ಹೊಸ ಪ್ರೈವೆಸಿ ಪಾಲಸಿಯನ್ನು ಒಪ್ಪಿಕೊಳ್ಳದಿದ್ದರೂ ಖಾತೆಯನ್ನು ಡಿಲಿಟ್ ಮಾಡುವುದಿಲ್ಲ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಎಂದು ಹೇಳಿದೆ. ಆದರೆ, ಅದರಲ್ಲೊಂದು ಟ್ವಿಸ್ಟ್ ಇಟ್ಟಿದೆ. ಏನೆಂದರೆ, ಯಾರು ವಾಟ್ಸಾಪ್‌ನ ಹೊಸ ಪ್ರೈವೆಸಿ ಪಾಲಸಿ ಒಪ್ಪಿಕೊಳ್ಳುವುದಿಲ್ಲವೋ ಅವರ ವಾಟ್ಸಾಪ್ ಅಕೌಂಟ್ ಎಂದಿನಂತೆ ಇರುವುದಿಲ್ಲ!  ನಿಮ್ಮ ಚಾಟ್ ಲಿಸ್ಟ್ ಅಕ್ಸೆಸ್ ಮಾಡಲು ಸಾಧ್ಯವಾಗದೇ ಇರಬುಹುದು, ಸೀಮಿತವಾದ ಕಾರ್ಯ ನಿರ್ವಹಣೆ ಇರಲಿದೆ!

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

ಫೇಸ್‌ಬುಕ್ ಒಡೆತನದ ವಾಟ್ಸಾಪ್‌ನ ಹೊಸ ಪ್ರೈವೆಸಿ ಪಾಲಸಿ ಸ್ವೀಕರಿಸಲು ಇದೇ ತಿಂಗಳು 15ರವರೆಗೂ ಗಡುವು ಇದೆ. ಒಂದೊಮ್ಮೆ ನೀವು ಈ ಗಡುವಿನೊಳಗೆ ಹೊಸ ಪ್ರೈವೆಸಿ ಪಾಲಸಿ ಅಪ್‌ಡೇಟ್ ಮಾಡಿಕೊಂಡರೆ ನಿಮ್ಮ ಖಾತೆ ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ, ಒಂದೊಮ್ಮೆ ನೀವು ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ಸಿಮಿತವಾದ ಲಾಭಗಳು ದೊರೆಯಲಿವೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತ ಸರ್ಕಾರ, ಸುಪ್ರೀಂ ಕೋರ್ಟ್ ಮತ್ತು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ ತೀವ್ರ ಆಕ್ಷೇಪದ ನಡುವೆಯೂ ಕಂಪನಿ ಇಂಥದೊಂದು ನಿರ್ಧಾರಕ್ಕೆ ಬಂದಿದೆ.

ಭಾರತದಲ್ಲಿ 53 ಕೋಟಿ ವಾಟ್ಸಾಪ್ ಬಳಕೆದಾರರಿದ್ದಾರೆ. ಪ್ರೈವಸಿ ಪಾಲಸಿಯನ್ನು ಒಪ್ಪಿಕೊಳ್ಳದ ಬಳಕೆದಾರರ ಖಾತೆಯನ್ನು ಒಮ್ಮಿಲೆ ಸ್ಥಗಿತಗೊಳಿಸುವುದಿಲ್ಲ. ಹಂತ ಹಂತವಾಗಿ ಸೇವೆಯನ್ನು ಕಡಿತಗೊಳಿಸಲಾಗುತ್ತಿದೆ ಎನ್ನಲಾಗುತಿದೆ. ಯಾರು ಮೇ 15ರೊಳಗೆ ವಾಟ್ಸಾಪ್  ಪಾಲಸಿಯನ್ನು ಒಪ್ಪಿಕೊಳ್ಳುವುದಿಲ್ಲವೋ ಅವರ ಖಾತೆಯು ಸೀಮಿತವಾಗಿ ಸಕ್ರಿಯವಾಗಿರುತ್ತದೆ. ನಿರಂತರ ರಿಮೈಂಡರ್‌ಗಳ ಹೊರತಾಗಿಯೂ ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ನಿಧಾನವಾಗಿ ಸೇವೆಯನ್ನು ಕಡಿತ ಮಾಡುತ್ತ ಹೋಗಲಾಗುತ್ತದೆ.

ಯಾರು ಪ್ರೈವೆಸಿ ಪಾಲಸಿಯನ್ನು ಅಪ್‌ಡೇಟ್ ಮಾಡಿಕೊಳ್ಳುವುದಿಲ್ಲವೋ ಅಥವಾ ಖಾತೆಯನ್ನು ಡಿಲಿಟ್ ಮಾಡುವುದಿಲ್ಲ ಎಂದು ವಾಟ್ಸಾಪ್ ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ವಾಟ್ಸಾಪ್ ಖಾತೆ ಮೊದಲನಂತೆ ಮಾತ್ರ ಇರುವುದಿಲ್ಲ ಎಂಬುದನ್ನೂ ಹೇಳಿದೆ.

ಸೈಬರ್ ದಾಳಿಗೆ ನಲುಗಿದ ಅಮೆರಿಕ; ಇಂಧನ ಪೂರೈಕೆ ಸ್ಥಗಿತ

ಪ್ರೈವೆಸಿ ಪಾಲಸಿ ಸಂಬಂಧ ನಿರಂತರ ರಿಮೈಂಡರ್‌ ಪಡೆದ ಬಳಿಕ ಏನಾಗುತ್ತದೆ ಎಂಬ ಬಳಕೆದಾರರ ಸಮಾನ್ಯ ಪ್ರಶ್ನೆಗೆ ವಾಟ್ಸಾಪ್ ತನ್ನ ಜಾಲತಾಣ, ಬ್ಲಾಗ್‌ನಲ್ಲಿ ಸಲಹೆ ರೂಪದಲ್ಲಿ ಉತ್ತರಿಸಿದ್ದು, ಆ ಸಮಯದಲ್ಲಿ ನೀವು ಅಪ್‌ಡೇಟ್ ಸ್ವೀಕರಿಸುವವರೆಗೆ ನೀವು ವಾಟ್ಸಾಪ್‌ನಲ್ಲಿ ಸೀಮಿತ ಕಾರ್ಯವನ್ನು ಎದುರಿಸುತ್ತೀರಿ. ನಿಮ್ಮ ಚಾಟ್ ಪಟ್ಟಿಯನ್ನು ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಹಂತದಲ್ಲೂ ನೀವು ಇನ್ ಕಮಿಂಗ್ ಮತ್ತು ವಿಡಿಯೋ ಕಾಲ್‌ಗಳಿಗೆ ಉತ್ತರಿಸಬಹುದು. ನೀವು ಅಧಿಸೂಚನೆಗಳನ್ನು ಸಕ್ರಿಯಗೊಳಿಸಿದ್ದರೆ, ಸಂದೇಶವನ್ನು ಓದಲು ಅಥವಾ ಪ್ರತಿಕ್ರಿಯಿಸಲು ನೀವು ಅವುಗಳನ್ನು ಟ್ಯಾಪ್ ಮಾಡಬಹುದು ಅಥವಾ ಮಿಸ್ಡ್ ಕಾಲ್ ಆಗಿದ್ದರೆ ಮರಳಿ ಕರೆ ಮಾಡಬಹುದು. ಇಷ್ಟಾಗಿಯೂ ನೀವು ರಿಮೈಂಡರ್‌ಗಳನ್ನು ನಿರ್ಲಕ್ಷಿತ್ತಾ ಹೋದರೆ, ಮುಂದಿನ ಹಂತದಲ್ಲಿ ನಿಮ್ಮ ವಾಟ್ಸಾಪ್‌ಗೆ ಇನ್ ಕಮಿಂಗ್ ಕಾಲ್ ಅಥವಾ ನೋಟಿಫಿಕೇಷನ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಮತ್ತು ನಿಮ್ಮ ಫೋನ್‌ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ ಎಂದು ತಿಳಿಸಿದೆ.

ಈ ವರ್ಷದ ಜನವರಿ ತಿಂಗಳಲ್ಲಿ ಅಪ್ಲಿಕೇಶನ್‌ನಲ್ಲಿನ ಅಧಿಸೂಚನೆಯ ಮೂಲಕ ವಾಟ್ಸಾಪ್ ತನ್ನ ಸೇವಾ ನಿಯಮಗಳು ಮತ್ತು ಸಾರ್ವಜನಿಕ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್‌ ಬಳಕೆಯನ್ನು ಮುಂದುವರಿಸಬೇಕಿದ್ದರೆ ಬಳಕೆದಾರರು ಫೆಬ್ರವರಿ 8ರೊಗಳಗೆ ಕಂಪನಿಯೆ ಹೊಸ ನಿಯಮಗಳಿಗೆ ಒಪ್ಪಿಗೆ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಕಂಪನಿಯ ಈ ಕ್ರಮಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಯಿತು. ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಬಳಸಿಕೊಳ್ಳಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಕಂಪನಿ ಸ್ಪಷ್ಟಣೆ ನೀಡಿತು. ಜೊತೆಗೆ, ಅಪ್‌ಡೇಟ್ ಮಾಡಲು ನೀಡಿದ್ದ ಗಡುವನ್ನು ಮೇ 15ರವರೆಗೂ ಮುಂದೂಡಿತ್ತು.

ಮೇ 15ರ ನಂತರ ವಾಟ್ಸಾಪ್ ಅಕೌಂಟ್ ರದ್ದಾಗಲ್ಲ! ಯಾಕೆ ಗೊತ್ತಾ?