ನವದೆಹಲಿ(ನ.24):  ಕೇಂದ್ರ ಸರ್ಕಾರ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ಮುಂದುವರಿಸಿದೆ. ಜೂನ್ ತಿಂಗಳಲ್ಲಿ ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಇದೀಗ 43 ಮೊಬೈಲ್ ಆ್ಯಪ್ ಬ್ಯಾನ್ ಮಾಡಿದೆ.  ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಧಕ್ಕೆ ತರುವ ಕಾರಣದಿಂದ ಚೀನಾ ಮೂಲಕ 43 ಮೊಬೈಲ್ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ. ಭಾರತದ ರಕ್ಷಣೆ, ರಾಜ್ಯದ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿರುವ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಆಲಿಬಾಬ, ಮ್ಯಾಂಗೋ ಟಿವಿ, ವಿ ಟಿವಿ, ವಿ ವರ್ಕ್ ಫಾರ್ ಚೀನಾ, ಆಲಿ ಎಕ್ಸ್‌ಪ್ರೆಸ್, ಸ್ನಾಕ್ ವಿಡಿಯೋ, ಕ್ಯಾಮ್ ಕಾರ್ಡ್, ವಿ ಡೇಟ್, ಡಿಂಗ್ ಟಾಕ್, ಹ್ಯಾಪಿ ಫಿಶ್ ಸೇರಿದಂತೆ ಚೀನಾದ 43 ಆ್ಯಪ್ ಬ್ಯಾನ್ ಮಾಡಲಾಗಿದೆ. 

ಜೂನ್ 29 ರಂದು ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡಿತ್ತು. ಟಿಕ್‌ಟಾಕ್, ಯುಸಿ ಬ್ರೌಸರ್, ವಿ ಚಾಟ್, ಕ್ಯಾಮ್ ಸ್ಕಾನರ್ ಸೇರಿದಂತೆ ಪ್ರಮುಖ ಆ್ಯಪ್‌ಗಳು ಬ್ಯಾನ್ ಆಗಿತ್ತು. ಇನ್ನು ಸೆಪ್ಟೆಂಬರ್ 2 ರಂದು 118 ಆ್ಯಪ್ ಬ್ಯಾನ್ ಮಾಡಿತ್ತು. ಈ ಮೂಲಕ ಹಂತ ಹಂತವಾಗಿ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ನಡೆಸಿತ್ತು. ಇದೀಗ ಮತ್ತೆ ಚೀನಾ ಮೇಲೆ ಕೇಂದ್ರ ಸರ್ಕಾರ ಡಿಜಿಟಲ್ ಸ್ಟ್ರೈಕ್ ನಡೆಸಿದೆ.