ವಾಟ್ಸ್ಆ್ಯಪ್ ವೆಬ್, ಗೂಗಲ್ ಆ್ಯಪ್‌ನಲ್ಲೀಗ ಡಾರ್ಕ್ ಮೋಡ್ ಆಪ್ಷನ್
ವಾಟ್ಸ್ಆ್ಯಪ್‌ನಲ್ಲಿ ಡಾರ್ಕ್ ಮೋಡ್ ಅಳವಡಿಸಲು ತಂತ್ರಜ್ಞಾನದ ಸಿದ್ಧತೆಗಳು ನಡೆಯುತ್ತಿವೆ. ಆದರೂ, ಅದನ್ನು ಮೊಬೈಲ್‌ನಲ್ಲಿ ಬಳಸಲೇಬೇಕೆಂದಿದ್ದವರಿಗೆ ಒಳದಾರಿಯೊಂದಿದೆ. ನೀವು ಈ ಮಾರ್ಗವನ್ನು ಅನುಸರಿಸಿದರೆ ಡಾರ್ಕ್ ಮೋಡ್ ಅನ್ನು ಎನೇಬಲ್ ಮಾಡಬಹುದು ಎಂದು WABetaInfo ಹೇಳಿಕೊಂಡಿದೆ.
ಅಯ್ಯೋ ಬಿಡ್ರಿ, ಎಂಥ ಮೊಬೈಲ್ ತಗೊಂಡ್ರೂ ಬ್ಯಾಟರಿ ಮಾತ್ರ ನಿಲ್ಲುತ್ತಿಲ್ಲ. ಬ್ಯಾಟರಿ ಸೇವರ್ ಹಾಕ್ಕೊಂಡ್ರೂ ಕಷ್ಟ ಅನ್ನುವವರಿದ್ದರು. ಹೀಗಾಗಿ ಕೆಲವರು ಆ್ಯಪ್ಗಳನ್ನು ಬಳಸುವುದಕ್ಕೇ ಹಿಂದೇಟು ಹಾಕುತ್ತಾರೆ. ಇಲ್ಲವೇ ಎಷ್ಟು ಬೇಕೋ ಅಷ್ಟಕ್ಕೆ ಸೀಮಿತರಾಗುತ್ತಿದ್ದಾರೆ. ಜೊತೆಗೆ ಅತಿಯಾದ ಕಾಂಟ್ರಾಸ್ಟ್‌ನಿಂದ ಕಣ್ಣಿಗೂ ಹಾಳು ಎಂದು ಅಧ್ಯಯನ ವರದಿಗಳು ಆಗಾಗ ಎಚ್ಚರಿಸುತ್ತಲೇ ಇರುತ್ತಿವೆ. ಈ ಹಿನ್ನೆಲೆಯಲ್ಲಿ ಬಂದ ಡಾರ್ಕ್ ಮೋಡ್ ಈಗ ವಾಟ್ಸ್ಆ್ಯಪ್ನಲ್ಲೂ ಮೋಡಿ ಮಾಡಲು ಹೊರಟಿದೆ. ಆದರೆ, ಇದನ್ನು ವಾಟ್ಸ್ಆ್ಯಪ್ ವೆಬ್ ಮೂಲಕ ಹೇಗೆ ಎನೇಬಲ್ (ಸಕ್ರಿಯ) ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.
ವಾಟ್ಸ್ಆ್ಯಪ್ನಲ್ಲಿ ಇನ್ನೂ ಡಾರ್ಕ್ ಮೋಡ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಅಷ್ಟರವರೆಗೆ ತಾತ್ಕಾಲಿಕವಾಗಿ ಡಾರ್ಕ್ ಮೋಡ್ ಅನ್ನು ಬಳಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿರುವ ಕಂಪನಿಯು ವಾಟ್ಸ್ಆ್ಯಪ್ ವೆಬ್ ಮೂಲಕ ಡಾರ್ಕ್ ಮೋಡ್ ಫೀಚರ್ ಹೊಂದುವ ಸೌಲಭ್ಯವನ್ನು ನೀಡಿದೆ. ಹೀಗಾಗಿ ವಾಟ್ಸ್ಆ್ಯಪ್ ವೆಬ್ ಮೂಲಕ ಹೇಗೆ ಎನೇಬಲ್ ಮಾಡಬಹುದು ಎಂಬುದರ ಬಗ್ಗೆ WABetaInfo ಹೇಳಿದೆ.
ಇದನ್ನು ಓದಿ: ಲಾಕ್‌ಡೌನ್ ಅವಧಿಯಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಗಳಿವು!
ಈ ಟ್ರಿಕ್ ಬಳಸಿ ಡಾರ್ಕ್ ಮೋಡ್ ಹೊಂದಿ
ಈಗ ವಾಟ್ಸ್ಆ್ಯಪ್ ವೆಬ್‌ನಲ್ಲಿ ಡಾರ್ಕ್ ಥೀಮ್ ಹೇಗೆ ಕಾಣುತ್ತದೆ ಎಂಬ ಮಾಹಿತಿಯನ್ನು WABetaInfo ಹಂಚಿಕೊಂಡಿದೆ. ಆದರೆ, ಇನ್ನೂ ಫೀಚರ್ ಅನ್ನು ಬಿಡುಗಡೆಗೊಳಿಸಿಲ್ಲ. ಅಷ್ಟಾಗಿಯೂ ಈಗಲೇ ಡಾರ್ಕ್ ಮೋಡ್ ಹೊಂದಬೇಕೆಂದು ಯಾರಾದರೂ ಬಯಸಿದರೆ WABetaInfo ಟ್ರಿಕ್ ಅನ್ನು ಕೊಟ್ಟಿದೆ.
ವಾಟ್ಸ್ಆ್ಯಪ್ ವೆಬ್‌ನಲ್ಲಿ ಹೇಗೆ ಸಕ್ರಿಯಗೊಳಿಸಬಹುದು?
- Web.whatsapp.com ಅಧಿಕೃತ ಪೇಜ್‌ನಿಂದ ವಾಟ್ಸ್ಆ್ಯಪ್ ವೆಬ್ ಅನ್ನು ತೆರೆಯಿರಿ
- ವಾಟ್ಸ್ಆ್ಯಪ್‌ಗೆ ಲಾಗಿನ್ ಆದ ನಂತರ ಮೇಲ್ಭಾಗದಲ್ಲಿ ಕಾಣುವ ಬಲತುದಿಯ ಮೂರು ಚುಕ್ಕಿಯ ಮೇಲೆ ಕ್ಲಿಕ್ಕಿಸಬೇಕು. ಅಲ್ಲಿ ಕಾಣುವ ವಾಟ್ಸ್ಆ್ಯಪ್ ವೆಬ್‌ನ ಮೇಲೆ ಕ್ಲಿಕ್ ಮಾಡಿದ ನಂತರ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಆಯ್ಕೆ ಕೇಳುತ್ತದೆ. ಅಲ್ಲಿ ನೀವು ಮೊಬೈಲ್ ಮೂಲಕ ಸ್ಕ್ಯಾನ್ ಪೇರಿಂಗ್ ಮಾಡಿದ ಬಳಿಕ ವಾಟ್ಸ್ಆ್ಯಪ್ ಓಪನ್ ಆಗಲಿದೆ.
- ಒಂದು ಬಾರಿ ನೀವು ಲಾಗಿನ್ ಆದ ಮೇಲೆ ಚಾಟ್ ಭಾಗದ ಖಾಲಿ ಸ್ಪೇಸ್ ಮೇಲೆ ಕರ್ಜರ್ ಇಟ್ಟು ರೈಟ್ ಕ್ಲಿಕ್ ಮಾಡಬೇಕು. ಹಾಗೆ ಮಾಡಿದಾಗ ಬ್ರೌಸರ್ ನಿಮಗೆ ಪೇಜ್‌ನ ಕೋಡ್ ಅನ್ನು ತೋರಿಸುತ್ತದೆ. ಅಲ್ಲಿ ಸ್ಕ್ರಾಲ್ ಮಾಡಬೇಕಿದ್ದು, ಅಲ್ಲಿ Sting –body class=“web” ಅನ್ನು ಹುಡುಕಬೇಕು.
- ಈಗ ನಾವು web ಎಂಬ ಒರಿಜಿನಲ್ ಥೀಮ್ ಅನ್ನು ಬಳಸುತ್ತಿದ್ದೇವೆ. ಆದರೆ, Sting –body class=“web” ಗೆ ಭೇಟಿ ಕೊಟ್ಟಾಗ web ಜಾಗದಲ್ಲಿ web dark ಎಂದು ಟೈಪ್ ಮಾಡಿದಲ್ಲಿ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ. ಆದರೆ, ಒಮ್ಮೆ ನೀವು ಬಳಸಿ ಸೈನ್ ಔಟ್ ಆಗುವುದಾಗಲಿ, ಪೇಜ್ ಅನ್ನು ರೀಫ್ರೆಶ್ ಮಾಡುವುದಾಗಲೀ ಮಾಡಿದರೆ ಪುನಃ ಹಳೇ ಮೋಡ್‌ಗೆ ಬರುತ್ತದೆ.
ಇದನ್ನು ಓದಿ: ವಾಟ್ಸ್ಆ್ಯಪ್, FB, ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್!
ಈ ಬಗ್ಗೆ ಹೇಳಿಕೊಂಡಿರುವ WABetaInfo ನಾವು ಈ ಬಗ್ಗೆ ಅಧ್ಯಯನ ನಡೆಸಿ ಈ ಮಾರ್ಗವನ್ನು ಕಂಡುಕೊಂಡಿದ್ದು, ಉತ್ತಮವಾಗಿ ವರ್ಕ್ ಆಗುತ್ತಿದೆ.
ಗೂಗಲ್ ಆ್ಯಪ್‌ನಲ್ಲಿ ಡಾರ್ಕ್ ಮೋಡ್
ಜಗತ್ತನ್ನೇ ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ, ಎಲ್ಲ ಮಾಹಿತಿಯನ್ನು ಬೆರಳಂಚಿನಲ್ಲೇ ನೀಡುವ ಟೆಕ್ ಲೋಕದ ದಿಗ್ಗಜ ಸರ್ಚ್ ಎಂಜಿನ್ ಗೂಗಲ್ ಸಹ ತನ್ನ ಆ್ಯಪ್‌ನಲ್ಲಿ ಡಾರ್ಕ್ ಮೋಡ್ ಥೀಮ್ ಅನ್ನು ಪರಿಚಯಿಸಿದೆ. ಗೂಗಲ್ ಆ್ಯಪ್‌ಗೆ ಭೇಟಿ ನೀಡಿ. ಅಲ್ಲಿ ಕಾಣುವ ಮೋರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆ ಮೂಲಕ ಸೆಟ್ಟಿಂಗ್ಸ್ ತೆರೆಯಬೇಕು. ಅಲ್ಲಿ ಜನರಲ್ ಆಪ್ಷನ್‌ಗೆ ಹೋಗಿ ಥೀಮ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಲೈಟ್ ಹಾಗೂ ಡಾರ್ಕ್ ಎಂಬ 2 ಆಪ್ಷನ್‌ಗಳು ಕಾಣುತ್ತವೆ. ಅಲ್ಲಿ ಡಾರ್ಕ್ ಥೀಮ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ಡಾರ್ಕ್ ಮೋಡ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಹೊಂದಬಹುದಾಗಿದೆ.
ಇದನ್ನು ಓದಿ: ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!