Poco M4 Pro 5G: ಫೆ.15ಕ್ಕೆ ಪೋಕೋದ ಹೊಸ ಸ್ಮಾರ್ಟ್‌ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ?
*ಬಹುನಿರೀಕ್ಷೆಯ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಲಾಂಚ್ ಪಕ್ಕಾ
*ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ಈ ಹಿಂದೆ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು
*ಕ್ಯಾಮೆರಾ ಸೇರಿದಂತೆ ಇನ್ನಿತರ ಸಾಕಷ್ಟು ಹೊಸ ಹೊಸ ಫೀಚರ್‌ಗಳು ಇದರಲ್ಲಿವೆ
Tech Desk: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಪೋಕೋ ತನ್ನದೇ ಆದ ಪಾಲನ್ನು ಹೊಂದಿದೆ. ತನ್ನ ವಿಶಿಷ್ಟ ಹಾಗೂ ಅತ್ಯಾಧುನಿಕ ಫೋನ್‌ಗಳ ಮೂಲಕ ಪೋಕೋ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಫೋನ್ ಅನ್ನು ಲಾಂಚ್ ಮಾಡಲಿದೆ. ಪೋಕೋ ಎಂ4 ಪ್ರೋ 5ಜಿ (Poco M4 Pro 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಅನ್ನು ಕಂಪನಿಯನ್ನು ಫೆಬ್ರವರಿ 15ರಂದು ಲಾಂಚ್ ಮಾಡಲಿದೆ ಎಂಬುದನ್ನು ಖಚಿತಪಡಿಸಲಾಗಿದೆ.
ಪೋಕೋ ಕಂಪನಿಯು ಈಗಾಗಲೇ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಲಾಂಚ್ ಬಗ್ಗೆ ಟ್ವಿಟರ್‌ನಲ್ಲಿ ಟೀಸರ್ ಕೂಡ ಷೇರ್ ಮಾಡಿಕೊಂಡಿದ್ದು, ಬಳಕೆದಾರರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಅನ್ನು ಕಂಪನಿ ಈ ಹಿಂದೆ ಅಂದರೆ, ಕಳೆದ ಅಕ್ಟೋಬರ್‌ನಲ್ಲಿ ಚೀನಾ ಮಾರುಕಟ್ಟೆಗೆ ಪರಿಚಯಿಸಿತ್ತು. ಆ ನಂತರ ಇದೀಗ ಭಾರತೀಯ ಮಾರುಕಟ್ಟೆಗೂ ಈ ಫೋನ್ ಬಿಡುಗಡೆಯ ಪ್ಲ್ಯಾನ್ ಅನ್ನು ಕಂಪನಿ ಹಾಕಿಕೊಂಡಿರುವ ಹಾಗಿದೆ.
ಇದನ್ನೂ ಓದಿ: Samsung Galaxy A53: ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನ್ ಇಮೇಜ್, ವಿಶೇಷತೆಗಳ ಮಾಹಿತಿ ಸೋರಿಕೆ!
ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಳ್ಳಲಿರುವ ಟೀಸರ್‌ನಲ್ಲಿ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನಿನ ವಿನ್ಯಾಸದ ಝಲಕ್‌ಗಳನ್ನು ಹೈಲೈಟ್ ಮಾಡಲಾಗಿದೆ. ಸ್ಮಾರ್ಟ್‌ಫೋನಿನ ಸೆಂಟರ್ ಪಂಚ್ ಹೋಲ್ ಕಟೌಟ್ , ರಿಯರ್ ಕ್ಯಾಮೆರಾ ಮಾಡ್ಯೂಲ್, ಪವರ್ ಫುಲ್ ಚಿಪ್‌ಸೆಟ್ ಬಗ್ಗೆ ಟೀಸ್ ಮಾಡಲಾಗಿದೆ. ಈ ಫೋನು ಕಳೆದ ನವೆಂಬರ್‌ನಲ್ಲಿ ಲಾಂಚ್ ಆಗಿದ್ದರೂ, ಇದೀಗ ಅದ 5ಜಿ ನೆಟ್ವರ್ಕ್ ಸಪೋರ್ಟ್‌ನಿಂದ ಬರುತ್ತಿದೆ ಎಂದು ಹೇಳಬಹುದು. ಅಕ್ಟೋಬರ್ ತಿಂಗಳಲ್ಲಿ ಈ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್, ರಿಬ್ರ್ಯಾಂಡ್ ಆಗಿ ಅಂದರೆ, ರೆಡ್ ಮಿ ನೋಟ್ 11 5ಜಿ ಹೆಸರಿನಲ್ಲಿ ಬಿಡುಗಡೆಯಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಈ ಫೋನ್ ಹೇಗಿದೆ?: ಪೋಕೋ ಎಂ4 ಪ್ರೋ 5ಜಿ ಫೋನ್ ಬಗ್ಗೆ ಕಂಪನಿಯು ಅಧಿಕೃತವಾಗಿ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಕೆಲವು ಮಾಹಿತಿಗಳು ಪ್ರಕಾರ, ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿರುವ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್, 6.6 ಇಂಚ್ ಎಫ್‌ಎಚ್‌ಡಿ ಪ್ಲಸ್ ಎಲ್ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು ಪಂಚ್ ಹೋಲ್ ಕ್ಯಾಮೆರಾ ಹೊಂದಿರಲಿದೆ.
ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ನೀವು 5000mAh ಕಾಣಲಿದ್ದು, ಇದು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ. ಜತೆಗೆ, ಫ್ರಂಟ್‌ನಲ್ಲಿ ಸೆಲ್ಫಿ ಮತ್ತು ವಿಡಿಯೋ ಚಾಟ್ಸ್‌ಗಾಗಿ ಕಂಪನಿಯು 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಿದೆ. 5 ಜಿ, 4ಜಿ ಎಲ್‌ಟಿಇ, ಡುಯಲ್ ಬ್ರ್ಯಾಂಡ್ ವೈ ಫೈ ಮತ್ತು ಬ್ಲೂಟೂಥ್, ಜಿಪಿಸಿ ಮತ್ತು ಯುಸಿಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಇತರೆ ಕನೆಕ್ಟಿವಿಟಿ ಸೌಲಭ್ಯಗಳಿವೆ.
ಇದನ್ನೂ ಓದಿ: Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?
ಪೋಕೋ ಎಂ4 ಪ್ರೋ 5ಜಿ (Poco M4 Pro 5G) ಫೋನ್ ಆಂಡ್ರಾಯ್ಡ್ 11 ಆಧರಿತ ಎಂಐಯುಐ 12.5 ಒಎಸ್ ಹೊಂದಿರಲಿದೆ. ಮೀಡಿಯಾ ಟೆಕ್ ಡಿಮೆನ್ಸಿಟಿ 810 ಚಿಪ್‌ಸೆಟ್ ಇದ್ದು, ಅದು 6ಜಿಬಿ ಅಥವಾ 8ಜಿಬಿ RAMನೊಂದಿಗೆ ಸಂಯೋಜಿತವಾಗಿರಲಿದೆ. ಮತ್ತು ಈ ಫೋನ್ 64 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಮೆಮೋರಿಯನ್ನು ಕೂಡ ಹೆಚ್ಚು ಮಾಡಿಕೊಳ್ಳಲು ಅವಕಾಶವಿದೆ. ಫೋನ್ ಹಿಂಬದಿಯಲ್ಲಿ ಡುಯಲ್ ಕ್ಯಾಮೆರಾಗಳು ಇರಲಿವೆ. ಈ ಪೈಕಿ ಮೊದಲನೆಯ ಕ್ಯಾಮೆರ 50 ಮೆಗಾ ಪಿಕ್ಸೆಲ್ ಕ್ಯಾಮರಾ ಆಗಿರಲಿದೆ. ಎರಡನೆಯದ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿರುವ ಸಾಧ್ಯತೆಗಳಿವೆ.