Asianet Suvarna News Asianet Suvarna News

Google Play store ನಿಂದ 12 ಜನಪ್ರಿಯ Apps Deleteಗೆ ಸೂಚನೆ

ಮಾಲ್‌ ಪ್ರಾಕ್ಟೀಸ್ ಕಾರಣದಿಂದ ಗೂಗಲ್ ಪ್ರತಿ ಬಾರಿ ಹಲವು ಆ್ಯಪ್‌ಗಳನ್ನು ನಿಷೇಧಿಸುತ್ತದೆ. ಇದೀಗ ಗೂಗಲ್ ಜನಪ್ರಿಯ 12 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಿದೆ. ಇತ್ತ ಬಳಕೆದಾರರು ಈ ಆ್ಯಪ್ ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಲು ಸೂಚಿಸಿದ್ದಾರೆ.

Google removes 12 popular apps from play store ask user to delete immediate ckm
Author
First Published Feb 3, 2023, 7:28 PM IST

ನವದೆಹಲಿ(ಫೆ.03): ಅಪಾಯಕಾರಿ, ಬಳಕೆದಾರರನ್ನು ವಂಚಿಸುವ, ಮೋಸದ ಬಲೆಗೆ ಬೀಳಿಸುವ ಆ್ಯಪ್‌ಗಳ ಮೇಲೆ ಗೂಗಲ್ ಪ್ರತಿ ಬಾರಿ ಸವಾರಿ ಮಾಡಿ ಬ್ಯಾನ್ ಮಾಡುತ್ತದೆ. ಇದೀಗ ಇದೇ ರೀತಿ ಬಳಕೆದಾರರಿಗೆ ಅಪಾಯ ತಂದೊಡ್ಡಲ್ಲ ಬಲ 12 ಜನಪ್ರಿಯ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ನಿಷೇಧಿಸಿದೆ. ಈ ಆ್ಯಪ್‌ಗಳು ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಜನಪ್ರಿಯ ಆ್ಯಪ್‌ಗಳು ಹಲವು ಭರವಸೆ ನೀಡಿ ಬಳಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದೆ. ಈ ಆ್ಯಪ್‌ಗಳಲ್ಲಿನ ಲೋಪ ಪತ್ತೆ ಹಚ್ಚಿದ ಗೂಗಲ್ 12 ಆ್ಯಪ್‌ಗಳನ್ನು ಪ್ಲೋ ಸ್ಟೋರ್‌ನಿಂದ ತೆಗೆದು ಹಾಕಿದೆ. ಬಹುತೇಕ ಗೇಮಿಂಗ್ ಹಾಗೂ ಫಿಟ್ನೆಸ್ ಆ್ಯಪ್‌ಗಳಾಗಿದೆ.

ಗೋಲ್ಡನ್ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲಾಕ್‌ಜಾಕ್, ಅನ್‌ಲಿಮಿಟೆಡ್ ಸ್ಕೋರ್, ಬಿಗ್ ಡಿಸಿಶನ್, ಜೆವೆಲ್ ಸೀ, ಲಕ್ಸ್ ಫ್ರೂಟ್ಸ್ ಗೇಮ್, ಲಕ್ಕಿ ಕ್ಲವರ್, ಕಿಂಗ್ ಬ್ಲಿಡ್ಜ್, ಲಕ್ಕಿ ಸ್ಟೆಪ್ಸ್ ಹಾಗೂ ವಾಕಿಂಗ್ ಜಾಯ್ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದೆ. ಈಗಾಗಲೇ ಈ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.  

Google ban apps ವೈಯುಕ್ತಿಕ ಮಾಹಿತಿ ಕದಿಯುತ್ತಿದ್ದ 10ಕ್ಕೂ ಹೆಚ್ಚು ಆ್ಯಪ್ ನಿಷೇಧಿಸಿದ ಗೂಗಲ್!

ಬಳಕೆದಾರರು ಫಿಟ್ನೆಸ್ ಕುರಿತು ಆ್ಯಪ್‌ಗಳನ್ನು ಬಳಸುವಾಗ ಹಲವು ಭರವಸೆಗಳನ್ನು ನೀಡಿದೆ. ಇದರ ಜೊತೆಗೆ ಬಳಕೆದಾರರಿಗೆ ಹಲವು ಚಟುವಟಿಕೆಗಳನ್ನು ನೀಡಿ ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಳಕೆದಾರರಿಗೆ ವಂಚಿಸಲಾಗಿದೆ. ರಿವಾರ್ಡ್ ಬಳಕೆ ಮಾಡುವ ವೇಳೆ ಬಳಕೆದಾರರನ್ನು ಬ್ಲಾಕ್ ಮಾಡುವ ಅಥವಾ ಇತರ ವೆಬ್‌ಸೈಟ್‌ಗೆ ಕೊಂಡೊಯ್ಯವ ಆ್ಯಪ್‌ಗಳು ಬಳಕೆದಾರರಿಗೆ ಅಪಾಯ ತಂದೊಡ್ಡಲಿದೆ ಎಂದು ಗೂಗಲ್ ಎಚ್ಚರಿಸಿದೆ. ಹೀಗಾಗಿ ಈಗಾಗಲೇ ಡೌನ್ಲೋಡ್ ಮಾಡಿಕೊಂಡಿರುವ ಬಳಕೆದಾರರು ತಕ್ಷಣೇ ಈ ಆ್ಯಪ್ ಡಿಲೀಟ್ ಮಾಡಲು ಸೂಚನೆ ನೀಡಿದೆ. 

ಈ ಆ್ಯಪ್ ಪೈಕಿ ಕೆಲ ಆ್ಯಪ್‌ಗಳು ಬಳಕೆದಾರರನ್ನು ಇತರ ವೆಬ್‌ಸೈಟ್, ಇತರ ಮಾಲ್‌ವೇರ್ ಡೌನ್ಲೋಡ್ ಮಾಡಿಸುತ್ತಿದೆ. ಇದರಿಂದ ವಂಚಕ ಆ್ಯಪ್‌ಗಳು ಬಳಕೆದಾರರ ಫೋನ್ ಮೂಲಕ ವೈಯುಕ್ತಿಕ ಮಾಹಿತಿ ಕದಿಯಲಿದೆ. ಇಷ್ಟೇ ಅಲ್ಲ ಬಳಕೆದಾರಿಗೆ ಅತೀವ ಅಪಾಯ ತಂದೊಡ್ಡಲಿದೆ. ಹೀಗಾಗಿ ನಿಷೇಧಿಸಿರುವ ಆ್ಯಪ್‌ಗಳ ಬಳಕೆ ನಿಲ್ಲಿಸಿ ಡಿಲೀಟ್ ಮಾಡಿ ಎಂದು ಗೂಗಲ್ ಸೂಚಿಸಿದೆ.

ಭಾರತದಲ್ಲಿ ಆಲಿಬಾಬ, ಮ್ಯಾಂಗೋ ಟಿವಿ ಸೇರಿದಂತೆ 43 ಮೊಬೈಲ್ ಆ್ಯಪ್ ಬ್ಯಾನ್!

ಆ್ಯಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಬೇರೆ ಸಚ್‌ರ್‍ ಇಂಜಿನ್‌ಗೆ ಅವಕಾಶ: ಗೂಗಲ್‌
 ಭಾರತದಲ್ಲಿ ಆ್ಯಂಡ್ರಾಯ್ಡ್‌ ಆಧರಿತ ಸ್ಮಾರ್ಚ್‌ಫೋನ್‌ ಪೈಕಿ ಶೇ.97ರಷ್ಟುಮೊಬೈಲ್‌ಗಳಲ್ಲಿ ತನ್ನದೇ ಸಚ್‌ರ್‍ ಎಂಜಿನ್‌ ಕಡ್ಡಾಯವಾಗಿ ಅಳವಡಿಸುವ ಮೂಲಕ ಪಾರಮ್ಯ ಮೆರೆಯುತ್ತಿದ್ದ ಗೂಗಲ್‌, ಕೊನೆಗೂ ಈ ಪದ್ಧತಿ ಕೈಬಿಡಲು ನಿರ್ಧರಿಸಿದೆ. ಸ್ಮಾರ್ಚ್‌ಫೋನ್‌ಗಳಲ್ಲಿ ತನ್ನದೇ ಸಚ್‌ರ್‍ ಎಂಜಿನ್‌ ಮತ್ತು ಕಡ್ಡಾಯ ಆ್ಯಪ್‌ಗಳ ಬಳಕೆ ಮೂಲಕ ಗೂಗಲ್‌ ಸಂಸ್ಥೆ ತನ್ನ ಪಾರಮ್ಯವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್‌ಗೆ 2000 ಕೋಟಿ ರು.ಗೂ ಹೆಚ್ಚಿನ ದಂಡ ವಿಧಿಸಿತ್ತು. ಇದಕ್ಕೆ ತಡೆ ನೀಡಲು ಸುಪ್ರೀಂಕೋರ್ಚ್‌ ನಿರಾಕರಿಸಿದ ಬೆನ್ನಲ್ಲೇ ಗೂಗಲ್‌ ಈ ನಿರ್ಧಾರ ಪ್ರಕಟಿಸಿದೆ.

Follow Us:
Download App:
  • android
  • ios