Asianet Suvarna News Asianet Suvarna News

ಸೈಬರ್ ದಾಳಿಗೆ ನಲುಗಿದ ಅಮೆರಿಕ; ಇಂಧನ ಪೂರೈಕೆ ಸ್ಥಗಿತ

ಅಮೆರಿಕದ ಬಹುದೊಡ್ಡ ಇಂಧನ ಪೂರೈಕೆ ಮಾಡುವ ಕಲೋನಿಯಲ್ ಪೈಪ್‌ಲೈನ್ ಕಂಪನಿಯ ಕಂಪ್ಯೂಟರ್ ವ್ಯವಸ್ಥೆಯು ಸೈಬರ್ ದಾಳಿಗೊಳಗಾಗಿದೆ. ಇದರಿಂದ ಅಮೆರಿಕದ ದಕ್ಷಿಣ ಮತ್ತು ಪೂರ್ವ ಕರಾವಳಿ ಭಾಗಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಘಟನೆಯು ಅಮೆರಿಕದ ಡಿಜಿಟಲ್ ಸುರಕ್ಷತೆಯ  ಬಗ್ಗೆ ಅನುಮಾನ ಮೂಡವಂತೆ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

Cyber attacks colonial pipeline and it exposed vulnerabilities of USA digital security
Author
Bengaluru, First Published May 10, 2021, 2:58 PM IST

ಕೊರೋನಾ ವೈರಸ್‌ ಅಮೆರಿಕ ಸೇರಿದಂತೆ ಇಡೀ ಜಗತ್ತೇ ತಲ್ಲಣಗೊಳಿಸಿದೆ. ಇದರ ಮಧ್ಯೆಯೇ ಅಮೆರಿಕದಲ್ಲಿ ನಡೆದ ಸೈಬರ್ ದಾಳಿಯೊಂದು ಅಮೆರಿಕನ್ನರನ್ನು ಬೆಚ್ಚಿ ಬೀಳಿಸಿದೆ. ಅಮೆರಿಕದ ಪ್ರಮುಖ ಇಂಧನ ಪೂರೈಕೆ ಕಂಪನಿ ಕಲೋನಿಯಲ್ ಪೈಪ್‌ಲೈನ್ ವ್ಯವಸ್ಥೆಯು ಸೈಬರ್ ದಾಳಿಗೆ ಒಳಗಾಗಿದೆ.

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!

ವೈರಸ್ ದಾಳಿಯಿಂದಾಗಿ ಅಮೆರಿಕದ ಈ ತೈಲ ಪೈಪ್‌ಲೈನ್ ಜಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ಅಮೆರಿಕದ ಪೂರ್ವ ಕರಾವಳಿಯ ಅರ್ಧದಷ್ಟು ಭಾಗಗಳಿಗೆ ತೈಲ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಇದರಿಂದ ಭಾರೀ ತೊಂದರೆಯುಂಟಾಗಿದೆ.  ತೈಲ ಪೂರೈಕೆ ಮಾಡುವ ಜಾಲದ ಕಂಪ್ಯೂಟರ್ ಸಿಸ್ಟಮ್‌ಗೆ ಹಾನಿ ಮಾಡುವ ವೈರಸ್ ದಾಳಿ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದುವರೆಗೂ ನಡೆದ ಸೈಬರ್ ದಾಳಿಗಳ ಪೈಕಿ ಈ ದಾಳಿಯು ಅತ್ಯಂತ ವಿನಾಶಾಕಾರಿ ಡಿಜಿಟಲ್ ಸುಲಿಗೆ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನೆಲ್ಲ ವ್ಯವಸ್ಥೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಅಮೆರಿಕದ ಡಿಜಿಟಲ್ ವ್ಯವಸ್ಥೆಯನ್ನು ಕೂಡ ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬುದನ್ನು ಈ ಘಟನೆ ತೋರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪೆಟ್ರೋಲ್ ದರ ಏರಿಕೆ?
ಇಂಧನ ಪೂರೈಕೆ ಜಾಲದ ಮೇಲಿನ ದಾಳಿಯಿಂದಾಗಿ ಕಲೋನಿಯಲ್ ಪೈಪ್‌ಲೈನ್ ಅನ್ನು ದೀರ್ಘಕಾಲ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ಇದರಿಂದಾಗಿ ಅಮೆರಿಕದಲ್ಲಿ ಪೆಟ್ರೋಲ್ ದರ ಏರಿಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

Cyber attacks colonial pipeline and it exposed vulnerabilities of USA digital security

25 ಲಕ್ಷ ಬ್ಯಾರೆಲ್ ಪೂರೈಕೆ
ಅಮೆರಿಕದ ಪ್ರಮುಖ ಇಂಧನ ಪೂರೈಕೆ ಪೈಪ್‌ಲೈನ್ ವ್ಯವಸ್ಥೆ ಇದಾಗಿದೆ. ಕಲೋನಿಯಲ್ ಪೈಪ್‌ಲೈನ್ ಕಂಪನಿಯು  ಪ್ರತಿನಿತ್ಯ ಸುಮಾರು 25 ಲಕ್ಷ ಬ್ಯಾರಲ್‌ನಷ್ಟು ಪೆಟ್ರೋಲ್ ಮತ್ತು ಇತರ ಇಂಧನಗಳನ್ನು ಸುಮಾರು 8,850 ಕಿ.ಮೀ.ವರೆಗೂ ಪೂರೈಕೆ ಮಾಡುತ್ತದೆ. ಇದೇ ಪೈಪ್‌ಲೈನ್ ವ್ಯವಸ್ಥೆಯ ಮೂಲಕ ಅಮರಿಕದ ದಕ್ಷಿಣ ಹಾಗೂ ಪೂರ್ವ ಕರಾವಳಿಯ  ಭಾಗಕ್ಕೆ ಪೆಟ್ರೋಲ್ ಪೂರೈಕೆ ಮಾಡಲಾಗುತ್ತದೆ. ಅಂಟ್ಲಾಟಾದ ಹಾರ್ಟ್ಸ್ ಫೀಲ್ಡ್ ಜಾಕ್ಸನ್ ವಿಮಾನ ನಿಲ್ದಾಣಕ್ಕೂ ಇದೇ ಪೈಪ್‌ಲೈನ್ ವ್ಯವಸ್ಥೆಯಿಂದಲೇ ಇಂಧನ ಪೂರೈಕೆಯಾಗುತ್ತದೆ. ಈಗ ಸೈಬರ್ ದಾಳಿಯಿಂದ ಈ ಎಲ್ಲ ಕಡೆ ಇಂಧನ ಪೂರೈಕೆ ನಿಂತಿದೆ ಮತ್ತು ಸಮಸ್ಯೆ  ಶುರುವಾಗಿದೆ.

ಮೇ 15ರ ನಂತರ ವಾಟ್ಸಾಪ್ ಅಕೌಂಟ್ ರದ್ದಾಗಲ್ಲ! ಯಾಕೆ ಗೊತ್ತಾ?

ವ್ಯವಸ್ಥೆ ಸರಿ ಮಾಡಲು ಟೈಮ್ ಬೇಕು
ಅಮೆರಿಕದ ಬಹುದೊಡ್ಡ ಇಂಧನ ಪೂರೈಕೆ ವ್ಯವಸ್ಥೆಯಾಗಿರುವ ಈ ಕಲೋನಿಯಲ್ ಪೈಪ್‌ಲೈನ್ ಸಿಸ್ಟಮ್‌ ಅನ್ನು ಸೈಬರ್ ದಾಳಿ ಮೂಲಕ ಹಾಳು ಮಾಡಲಾಗಿದೆ. ಆದರೆ, ಇದನ್ನು ಸರಿ ಮಾಡಲು ಸುಮಾರು ಸಮಯ ಬೇಕು ಎಂದು ಹೇಳಲಾಗುತ್ತಿದೆ. ಹ್ಯಾಕರ್ಸ್ ಯಾವ ರೀತಿ ಇಡೀ ಕಂಪ್ಯೂಟರ್ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆಂಬುದು ಅರ್ಥ ಮಾಡಿಕೊಂಡು ವ್ಯವಸ್ಥೆಯನ್ನ ಸುಧಾರಿಸಬೇಕಿದೆ. ಈ ಹಿನ್ನೆಲೆಯಲ್ಲಿ  ಸೈಬರ್ ಭದ್ರತಾ ಸಂಸ್ಥೆ ಫೈರ್ ಐನ್ ಹೆಲ್ಪ್ ಪಡೆಯಲಾಗುತ್ತಿದೆ.

ಯಾರು ಮಾಡಿದ್ದು?
ಕಲೋನಿಯಲ್ ಇಂಧನ ಪೈಪ್‌ಲೈನ್ ಮೇಲೆ ಯಾರು ಸೈಬರ್ ದಾಳಿ ಮಾಡಿದ್ದು ಎಂಬುದು ಇದವರೆಗೂ ಗೊತ್ತಾಗಿಲ್ಲ. ಯಾಕೆ ಮಾಡಿದ್ದಾರೆ, ಅವರ ಉದ್ದೇಶವನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೆ, ಆರಂಭದಲ್ಲಿ ಇನ್ನೂ ಯಾವುದೇ ಮಾಹಿತಿಗಳು ದೊರೆತಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಅಮೆರಿಕದ ತನಿಖಾ ದಳ ಎಫ್‌ಬಿಐ ಹೇಳಿದೆ.

ಮಾಹಿತಿ ಪಡೆದ ಪ್ರೆಸಿಡೆಂಟ್
ಇಂಧನ ಪೂರೈಸುವ ಕಲೋನಿಯಲ್ ಪೈಪ್‌ಲೈನ್ ಕಂಪನಿ ವ್ಯವಸ್ಥೆ ಮೇಲಿನ ಸೈಬರ್ ದಾಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಪಡೆದುಕೊಂಡಿದ್ದಾರೆ. ಜೊತೆಗೆ ಈಗ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ತೈಲ ಕಂಪನಿ ಜತೆ ಅಮೆರಿಕ ಸರ್ಕಾರ ಕೂಡ ಕೈಜೋಡಿಸಿದೆ ಎಂದು ಹೇಳಲಾಗುತ್ತಿದೆ. ಸೈಬರ್ ದಾಳಿಯಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ  ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

Follow Us:
Download App:
  • android
  • ios