ಹೊಚ್ಚ ಹೊಸ ಫೀಚರ್ಸ್ ಪರಿಚಯಿಸಿದ ವ್ಯಾಟ್ಸ್ಆ್ಯಪ್ ಗ್ರೂಪ್ ಪೋಲ್, ಕಮ್ಯೂನಿಟಿ ಹಾಗೂ ರೀಡ್ ಲೇಟರ್ ಫೀಚರ್ಸ್ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್‌ನಿಂದ ಬಳಕೆಗಾರರು ಥ್ರಿಲ್  

ಕ್ಯಾಲಿಫೋರ್ನಿಯಾ(ಮಾ.07): ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ನೂತನ ಪ್ರೋಫೈಲ್, ಮಲ್ಟಿ ಡಿವೈಸ್ ಬೆಂಬಲ, ಹಣ ಪಾವತಿ ಸೇರಿದಂತೆ ಹಲವು ಫೀಚರ್ಸ್ ಈಗಾಗಲೇ ಪರಿಚಯಿಸಲಾಗಿದೆ. ಇದೀಗ ಮೆಟಾ ಮಾಲೀಕತ್ವದ ಮೆಸೆಜಿಂಗ್ ಆ್ಯಪ್ ವ್ಯಾಟ್ಸ್‌ಆ್ಯಪ್ ಹೊಸ ಫೀಚರ್ಸ್ ಪರಿಚಯಿಸುತ್ತಿದೆ. ಹೊಸ ಫೀಚರ್ಸ್‌ನಿಂದ ಬಳಕೆದಾರರು ಗ್ರೂಪ್ ಚಾಟಿಂಗ್‌ನಲ್ಲಿ ಮತ ಚಲಾಯಿಸಲು ಸಾಧ್ಯವಿದೆ. 

ಗ್ರೂಪ್ ಚಾಟಿಂಗ್‌ನಲ್ಲಿ ಪೋಲ್, ಗ್ರೂಪ್ ಅಡ್ಮಿನ್ ನಿಯಂತ್ರಣದಲ್ಲಿ ಗೂಪ್, ಫೇಸ್‌ಬುಕ್ ರೀತಿಯಲ್ಲಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಲು ಫೀಚರ್ಸ್, ರೀಡ್ ಲೇಟರ್ ಫೀಚರ್ಸ್ ವ್ಯಾಟ್ಸ್ಆ್ಯಪ್ ಪರಿಚಯಿಸುತ್ತಿದೆ. ಬೇಟಾ ವರ್ಶನ್‌ನಲ್ಲಿ ನೂತನ ಫೀಚರ್ಸ್ ನೀಡಲಾಗಿದ್ದು ಶೀಘ್ರದಲ್ಲೇ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಸಿಗಲಿದೆ.

ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ವಿರುದ್ಧದ ಕೇಸ್‌ ವಜಾಕ್ಕೆ ನಿರಾಕರಿಸಿದ ಅಲಹಾಬಾದ್‌ ಹೈಕೋರ್ಟ್

ಗ್ರೂಪ್ ಪೊಲ್:
ನೂತನ ಫೀಚರ್ಸ್‌ನಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರು ಗ್ರೂಪ್ ಚಾಟ್‌ನಲ್ಲಿ ಮತ ಚಲಾಯಿಸಲು ಸಾಧ್ಯವಿದೆ. ಒಂದು ವಿಚಾರದ ಕುರಿತು ಮತ ಮತ ಚಲಾವಣೆಗೆ ಅವಕಾಶವಿದೆ. ಈ ಮತ ಚಲಾವಣೆಯಲ್ಲಿ ಬಳಕೆದಾರರು ತಮ್ಮ ತಮ್ಮ ಆಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿದೆ. ಬಳಿಕ ಪರ ವಿರೋಧ ಶೇಕಡಾವಾರು, ಪ್ರತಿಶತ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.ಗುಂಪಿನಲ್ಲಿ ಮಾಡುವ ಮತ ಚಲಾವಣೆ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್‍‌ನೊಂದಿಗೆ ಸಂರಕ್ಷಿಸಲ್ಪಡುತ್ತದೆ. 

ಕಮ್ಯೂನಿಟಿ:
ಗ್ರೂಪ್ ಮತಚಲಾವಣೆ ಫೀಚರ್ಸ್ ಜೊತೆ ವ್ಯಾಟ್ಸ್ಆ್ಯಪ್ ಮತ್ತೊಂದು ಫೀಚರ್ಸ್ ಪರಿಚಯಿಸುತ್ತಿದೆ. ಕಮ್ಯೂನಿಟಿ ಮಾರ್ಗೂಸೂಚಿಯಲ್ಲಿ ಕೆಲ ಬದಲಾವಣ ತರುತ್ತಿದೆ. ಇದರಿಂದ ಗ್ರೂಪ್ ಆಡ್ಮಿನ್‌ಗೆ ಗ್ರೂಪ್‌ನಲ್ಲಿನ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಲು ಅಧಿಕಾರ ಸಿಗಲಿದೆ. ಡಿಸ್ಕಾರ್ಡ್ ಆ್ಯಪ್‌ನಲ್ಲಿರವು ಈ ಫೀಚರ್ಸ್ ಇದೀಗ ವ್ಯಾಟ್ಸ್‌ಆ್ಯಪ್‌ನಲ್ಲಿ ಬರಲಿದೆ.

Ukraine Entrepreneurs ನೀವು ಬಳಸುವ ಪೇಪಾಲ್, ವಾಟ್ಸಾಪ್, ಸ್ನ್ಯಾಪ್‌ಚಾಟ್ ಶುರು ಮಾಡಿದವರು ಉಕ್ರೇನಿಯರು!

ಸಂದೇಶಕ್ಕೆ ಪ್ರತಿಕ್ರಿಯೆ
ಸದ್ಯ ವ್ಯಾಟ್ಸ್‌ಆ್ಯಪ್‌ನಲ್ಲಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಲು ಇಮೋಜಿಗಳು ಲಭ್ಯವಿದೆ. ಆದರೆ ಹೊಸ ಫೀಚರ್ಸ್‌ನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿರುವಂತೆ ಇಮೇಜ್ ಮೂಲಕ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿದೆ. ಇದು ಗ್ರೂಪ್ ಅಥವಾ ವೈಯುಕ್ತಿಯವಾಗಿ ಬಳಕೆ ಮಾಡಬಹುದು.

ರೀಡ್ ಲೇಟರ್
ಈ ಫೀಚರ್ಸ್‌ನಲ್ಲಿ ಸಂದೇಶವನ್ನು ರೀಡ್ ಲೇಟರ್(ನಂತರ ಓದಿ) ಆಯ್ಕೆ ಲಭ್ಯವಾಗಲಿದೆ. ಇದರಿಂದ ಸಂದೇಶಗಳನು ಆರ್ಕೈವ್‌ನಲ್ಲಿ ಸಂಗ್ರವಾಗಲಿದೆ. ಇದರಿಂದ ಬಳಕೆದಾರರಿಗೆ ನೊಟಿಫಿಕೇಶನ್ ಕಿರಿಕಿರಿ ತಪ್ಪಲಿದೆ. ಸಮಯ ಇಲ್ಲದಿರುವಾಗ ರೀಡ್ ಲೇಟರ್ ಆಯ್ಕೆ ಮಾಡಿಕೊಂಡರೆ ಯಾವುದೇ ಅಡಚಣೆಯಾಗುವುದಿಲ್ಲ.

ವಾಟ್ಸಾಪ್‌ನಲ್ಲೇ ಉಬರ್‌ ಕಾರ್‌ ಬುಕ್ಕಿಂಗ್‌
ಉಬರ್‌ ಹಾಗೂ ವಾಟ್ಸಾಪ್‌ ಗುರುವಾರ ಸಹಭಾಗಿತ್ವವನ್ನು ಘೋಷಿಸಿಕೊಂಡಿದ್ದು,ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸಾಪ್‌ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್‌ ಚಾಟ್‌ನಲ್ಲೇ ನೋಂದಣಿ, ರೈಡ್‌ ಬುಕಿಂಗ್‌, ಹಾಗೂ ಪ್ರಯಾಣದ ರಸೀದಿಯನ್ನು ಪಡೆದುಕೊಳ್ಳಬಹುದಾಗಿದೆ. ಪರೀಕ್ಷಾರ್ಥವಾಗಿ ಆರಂಭಿಕ ಹಂತದಲ್ಲಿ ಲಖನೌದಲ್ಲಿ ಈ ಸೇವೆಯನ್ನು ಆರಂಭಿಸುತ್ತಿದ್ದು, ಕೆಲವೇ ದಿನಗಳಲ್ಲಿ ದೇಶದಾದ್ಯಂತ ಎಲ್ಲ ನಗರಗಳಲ್ಲಿ ಈ ಸೇವೆಯನ್ನು ವಿಸ್ತರಿಸಲಾಗುವುದು. ಸದ್ಯ ಉಬರ್‌ನ್ನು ಬುಕಿಂಗ್‌ಗಾಗಿ ಇಂಗ್ಲೀಷ್‌ ಬಳಕೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಭಾಷೆಗಳಲ್ಲೂ ಬುಕಿಂಗ್‌ ಸೌಲಭ್ಯ ಒದಗಿಸಲಾಗುವುದು.

ಭಾರತದ 17.5 ಲಕ್ಷ ವಾಟ್ಸಾಪ್‌ ಖಾತೆಗಳು ಬ್ಯಾನ್‌
ಐಟಿ ನಿಯಮ 2021ರ ಅನುಸಾರವಾಗಿ ನವೆಂಬರ್‌ ತಿಂಗಳಿನಲ್ಲಿ ಭಾರತದಲ್ಲಿ 17.5 ಲಕ್ಷ ವಾಟ್ಸಾಪ್‌ ಖಾತೆಗಳನ್ನು ನಿಷೇಧಿಸಲಾಗಿದೆ. ಅಲ್ಲದೇ 602 ಕುಂದುಕೊರತೆಗಳ ವರದಿ ಸ್ವೀಕರಿಸಿದ್ದು, ಅವುಗಳಲ್ಲಿ 36 ವಿಷಯಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ತಿಳಿಸಿದೆ.ಭಾರತದಲ್ಲಿ 40 ಕೋಟಿಗೂ ಅಧಿಕ ವಾಟ್ಸಾಪ್‌ ಬಳಕೆದಾರರಿದ್ದಾರೆ. ಹೀಗಾಗಿ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್‌ ಮಾಧ್ಯಮದ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.