10 ಮಿಲಿಯನ್ ಡೌನ್ಲೋಡ್ ಕಂಡಿದ್ದ ಮುಸ್ಲಿಮ್ ಪ್ರೇಯರ್ ಆ್ಯಪ್ ಬ್ಯಾನ್ ಬಾರ್‌ಕೋಡ್ ಸ್ಕಾನ್, ಹೈವೇ ಸ್ಪೀಡ್ ಟ್ರಾಪ್ ಸೇರಿದಂತೆ ಹಲವು ಆ್ಯಪ್ ಬ್ಯಾನ್ ಡೇಟಾ ಸೋರಿಕೆ ಕಾರಣ ಗೂಗಲ್ ಪ್ಲೇ ಸ್ಟೋರ್‌ನಿಂದ ಬ್ಯಾನ್

ನವದೆಹಲಿ(ಏ.11): ವೈಯುಕ್ತಿ ಮಾಹಿತಿ ಕದಿಯುವಿಕೆ, ಸೋರಿಕೆ ಮಾಡುವ ಆ್ಯಪ್ ವಿರುದ್ಧ ಗೂಗಲ್ ಸಮರ ಮುಂದುವರಿದಿದೆ. ಇದೀಗ 10ಕ್ಕೂ ಹೆಚ್ಚು ಜನಪ್ರಿಯ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದೆ. ಬಳಕೆದಾರರ ವೈಯುಕ್ತಿ ಮಾಹಿತಿ ಕದಿಯುತ್ತಿದ್ದ ಕಾರಣ ಗೂಗಲ್ ಕಠಿಣ ಕ್ರಮ ಕೈಗೊಂಡಿದೆ. 

10 ಮಿಲಿಯನ್ ಡೌನ್ಲೋಡ್ ಕಂಡಿದ್ದ ಮುಸ್ಲಿಮ್ ಪ್ರೇಯರ್ ಆ್ಯಪ್, ಬಾರ್‌ಕೋಡ್ ಸ್ಕಾನಿಂಗ್ ಆ್ಯಪ್, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಆ್ಯಪ್, ಹೈವೇ ಸ್ಪೀಡ್ ಟ್ರಾಪ್ ಡಿಟೆಕ್ಷನ್ ಆ್ಯಪ್ ಸೇರಿದಂತೆ ಹಲವು ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಿಂದ ಬ್ಯಾನ್ ಆಗಿವೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಈ ನಿಷೇಧಿತ ಆ್ಯಪ್‌ಗಳು ಬಳಕೆದಾರರ ಮಾಹಿತಿ ಕದಿಯುತ್ತಿತ್ತು. ಬಳಕೆದಾರರಿಗ ಅರಿವಿಲ್ಲದಂತೆ ಅವರ ಸ್ಥಳೀಯ ಲೊಕೇಶನ್, ಇಮೇಲ್ ಐಡಿ, ಫೋನ್ ನಂಬರ್, ಇತರ ಪಾಸ್‌ವರ್ಡ್ ಸೇರಿದಂತೆ ಗೌಪ್ಯ ಮಾಹಿತಿಗಳನ್ನು ಕದ್ದು ಸೋರಿಕೆ ಮಾಡುತ್ತಿತ್ತು ಎಂದು ವರದಿಯಲ್ಲಿ ಹೇಳಿದೆ. ಅದಕ್ಕೆ ತಕ್ಕಂತೆ ಕೋಡ್ ಅಭಿವೃದ್ಧಿ ಪಡಿಸಲಾಗಿದೆ. ಹೀಗಾಗಿ ಗ್ರಾಹಕರಿಗೆ ಯಾವುದೇ ಅನುಮಾನ ಬರವುದಿಲ್ಲ. ಹೀಗಾಗಿ ಸುದೀರ್ಘ ದಿನಗಳ ಕಾಲ ಈ ಆ್ಯಪ್ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

ಗೂಗಲ್ ಪ್ಲೇ ಸ್ಟೋರ್‌ ಮಹತ್ವದ ಬದಲಾವಣೆ: ನವೆಂಬರ್‌ನಿಂದ ಈ ಆ್ಯಪ್ಸ್‌ ಡೌನ್‌ಲೋಡ್‌ ಅಸಾಧ್ಯ

ಮಾರ್ಚ್ 25 ರಂದು ಗೂಗಲ್ ಸದ್ಯ ನಿಷೇಧಿಸಿರುವ ಆ್ಯಪ್‌ಗಳಿಗೆ ನೋಟಿಸ್ ನೀಡಿತ್ತು. ತಕ್ಷಣ ಕ್ರಮ ಕೈಗೊಳ್ಳದ ಗೂಗಲ್ ಇದೀಗ ಮಾಹಿತಿ ಸೋರಿಕೆ ಮಾಡುತ್ತಿದ್ದ ಆ್ಯಪ್ ವಿರುದ್ಧ ಕ್ರಮ ಕೈಗೊಂಡಿದೆ. ಗೂಗಲ್ ಆ್ಯಪ್ ನಿಷೇಧಿಸುವುದು ಹೊಸದೇನಲ್ಲ. ಈ ರೀತಿಯ ಹಲವು ಆ್ಯಪ್‌ಗಳನ್ನು ಗೂಗಲ್ ಈಗಾಗಲೇ ಬ್ಯಾನ್ ಮಾಡಿದೆ. ಬಳಕೆದಾರರಿಗೆ ಅರಿವಿಲ್ಲದಂತೆ ಅವರ ಮಾಹಿತಿಗಳನ್ನು ಕದ್ದು ಸೋರಿಕೆ ಮಾಡುವ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ನಿಷೇಧಿಸಲಾಗುತ್ತದೆ. 

ಭಾರತಕ್ಕೂ ಗೂಗಲ್‌ ಪ್ಲೇ ಪಾಸ್‌ ಪ್ರವೇಶ
ಗೂಗಲ್‌ ಸಂಸ್ಥೆ ಜಾಹೀರಾತು ಇಲ್ಲದೆಯೇ ಆ್ಯಪ್‌ ಬಳಕೆಗೆ ಅವಕಾಶ ಕಲ್ಪಿಸುವ ಗೂಗಲ್‌ ಪ್ಲೇ ಪಾಸ್‌ ಯೋಜನೆಯನ್ನು ಭಾರತದಲ್ಲಿ ಪರಿಚಯಿಸಿದೆ. ಈ ಯೋಜನೆಯಡಿ ಗ್ರಾಹಕರು ಮಾಸಿಕ ಅಥವಾ ವಾರ್ಷಿಕ ಶುಲ್ಕ ಪಾವತಿಸಿ ಜಾಹೀರಾತಿನ ಕಿರಿಕಿರಿ ಇಲ್ಲದ ಮತ್ತು ಹಲವು ಉನ್ನತ ಫೀಚರ್‌ಗಳು ಇರುವ 1000ಕ್ಕೂ ಹೆಚ್ಚು ಆ್ಯಪ್‌ ಮತ್ತು ಗೇಮ್‌ಗಳನ್ನು ಪಡೆಯಬಹುದು.

ಮತ್ತೆ ಬಂದ Joker Malware| ಈ 15 App ಡೌನ್‌ಲೋಡ್ ಮಾಡಿದ್ರೆ ಕೂಡಲೇ ಡಿಲೀಟ್ ಮಾಡಿ!

ಪ್ಲೇ ಪಾಸ್‌ನಡಿ ಕ್ರೀಡೆ, ಪಝಲ್‌, ಆಕ್ಷನ್‌ ಗೇಮ್‌ ಸೇರಿದಂತೆ 41 ವಿಭಾಗಗಳ ನಾನಾ ರೀತಿಯ ಆ್ಯಪ್‌ ಮತ್ತು ಗೇಮ್‌ಗಳು ಲಭ್ಯವಿರಲಿವೆ. ಅಲ್ಲದೆ 59 ದೇಶಗಳ ಡೆವಲಪರ್‌ಗಳು ಕೂಡಾ ಗ್ರಾಹಕರಿಗೆ ಈ ಸೇವೆಯಡಿ ಸಿಗಲಿದ್ದಾರೆ. ಪ್ಲೇಸ್‌ ಪಾಸ್‌ ಮಾಸಿಕ 99 ರು. ಮತ್ತು ವಾರ್ಷಿಕ 889 ರು.ಗೆ ಲಭ್ಯವಿದೆ. ಗೂಗಲ್‌ ಫ್ಯಾಮಿಲಿ ಗ್ರೂಪ್‌ ಮ್ಯಾನೇಜರ್‌ಗಳು, ಗೂಗಲ್‌ ಫ್ಯಾಮಿಲಿ ಆ್ಯಪ್‌ನಲ್ಲಿ ನೊಂದಾಯಿಸಿಕೊಂಡಿದ್ದರೆ, ತಮ್ಮ ಸಬ್‌ಸ್ಕಿ್ರಪ್ಷನ್‌ ಅನ್ನು ತಮ್ಮ ಕುಟುಂಬದ 5 ಸದಸ್ಯರ ಜೊತೆ ಹಂಚಿಕೊಳ್ಳಬಹುದು.

ರಷ್ಯಾ ಮೇಲೆ ಗೂಗಲ್‌ ನಿರ್ಬಂಧ
ಪುಟ್ಟದೇಶ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ, ಬ್ರಿಟನ್‌ ಮತ್ತಿತರ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ, ಅಮೆರಿಕದ ಜಗದ್ವಿಖ್ಯಾತ ಐಟಿ ಕಂಪನಿಗಳು ವ್ಲಾದಿಮಿರ್‌ ಪುಟಿನ್‌ ದೇಶದ ಮೇಲೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಿವೆ. ತಮ್ಮ ಸೇವೆಯನ್ನು ಬಳಸುತ್ತಿರುವ ರಷ್ಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳ ಜತೆ ಜಾಹೀರಾತು ಹಣ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿವೆ.