೇಶದಲ್ಲೇ ಬದಲಾವಣೆ ತರುವಂಥ ಸರ್ಕಾರವನ್ನು ಕೇಂದ್ರದಲ್ಲಿ ಪ್ರತಿಷ್ಠಾಪಿಸಿದರು. 2014 ಕೇವಲ ದಿನಾಂಕವಲ್ಲ. ಮೊಬೈಲ್‌ ಕ್ರಾಂತಿಯ ದ್ಯೋತಕ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ 2014ರಲ್ಲಿ ಪತನಗೊಂಡ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮೋದಿ ಮಾತು ಕೊಟ್ಟಂತೆ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳಿಸಿದ ಭಾರತ ಸರ್ಕಾರ: 6.5 ಟನ್ ಔಷಧಿ, ಅಗತ್ಯ ವಸ್ತು ರವಾನೆ

ಶುಕ್ರವಾರ ‘ಇಂಡಿಯನ್‌ ಮೊಬೈಲ್‌ ಕಾಂಗ್ರೆಸ್‌’ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘2014ಕ್ಕೆ ಮೊದಲು ಮೊಬೈಲ್‌ ಉದ್ಯಮದಲ್ಲಿ ಭಾರತ ಕೇವಲ ಆಮದುದಾರ ದೇಶವಾಗಿತ್ತು. ಆಗಿನ ಕಾಲದ ಮೊಬೈಲ್‌ಗಳಲ್ಲಿ ಎಷ್ಟು ಜೋರಾಗಿ ಬಟನ್‌ ಒತ್ತಿದರೂ ಅಥವಾ ಸ್ವೈಪ್‌ ಮಾಡಿದರೂ ಆಜ್ಞೆಯನ್ನು ಪಾಲಿಸಲು ವಿಳಂಬ ಮಾಡುತ್ತಿತ್ತು. ಅದಕ್ಕಾಗಿ 2014ರಲ್ಲಿ ಅಂತಹ ಹೆಪ್ಪುಗಟ್ಟಿದ ಮೊಬೈಲ್‌ಗಳಂತೆ ಜಡತ್ವದಿಂದಿದ್ದ ಸರ್ಕಾರವನ್ನು ತಿರಸ್ಕರಿಸಿ ಹೊಸ ಸರ್ಕಾರವನ್ನು ದೇಶದ ಜನತೆ ಆರಿಸಿದರು’ ಎಂದು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

‘ಈಗ ನಮ್ಮ ದೇಶ ಮೊಬೈಲ್‌ ಉದ್ಯಮದಲ್ಲಿ ಜಾಗತಿಕವಾಗಿ ಹೆಸರು ಮಾಡಿದೆ. ಹೆಸರಾಂತ ಕಂಪನಿಗಳಾದ ಗೂಗಲ್‌ ಮತ್ತು ಆ್ಯಪಲ್‌ ನಮ್ಮಲ್ಲಿ ಶಾಖೆಗಳನ್ನು ತೆರೆಯಲು ಮುಂದೆ ಬಂದಿವೆ. 5ಜಿ ಆವಿಷ್ಕಾರವಾದ ಒಂದೇ ವರ್ಷದಲ್ಲಿ 4 ಲಕ್ಷ ಬೇಸ್‌ ಸ್ಟೇಷನ್‌ಗಳನ್ನು ಸ್ಥಾಪಿಸಿ 6ಜಿಯತ್ತ ಮುಂದುವರೆದಿದ್ದೇವೆ. ಬ್ರಾಡ್‌ಬಾಂಡ್‌ ಸ್ಪೀಡ್‌ನಲ್ಲಿ 118ನೇ ಸ್ಥಾನದಿಂದ ದಾಖಲೆಯ 43ನೇ ಸ್ಥಾನಕ್ಕೆ ಬಂದಿದ್ದೇವೆ. ಹಾಗಾಗಿ ಅಂತಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಸರ್ಕಾರವನ್ನು ಕಿತ್ತೊಗೆದದ್ದರಿಂದ ನಾವು ಇಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಆದ್ದರಿಂದ 2014 ಕೇವಲ ದಿನಾಂಕವಲ್ಲ, ಮೊಬೈಲ್‌ ಕ್ರಾಂತಿಯ ದ್ಯೋತಕ’ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಎಲೆಕ್ಟ್ರಿಕ್‌, ಹೈಡ್ರೋಜನ್‌ ವಾಹನಗಳ ಮೂಲಕ ಇಂಧನದ ಬೇಡಿಕೆ ತಗ್ಗುತ್ತದೆ: ಬೆಂಗಳೂರಲ್ಲಿ ಮೋದಿ ಮಾತು