Asianet Suvarna News Asianet Suvarna News

ಲಸಿಕೆ ಹಾಕಿಸಿಕೊಂಡಿದ್ದೀರಾ? CoWinನಿಂದ ವಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಹೇಗೆ?

CoWin ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದೀರಾ? ನೀವು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಾ? ಲಸಿಕೆ ಹಾಕಿಸಿಕೊಂಡ ಬಳಿಕ ನಿಮಗೆ ಎಸ್ಸೆಮ್ಮೆಸ್ ಬಂದಿದೆ. ಆದರೆ, ಕೋವಿನ್ ಜಾಲತಾಣದಿಂದ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಹೇಗೆಂದು ಗೊತ್ತಾಗುತ್ತಿಲ್ಲವೇ? ಚಿಂತೆ ಬಿಡಿ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳುವುದು ತುಂಬ ಸರಳ. ಇಲ್ಲಿದೆ ಅದರ ಬಗ್ಗೆ ಮಾಹಿತಿ.

How to download vaccination certificate from CoWin? Check details here
Author
Bengaluru, First Published May 13, 2021, 4:33 PM IST

ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಕೋವಿಡ್ ಎರಡನೇ ಅಲೆಗೆ ಕಂಗೆಟ್ಟಿವೆ. ನಿತ್ಯವೂ ಕೋವಿಡ್ ಹೊಸ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇವೆ. ಸಾವಿನ ಸಂಖ್ಯೆಯೂ ನಿಯಂತ್ರಣಕ್ಕೆಸಿಗುತ್ತಿಲ್ಲ. ಕೋವಿಡ್ ಸೋಂಕಿನಿಂದ ಸತ್ತವರ ಪ್ರಮಾಣದಷ್ಟೇ ಬೆಡ್, ಆಕ್ಸಿಜನ್ ಮತ್ತು ವೆಂಟಿಲೆಟರ್ ದೊರೆಯದೆಯೂ ಜನರು ಸಾಯುತ್ತಿದ್ದಾರೆ. ಸರ್ಕಾರವು ಕೋವಿಡ್ ಸೋಂಕು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆಯಾದರೂ ಸಾಗುತ್ತಿಲ್ಲ. ಏತನ್ಮಧ್ಯೆ, ಎಲ್ಲರಿಗೂ ಲಸಿಕೆ ಹಾಕಿಸುವ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ.

ತಜ್ಞರ ಪ್ರಕಾರ ಶೀಘ್ರವೇ ಮೂರನೇ ಅಲೆಯೂ ಭಾರತಕ್ಕೆ ಅಪ್ಪಳಿಸಲಿದೆ. ಈ ಅಪಾಯದಿಂದ ಪಾರಾಗಲು ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವುದು ಪರಿಹಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಲಸಿಕೆ ಹಾಕಿಸಿಕೊಳ್ಳುವ ಸಂಬಂಧ ಸರ್ಕಾರವವು ಕೋವಿನ್(CoWin) ಎಂಬ ವೆಬ್‌ಸೈಟ್ ಆರಂಭಿಸಿದೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ಈ ಜಾಲತಾಣದಲ್ಲಿ  ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕೋವಿನ್ ಮೂಲಕವೇ ನೀವು ಲಸಿಕೆ ಹಾಕಿಸಿಕೊಳ್ಳಲು ಅಪಾಯಿಟ್ಮೆಂಟ್ ತೆಗೆದುಕೊಳ್ಳಬೇಕು. ನಂತರ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಹೀಗೆ ಲಸಿಕೆ ಹಾಕಿಸಿಕೊಂಡ ನಂತರ ಅದರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ನಿಮ್ಮ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಸೃಷ್ಟಿಯಾಗುತ್ತದೆ. ಆದರೆ,  ಬಹಳಷ್ಟು ಮಂದಿಗೆ ಈ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕೆಂಬುದರ ಬಗ್ಗೆ ತಿಳಿದಿರುವುದಿಲ್ಲ. ಆ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

CoWinದಿಂದ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ
ಮೊದಲಿಗೆ  ಅಧಿಕೃತ https://www.cowin.gov.in/home ಜಾಲತಾಣಕ್ಕೆ ಭೇಟಿ ನೀಡಿ. ಬಳಿಕ  Sign In/Register ಬಟನ್ ಮೇಲೆ ಕ್ಲಿಕ್ ಮಾಡಿ. ಇಷ್ಟಾದ ಮೇಲೆ ನೋಂದಣಿಯಾದ ನಿಮ್ಮ ಮೊಬೈಲ್ ನಂಬರ್  ಬಳಸಿಕೊಂಡು ಸೈನ್ ಇನ್ ಆಗಿ. ಸೈನ್ ಇನ್ ಆಗಲು ಒನ್ ಟೈಮ್ ಪಾಸ್ವರ್ಡ್(ಒಟಿಪಿ) ನಮೂದಿಸಬೇಕಾಗುತ್ತದೆ. ಲಾಗಿನ್ ಆದ ಮೇಲೆ ನಿಮ್ಮ ಹೆಸರಿನ ಕೆಳಗೆ ಸರ್ಟಿಫಿಕೇಟ್ ಟ್ಯಾಬ್ ಇರುವುದನ್ನು ಗಮನಿಸಿ. ಆ ಟ್ಯಾಬ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

CoWIN ಮೂಲಕ ಲಸಿಕೆ ಪಡೆಯಲು 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಕಡ್ಡಾಯ

ಆರೋಗ್ಯ ಸೇತು ಆಪ್‌ನಿಂದ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಆರೋಗ್ಯ ಸೇತು ಆಪ್ ಓಪನ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ಸೈನ್ ಇನ್ ಆಗಿ. ಬಳಿಕ ಹೋಮ್ ಸ್ಕ್ರೀನ್ ಮೇಲ್ಗಡೆ ಕಾಣಿಸುವ CoWin ಟ್ಯಾಬ್ ಮೇಲೆ ಟ್ಯಾಪ್ ಮಾಡಿ. ಕ್ಲಿಕ್ ಮಾಡಿದ ಬಳಿಕ, ವ್ಯಾಕ್ಸಿನೇಷನ್ ಸರ್ಟಿಫಿಕೇಟ್  ಆಪ್ಷನ್‌ನಲ್ಲಿ 13 ಸಂಖ್ಯೆಗಳುಳ್ಳ ನಿಮ್ಮ ಬೆನೆಫಿಶಿರಿ ರೆಫರೆನ್ಸ್ ಐಡಿ ನಂಬರ್ ಅನ್ನು ಎಂಟರ್ ಮಾಡಿ. ನಂತರ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ದೊರೆಯುತ್ತದೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವು ಜನವರಿ 16ರಿಂದಲೇ ಆರಂಭವಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಫೆಬ್ರುವರಿ 2ರಿಂದ ಆರಂಭವಾದ ಎರಡನೇ ಹಂತದ ಅಭಿಯಾನದಲ್ಲಿ ಫ್ರಂಟ್‌ಲೈನ್ ವರ್ಕ್‌ರಿಸಿಗೆ ಲಸಿಕೆ ನೀಡಲಾಯಿತು.

ಮಾರ್ಚ್ 1ರಿಂದ 60 ವರ್ಷ ಹಾಗೂ ಮೇಲ್ಪಟ್ಟವ ಸಾಮಾನ್ಯ  ಜನರಿಗೆ ಕೋವಿಡ್ ಲಸಿಕೆ ಹಾಕಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದಾದ ನಂತರ ಏಪ್ರಿಲ್ 1ರಿಂದ  45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ. ಇದರ ಮಧ್ಯೆಯೇ ಮೇ 1ರಿಂದ 18ರಿಂದ 44 ವರ್ಷದೊಳಗಿನವರಿಗೂ ಕೋವಿಡ್ ಲಸಿಕೆ ಅಭಿಯಾನವನ್ನು ಶುರು ಮಾಡಲಾಗಿದೆ.

Follow Us:
Download App:
  • android
  • ios