ಯೂಟ್ಯೂಬ್, ಇನ್‌ಸ್ಟಾ, ಫೇಸ್ಬುಕ್‌ಗೆ ವಿಡಿಯೋ ಹಾಕಲು ಇಲ್ಲಿದೆ ಸೂಪರ್ ಎಡಿಟಿಂಗ್ ಆ್ಯಪ್ಸ್

ಸೋಷಿಯಲ್ ಮೀಡಿಯಾ ದುನಿಯಾದಲ್ಲಿ ಈಗ ವಿಡಿಯೋಗಳದ್ದೇ ಹವಾ. ಯೂಟ್ಯೂಬ್, ಫೇಸ್ಬುಕ್, ಇನ್‌ಸ್ಟಾ ಹೀಗೆ ಹಲವಾರು ಆ್ಯಪ್‌ಗಳಲ್ಲಿ ವಿಡಿಯೋ ಫೀಚರ್‌ಗಳು ಸಾಕಷ್ಟು ಜನಪ್ರಿಯತೆ ಹೊಂದಿವೆ. ಕೆಲವು ವಿಡಿಯೋ ಫೀಚರ್‌ಗಳುಲ್ಲ ಆ್ಯಪ್‌ಗಳೇ ಹುಟ್ಟಿಕೊಂಡಿವೆ. ಅವುಗಳಿಗೂ ಭರ್ಜರಿ ಪ್ರತಿಕ್ರಿಯೆಗಳು ಲಭ್ಯವಾಗುತ್ತಾ ಬರುತ್ತಿವೆ. ಆದರೆ, ಸುಂದರ, ಅಚ್ಚುಕಟ್ಟಾಗಿ ವಿಡಿಯೋವನ್ನು ಎಡಿಟ್ ಮಾಡಿ ಹಾಕುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕಾಗಿ ಹಲವಾರು ಆ್ಯಪ್‌ಗಳು ಸಹ ಈಗ ಬಂದಿದ್ದು, ಅದರಲ್ಲಿ ಜನಪ್ರಿಯತೆಯನ್ನು ಹೊಂದಿರುವ ಕೆಲವು ಆ್ಯಪ್‌ಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.

Here are best editing apps to put a video on YouTube Insta Facebook

ಸಾಮಾಜಿಕ ಜಾಲತಾಣ ಇಂದು ಬೃಹದಾಕಾರವಾಗಿ ಬೆಳೆದಿದೆ. ಅದು ಮಕ್ಕಳಿಂದ ವೃದ್ಧರವರೆಗೂ ವ್ಯಾಪಿಸಿಕೊಂಡಿದೆ. ಕೊರೋನಾ ಈ ಸಂದರ್ಭದಲ್ಲಂತೂ ಇವುಗಳ ಬಳಕೆ ಮಿತಿ ಮೀರಿದೆ ಎಂದರೂ ತಪ್ಪಲ್ಲ. ಲಾಕ್ಡೌನ್ ವರ್ಕ್ ಫ್ರಂ ಹೋಂ, ವಿದ್ಯಾರ್ಥಿಗಳು, ಯುವಕ-ಯುವತಿಯರು, ವಯೋವೃದ್ಧರ ಬಳಿಯೂ ಸ್ಮಾರ್ಟ್ ಫೋನ್‌ಗಳು ಇವೆ.

ಮೊದಲು ಹೆಸರು ಮಾಡಲು, ನಮ್ಮತನವನ್ನು ಬಿಂಬಿಸಿಕೊಳ್ಳಲು, ನಮಗನಿಸಿದ್ದನ್ನು ತೋರ್ಪಡಿಸಲು ಮೊದ ಮೊದಲು ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿದ್ದವು. ಆದರೆ, ಈಗ,,,?

ಕಾಲ ಬದಲಾಗಿದೆ.., ಈಗಂತೂ ಸೋಷಿಯಲ್ ಮೀಡಿಯಾಗಳು ದುಡ್ಡು ಮಾಡುವ ಕ್ಷೇತ್ರವಾಗಿ ಸಹ ಬದಲಾಗಿದೆ. ಹೆಸರಿನ ಜೊತೆಗೆ ಕಾಸನ್ನೂ ಕೊಡುತ್ತದೆ. ಅದಕ್ಕೆ ಹಲವಾರು ದಾರಿಗಳು, ಮಾರ್ಗಗಳು ಇವೆ. ಅವುಗಳಲ್ಲಿ ವಿಡಿಯೋಗಳನ್ನು ಹಾಕುವುದೂ ಒಂದು. ಇವುಗಳ ವೀಕ್ಷಣೆಗೆ ತಕ್ಕಂತೆ ಹಣ ಬಂದು ಖಾತೆಗೆ ಬೀಳುತ್ತದೆ.

ಆದರೆ, ಹಾಕುವ ವಿಡಿಯೋ ಸಹ ಗುಣಮಟ್ಟದ್ದಾಗಿರಬೇಕಲ್ಲ. ಬೇಡವಾದ್ದನ್ನೆಲ್ಲ ಎಡಿಟ್ ಮಾಡಿ ಹಾಕಬೇಕಲ್ಲವಾ..? ಅದಕ್ಕಾಗಿ ಬೇರೆಯವರ ಸಹಾಯ ತೆಗೆದುಕೊಳ್ಳದೇ ನೀವೇ ವಿಡಿಯೋ ಎಡಿಟ್ ಮಾಡಿಕೊಳ್ಳಲು ಇಂದು ಹಲವಾರು ಆ್ಯಪ್‌ಗಳು ಬಂದಿವೆ. ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದಾದ ಬೆಸ್ಟ್ ಆ್ಯಪ್‌ಗಳ ಬಗ್ಗೆ ನೋಡೋಣ. ನೆನಪಿಡಿ, ತುಂಬಾ ಫೀಚರ್‌ಗಳು ಬೇಕೆಂದರೆ ನೀವು ಹಣ ಕಟ್ಟಿ ಆ ಸೇವೆಗಳನ್ನು ಪಡೆಯಬೇಕಾಗುತ್ತದೆ. 

ಇದನ್ನು ಓದಿ: ಏಕಕಾಲಕ್ಕೆ 4 ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಕೆ ಸೌಲಭ್ಯ!

ಗೋಪ್ರೋ ಕ್ವಿಕ್ ವೀಡಿಯೊ ಎಡಿಟರ್, ಮೇಕರ್ ( GoPro )
ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವ ವಿಡಿಯೋ ಮಾಡುವಲ್ಲಿ ನೀವು ಹೊಸಬರಾಗಿದ್ದರೆ ನಿಮಗೆ ಈ ಆ್ಯಪ್ ಬಹಳ ಸಹಕಾರಿ. ಜೊತೆಗೆ ಇದರಲ್ಲಿ ಸಣ್ಣ ಸಣ್ಣ ವಿಡಿಯೋಗಳನ್ನು ಸುಲಭವಾಗಿ ರಚಿಸಬಹುದು. ಆದರೆ, ಇದರಲ್ಲಿ ಹೆಚ್ಚಿನ ಫೀಚರ್‌ಗಳನ್ನು ಮಾತ್ರ ನಿರೀಕ್ಷಿಸಬೇಡಿ. ಇರುವ ಫೀಚರ್‌ನಲ್ಲಿ ನಿಮಗೆ ಬೆಸ್ಟ್ ಅನ್ನು ಕೊಡುತ್ತದೆ. ನಿಮಗೆ ವಿಡಿಯೋ ಎಡಿಟಿಂಗ್‌ನ ಪ್ರಾಥಮಿಕ ಹಂತವನ್ನು ಕಲಿಯಲು ಇದು ಸಹಾಯಕವಾಗಿದೆ.

ಆ್ಯಕ್ಷನ್ ಡೈರೆಕ್ಟರ್ ವೀಡಿಯೊ ಎಡಿಟರ್ ( ActionDirector )

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿ ಈಗ ಹೆಚ್ಚು ಜನಪ್ರಿಯತೆಯಲ್ಲಿರುವ ವಿಡಿಯೋ ಆ್ಯಪ್‌ಗಳಲ್ಲಿ ಆ್ಯಕ್ಷನ್ ಡೈರೆಕ್ಟರ್ ವೀಡಿಯೊ ಎಡಿಟರ್ ಆ್ಯಪ್ ಸಹ ಒಂದು. ಇದರ ಬಳಕೆ ಸರಳ ಹಾಗೂ ಸುಲಭವಾಗಿದೆ. ಯಾರು ಬೇಕಿದ್ದರೂ ಬಹುಬೇಗ ಕಲಿತುಬಿಡುವಂತಹ ಫೀಚರ್ ಅನ್ನು ಇದು ಹೊಂದಿದೆ. ಹೀಗಾಗಿ ಇದೊಂದು ಒಳ್ಳೆಯ ವಿಡಿಯೋ ಎಡಿಟಿಂಗ್ ಟೂಲ್ ಆಗಿದೆ. 

ಇದನ್ನು ಓದಿ: ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಕೈನೆಮಾಸ್ಟರ್ ವೀಡಿಯೊ ಎಡಿಟರ್ (Kinemaster)

ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಬಳಸಬಹುದಾದ ಉತ್ತಮ ಆ್ಯಪ್‌ಗಳಲ್ಲಿ ಕೈನೆಮಾಸ್ಟರ್ ಸಹ ಒಂದು. ಇದನ್ನು ಕ್ರೋಮ್ ಓಎಸ್, ಐಫೋನ್ ಮತ್ತು ಐಪ್ಯಾಡ್‌ಗಳಲ್ಲಿಯೂ ಬಳಸಬಹುದಾಗಿದೆ. ಇದರಲ್ಲಿ ವಿಶಿಷ್ಟ ಮಾದರಿಯ ಎಡಿಟಿಂಗ್ ಸೆಟ್ಟಿಂಗ್‌ಗಳಿದ್ದು, ಉತ್ತಮ ಗುಣಮಟ್ಟದ ವಿಡಿಯೋವನ್ನು ಇದರ ಮೂಲಕ ಪಡೆಬಹುದಾಗಿದೆ. ಆದರೆ, ಇಲ್ಲೊಂದು ಸಮಸ್ಯೆ ಇದೆ. ಈ ಕೈನೆಮಾಸ್ಟರ್ ಮೂಲಕ ನೀವು ಚಿತ್ರೀಕರಿಸಿದ ಪ್ರತಿಯೊಂದು ವಿಡಿಯೋಗೂ ಸಹ ವಾಟರ್ ಮಾರ್ಕ್ ಇರುತ್ತದೆ. ವಾಟರ್ ಮಾರ್ಕ್ ಬೇಡವೆಂದರೆ, ಹೆಚ್ಚಿನ ಫೀಚರ್ ಗಳು ಬೇಕೆಂದರೆ ನೀವಿದಕ್ಕೆ ಹಣ ಕಟ್ಟಬೇಕು. ವಾಟರ್ ಮಾರ್ಕ್ ಇದ್ದರೇನಂತೆ ಎಂಬ ಮನಸ್ಥಿತಿ ನಿಮ್ಮದಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. 

ಪವರ್ ಡೈರೆಕ್ಟರ್ ಎಂಬ ವಿಡಿಯೋ ಮೇಕರ್, ವಿಡಿಯೋ ಎಡಿಟರ್ ( PowerDirector )

ವಿಡಿಯೋ ಮೇಕಿಂಗ್ ಹಾಗೂ ಎಡಿಟಿಂಗ್‌ನಲ್ಲಿ ಒಳ್ಳೇ ಫೀಚರ್ ಹೊಂದಿರುವ ಆ್ಯಪ್‌ಗಳಲ್ಲಿ ಪವರ್ ಡೈರೆಕ್ಟರ್ ಸಹ ಒಂದಾಗಿದೆ. ಈ ಆ್ಯಪ್ ಮೂಲಕ ನೀವು 4k ವಿಡಿಯೋಗಳ ಎಡಿಟಿಂಗ್ ಹಾಗೂ ಎಕ್ಸ್ಪೋರ್ಟ್ ಮಾಡಬಹುದಾಗಿದೆ. ಅಲ್ಲದೆ, ಕ್ರೋಮಾ ಕೀ ಆಯ್ಕೆ ಮೂಲಕ ನೀವು ವೀಡಿಯೊ ಎಡಿಟಿಂಗ್ ಫೀಚರ್‌ಗಳನ್ನೂ ಸಹ ಪಡೆಯಬಹುದಾಗಿದೆ. 

ಇನ್‌ಶಾಟ್ ಎಂಬ ವಿಡಿಯೋ ಎಡಿಟರ್ ಮತ್ತು ಮೇಕರ್ ( Inshot )

ಈ ಇನ್‌ಶಾಟ್ ಆ್ಯಪ್‌ನ ಕಲಿಕೆ ನಿಮಗೆ ಬಹಳ ಸುಲಭ ಮತ್ತು ಸರಳವಾಗಿದೆ. ಇದನ್ನು ಕಲಿಯಲು ಸಹ ನಿಮಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಇದನ್ನು ಯೂಸರ್ ಫ್ರೆಂಡ್ಲಿ ಎಂದೂ ಹೇಳಬಹುದಾಗಿದೆ. ಇದನ್ನು ಹೆಚ್ಚಾಗಿ ಸೋಷಿಯಲ್ ಮೀಡಿಯಾ ಉದ್ದೇಶಕ್ಕೆ ಬಳಸುವವರೇ ಹೆಚ್ಚು. ಇದರಲ್ಲಿ ನೀವು ತ್ವರಿತ ವಿಡಿಯೋಗಳನ್ನು ರಚಿಸಬಹುದಾಗಿದೆ.

ಇದನ್ನು ಓದಿ: ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್

ಇದಲ್ಲದೆ ಇನ್ನೂ ಹಲವು ಉತ್ತಮ ಆ್ಯಪ್‌ಗಳಿದ್ದು, ಬಳಕೆಗೆ ಉತ್ತಮವಾಗಿವೆ. ಆ್ಯಪಲ್ ಫೋನ್ ಅಥವಾ ಐಫೋನ್ ಬಳಕೆದಾರರಿಗೆ ಕ್ಲಿಪ್ಸ್ ( Clips ), ಆ್ಯಂಡ್ರಾಯ್ಡ್, ವಿಂಡೋಸ್, ಮ್ಯಾಕ್ ಬಳಕೆದಾರರಿಗೆ ಅಡೋಬ್ ಪ್ರೀಮಿಯರ್ ರಶ್ ( Adobe Premiere Rush ) ಸೇರಿದಂತೆ ವಿಮೋ ಕ್ರಿಯೇಟ್ (Vimeo Create), ಫಿಲ್ಮೋರಾಗೋ ( FilmoraGo ), ಫಿಲ್ಮರ್ (Filmr) ಎಂಬಿತ್ಯಾದಿ ಆ್ಯಪ್‌ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. 

Latest Videos
Follow Us:
Download App:
  • android
  • ios