ವಾಟ್ಸಪ್‌ನಿಂದ ವಿಡಿಯೋ ಕಾಲ್ ಮಾಡಬೇಕಿದ್ದರೆ 8 ಮಂದಿಗಷ್ಟೇ ಕರೆ ಮಾಡಬೇಕಾಗಿತ್ತು. ಈಗ ಬರೋಬ್ಬರಿ 50 ಮಂದಿಗೆ ಒಂದೇ ಬಾರಿ ಗ್ರೂಪ್ ಕಾಲ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ಫೇಸ್ಬುಕ್ ಮೆಸ್ಸೆಂಜರ್‌ನಿಂದ ಸಾಧ್ಯವಾಗಿದೆ. 

ಸೋಷಿಯಲ್ ಮೀಡಿಯಾಗಳಲ್ಲಿ ಮುಂಚೂಣಿಯಲ್ಲಿರುವ ಆ್ಯಪ್‌ಗಳಲ್ಲೊಂದಾದ ಫೇಸ್ಬುಕ್ ತನ್ನ ಬಳಕೆದಾರರಿಗೆ ಸಾಕಷ್ಟು ನೂತನ ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕೊರೋನಾ ಬಳಿಕ ತಂತ್ರಜ್ಞಾನದಲ್ಲೂ ಸಾಕಷ್ಟು ಬದಲಾವಣೆಗಳಾದ ಹಿನ್ನೆಲೆಯಲ್ಲಿ ಬಹುತೇಕ ಕಂಪನಿಗಳು  ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಮೊರೆ ಹೋದವು. ಇದಕ್ಕೋಸ್ಕರ ಹೊಸ ಹೊಸ ವಿಡಿಯೋ ಕಾಲಿಂಗ್ ಆ್ಯಪ್‌ಗಳು ಹುಟ್ಟಿಕೊಂಡವು. ಆಗಲೇ ಇರುವ ಕೆಲವು ವಿಡಿಯೋ ಕಾಲಿಂಗ್ ಆ್ಯಪ್‌ಗಳಲ್ಲಿ (ಜೂಮ್) ತಾಂತ್ರಿಕ ದೋಷ ಹಿನ್ನೆಲೆ ಹ್ಯಾಕಿಂಗ್‌ಗಳ ಸಮಸ್ಯೆಗಳು ಹೆಚ್ಚಾದವು. ಹೀಗೆ ಹ್ಯಾಕಿಂಗ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಸೋಷಿಯಲ್ ಮೀಡಿಯಾದ ದಿಗ್ಗಜ ಆ್ಯಪ್‌ಗಳು, ತಮ್ಮ ಸೇವೆಗಳ ಜೊತೆ ಜೊತೆಗೆ ವಿಡಿಯೋ ಕಾಲಿಂಗ್ ಅವಕಾಶದ ನೂತನ ಫೀಚರ್‌ಗಳನ್ನೂ ಪರಿಚಯಿಸಿದವು. ಹೀಗೆ ಫೇಸ್ಬುಕ್ ಮೊದಲಿಗೆ ತನ್ನ ಮೆಸ್ಸೆಂಜರ್ ಆ್ಯಪ್‌ನಲ್ಲಿ 50 ಮಂದಿ ಗ್ರೂಪ್ ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇಲ್ಲಿ ಫೇಸ್ ಬುಕ್ ಒಡೆತನದಲ್ಲಿ ವಾಟ್ಸಪ್ ಸಹ ಇರುವುದು ಪ್ಲಸ್ ಆಗಿದ್ದು, ಅದರ ಮೂಲಕವೂ ಈಗ “ರೂಮ್” ವಿಡಿಯೋ ಕಾಲಿಂಗ್ ಸೇವೆಯನ್ನು ಪಡೆಯಬಹುದಾಗಿದೆ. ಹಾಗಾದರೆ, 50 ಮಂದಿ ಜೊತೆ ಹೇಗೆ ವಿಡಿಯೋ ಗ್ರೂಪ್ ಕಾಲ್ ಮಾಡಬಹುದು, ಸಮಯದ ನಿಗದಿ ಇದೆಯೇ ಎಂಬಿತ್ಯಾದಿ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನು ಓದಿ: ವಾಟ್ಸಪ್‌ಗೆ ಬಂತು ಮೆಸ್ಸೆಂಜರ್ ರೂಮ್; ಅದನ್ನು ಹೀಗೆ ಬಳಸಿ…! 

ಸಮಯದ ಪರಿಧಿ ಇರದು
ವಾಟ್ಸಪ್ ಮೂಲಕ ಮೆಸ್ಸೆಂಜರ್ ರೂಂನಲ್ಲಿ ವಿಡಿಯೋ ಕಾಲ್ ಮಾಡಿದಲ್ಲಿ ಯಾವುದೇ ಸಮಯದ ಪರಿಧಿ ಇರುವುದಿಲ್ಲ. ಎಷ್ಟು ಸಮಯ ಬೇಕಿದ್ದರೂ ಯಾವುದೇ ಅಡೆತಡೆ ಇಲ್ಲದೆ ಮಾತನಾಡಬಹುದಾಗಿದೆ. ಇದಕ್ಕೆ ಸಮರ್ಪಕ ಇಂಟರ್ನೆಟ್ ವ್ಯವಸ್ಥೆ ಇರಬೇಕಷ್ಟೇ. 

ವಿಡಿಯೋ ಕಾಲಿಂಗ್ ಮಾಡೋದು ಹೀಗೆ…
ಮೊದಲಿಗೆ ವಾಟ್ಸಪ್ ವೆಬ್/ಡೆಸ್ಕ್ ಟಾಪ್‌ಗೆ ಹೋಗಬೇಕು. ಅಲ್ಲಿ ನಿಮ್ಮ ಚಾಟ್ ಲಿಸ್ಟ್ ಬಳಿ ಇರುವ ಅಟ್ಯಾಚ್ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಅಲ್ಲಿ ಕೆಲವು ಆಯ್ಕೆಗಳು ತೆರೆದುಕೊಳ್ಳಲಿದ್ದು, ಅದರಲ್ಲಿ ರೂಮ್ ಆಯ್ಕೆಯೂ ಇರುತ್ತದೆ. ಉಳಿದಂತೆ ಫೋಟೋಗಳು, ವಿಡಿಯೋಗಳು, ಕ್ಯಾಮೆರಾ, ಡಾಕ್ಯುಮೆಂಟ್ ಮತ್ತು ಕಾಂಟ್ಯಾಕ್ಟ್ ಆಯ್ಕೆಗಳು ಸಹ ಇರುತ್ತವೆ. ಆದರೆ, ನೀವಿಲ್ಲಿ ರೂಮ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ವಿಡಿಯೋ ಚಾಟ್‌ಗೆ ಇಲ್ಲಿದೆ ಆಯ್ಕೆಗಳು
ಇಲ್ಲಿ ನೀವು ವೈಯುಕ್ತಿಕ ಇಲ್ಲವೇ ಗ್ರೂಪ್ ಚಾಟ್ ಮಾಡಲು ಆಯ್ಕೆಗಳನ್ನು ಕೊಡಲಾಗಿದ್ದು, ನಿಮಗೆ ಯಾವುದು ಬೇಕು ಎಂಬುದರ ಮೇಲೆ ಆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ವಾಟ್ಸಪ್‌ನಿಂದ ಮೆಸ್ಸೆಂಜರ್ ನತ್ತ
ಇಲ್ಲಿ ಬಹುಮುಖ್ಯವಾಗಿ ಗಮನಿಸುವ ಅಂಶವೆಂದರೆ ಕಂಟಿನ್ಯೂ ಇನ್ ಮೆಸ್ಸೆಂಜರ್ ಮೇಲೆ ಕ್ಲಿಕ್ ಮಾಡಿದಾಗ (ಕ್ರಿಯೇಟ್ ರೂಂ ಆಯ್ಕೆ ಮಾಡುವ ವೇಳೆ) ಲಿಂಕ್ ನಿಮ್ಮನ್ನು ವಾಟ್ಸಪ್ ಸಿಸ್ಟಂನಿಂದ ಹೊರಕ್ಕೆ ಕರೆದೊಯ್ದು ಪ್ರತ್ಯೇಕ ಟ್ಯಾಬ್‌ನಲ್ಲಿ ಪೇಜ್ ತೆರೆದುಕೊಳ್ಳುತ್ತದೆ. ಈ ಮೂಲಕ ವಾಟ್ಸಪ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ಹೀಗಾಗಿ ಎಂಡ್ ಟು ಎಂಡ್ ಎನ್ ಕ್ರಿಪ್ಟಡ್ ಅವಕಾಶ ಇಲ್ಲಿರುವುದಿಲ್ಲ. 

ಇದನ್ನು ಓದಿ: #WorkfromHome ಮಾಡುವಾಗ ಸೈಬರ್ ಕ್ರೈಂ ಬಗ್ಗೆ ಇರಲಿ ಎಚ್ಚರ! 

ಫೇಸ್ಬುಕ್ ನಿಯಮ-ಷರತ್ತುಗಳನ್ವಯ
ವಾಟ್ಸಪ್ ವೆಬ್ ಪುಟದಿಂದ ಪ್ರತ್ಯೇಕಗೊಂಡ ಬಳಿಕ ಫೇಸ್ಬುಕ್‌ನ ನೀತಿ-ನಿಯಮಗಳಿಗೆ ಬಳಕೆದಾರ ಒಳಗಾಗುತ್ತಾನೆ. ಇದರನ್ವಯ ರೂಂ ಫೀಚರ್ ಅನ್ನು ಬಳಸಬೇಕಿದೆ. 

ಮೆಸ್ಸೆಂಜರ್ ಇಲ್ಲದಿದ್ದರೆ?
ಕೆಲವೊಮ್ಮೆ ಮೆಸ್ಸೆಂಜರ್ ಅನ್ನು ಕೆಲವರು ಹೊಂದಿರುವುದಿಲ್ಲ. ಅಂಥವರು ತಮ್ಮ ಫೇಸ್ ಬುಕ್ ಅಕೌಂಟ್‌ನಿಂದ ಲಾಗಿನ್ ಆಗುವ ಮೂಲಕ ವಿಡಿಯೋ ಕಾಲಿಂಗ್‌ನಲ್ಲಿ ಭಾಗಿಯಾಗಬಹುದು. 

ಓಪನ್/ಕ್ಲೋಸ್‌ಗೆ ಅವಕಾಶ
ಇಲ್ಲಿ ಬಳಕೆದಾರರು ಮೆಸ್ಸೆಂಜರ್ ರೂಂ ಅನ್ನು ಓಪನ್ ಹಾಗೂ ಕ್ಲೋಸ್ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.

ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಇರಲ್ಲ
ವಾಟ್ಸಪ್‌ನಲ್ಲಿ ಡೇಟಾ ಹಾಗೂ ಬಳಕೆದಾರರ ಮಾಹಿತಿ ಸುರಕ್ಷತಾ ದೃಷ್ಟಿಯಿಂದ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಫೀಚರ್ ನೀಡಲಾಗಿದೆ. ಇಲ್ಲಿ ನೀವು ವಾಟ್ಸಪ್ ಮೂಲಕ ಲಾಗಿನ್ ಆದರೂ ಬಳಿಕ ಬೇರೆ ಟ್ಯಾಬ್ ಮೂಲಕ ಲಿಂಕ್ ಓಪನ್ ಆಗುವ ಕಾರಣ, ಇಲ್ಲಿ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಸೌಲಭ್ಯವು ಇರುವುದಿಲ್ಲ. 

ಕ್ರಿಯೇಟರ್ ಉಪಸ್ಥಿತಿ ಮುಖ್ಯ
ಇಲ್ಲಿ ರೂಂ ಮೂಲಕ ಗ್ರೂಪ್ ವಿಡಿಯೋ ಕಾಲಿಂಗ್ ಚಟುವಟಿಕೆಯನ್ನು ಕ್ರಿಯೇಟ್ ಮಾಡುವವರಿಂದಲೇ ಕರೆಯನ್ನು ಪ್ರಾರಂಭಿಸಬೇಕಾಗುತ್ತದೆ. 

ಇದನ್ನು ಓದಿ: ಗೂಗಲ್ ಮೀಟ್ ವೇಳೆ ಬ್ಯಾಕ್ ಗ್ರೌಂಡ್ ಶಬ್ದ ವನ್ನು ಮ್ಯೂಟ್ ಮಾಡೋದು ಹೇಗೆ?

ಕ್ರಿಯೇಟರ್‌ಗಿದೆ ಇನ್ & ಔಟ್ ಅವಕಾಶ
ಇಲ್ಲಿ ಬಹುಮುಖ್ಯವಾಗಿ ಕ್ರಿಯೇಟರ್ ಯಾವುದೇ ಸಂದರ್ಭದಲ್ಲಿ ಬೇಕಾದರೂ ಮೀಟಿಂಗ್ ಅನ್ನು ಕೊನೆಗೊಳಿಸಬಹುದು. ಇನ್ನೊಂದೆಡೆ ಗ್ರೂಪ್ ವಿಡಿಯೋ ಕಾಲ್ ನಡೆಯುತ್ತಿರುವ ಮಧ್ಯೆಯೇ ಯಾರನ್ನು ಬೇಕಾದರೂ ಸೇರಿಸುವ ಇಲ್ಲವೇ ತೆಗೆದುಹಾಕುವ ಅಧಿಕಾರ ಕ್ರಿಯೇಟರ್‌ಗಿದೆ.