ಟ್ವಿಟರ್, ಫೇಸ್‌ಬುಕ್ ಬಳಿಕ ಗೂಗಲ್‌ಗೆ ಬಂತು ಬ್ಲೂಟಿಕ್ , ಜಿಮೇಲ್ ಬಳಕೆದಾರರಿಗೆ ಉಚಿತ!
ಟ್ವಿಟರ್, ಫೇಸ್‌ಬುಕ್ ಬಳಕೆದಾರರ ಖಾತೆಗಳಿಗೆ ಅಧಿಕೃತ ಮುದ್ರೆಯ ಬ್ಲೂಟಿಕ್ ಕೆಲ ತಿಂಗಳಿನಿಂದ ಭಾರಿ ಸದ್ದು ಮಾಡುತ್ತಿದೆ. ಟ್ವಿಟರ್ ಬ್ಲೂಟಿಕ್ ಪಡೆಯಲು ಚಂದಾದಾರಿಕೆ ಆರಂಭಿಸಿದರೆ, ಇತ್ತ ಮೆಟಾ ಕೂಡ ಚಂದಾದಾರಿಕೆ ಆರಂಭಿಸಿದೆ. ಇದೀಗ ಗೂಗಲ್ ಕೂಡ ಬಳಕೆದಾರರಿಗೆ ಬ್ಲೂಟಿಕ್ ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ ಉಚಿತವಾಗಿ ನೀಡುತ್ತಿದೆ.
ನವದೆಹಲಿ(ಮೇ.05): ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳಿಗೆ ಬ್ಲೂಟಿಕ್ ನೀಡುವ ಪದ್ಧತಿಯ ಸ್ವರೂಪ ಬದಲಾಗಿದೆ. ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆ ಆರಂಭಿಸದ ಬೆನ್ನಲ್ಲೇ ಮೆಟಾ ಕೂಡ ಈ ಯೋಜನೆಗೆ ಚಾಲನೆ ನೀಡಿತ್ತು. ಇದೀಗ ಗೂಗಲ್ ಕೂಡ ಬ್ಲೂಟಿಕ್ ಜಾರಿಗೊಳಿಸುತ್ತಿದೆ. ಜಿಮೇಲ್ ಬಳಕೆದಾರರ ಅಧಿಕೃತ ಖಾತೆಗಳಿಗೆ ಬ್ಲೂಟಿಕ್ ನೀಡುತ್ತಿದೆ. ಆದರೆ ಜಿಮೇಲ್ ತನ್ನ ಅಧಿಕೃತ ಬ್ಲೂಟಿಕ್‌ನ್ನು ಉಚಿತವಾಗಿ ನೀಡುತ್ತಿದೆ. ಇದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಜಿಮೇಲ್ ಬಳಕೆದಾರರಿಗೆ ಗೂಗಲ್ BIMI(ಬ್ರಾಂಡ್ ಇಂಡಿಕೇಟರ್ ಫಾರ್ ಮೆಸೇಜ್ ಐಡೆಂಟಿಫಿಕೇಶನ್) ನೀಡುತ್ತಿದೆ.
ಸ್ಪಾಮ್ ಮೇಲ್, ನಕಲಿ ಮೇಲ್‌ಗಳಿಂದ ಬಳಕೆದಾರರು ದೂರವಿರಲು ಜಿಮೇಲ್ ಇದೀಗ ಬ್ಲೂಟಿಕ್ ಚೆಕ್‌ಮಾರ್ಕ್ ಆರಂಭಿಸಿದೆ. ಬಳಕೆದಾರರು BIMI ಪ್ಲಾಟ್‌ಫಾರ್ಮ್ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮೊದಲ ಹಂತದಲ್ಲಿ ಗೂಗಲ್ ಪ್ರತಿಯೊಬ್ಬ ಗೂಗಲ್ ವರ್ಕ್‌ಪ್ಲೇಸ್ ಗ್ರಾಹಕರು, ಜಿ ಸ್ಯೂಟ್ ಬೇಸಿಕ್, ವ್ಯಾಪಾರ ಗ್ರಾಹಕರು ಹಾಗೂ ವೈಯುಕ್ತಿ ಗೂಗಲ್ ಖಾತೆಯನ್ನು ಹೊಂದಿರುವ ಬಳಕೆದಾರರು ಬ್ಲೂಟಿಕ್ ಬಡೆಯಲು ಅರ್ಹರಾಗಿದ್ದಾರೆ.
ಟ್ವಿಟರ್ ಹೊಸ ನಿಯಮದಿಂದ ತಲೆ ಕೆಡಿಸಿಕೊಂಡ ಬಿಗ್ ಸ್ಟಾರ್ .. ಬ್ಲೂಟಿಕ್ ಬೇಕು ಅಂದ್ರೆ ಪಾವತಿಸಬೇಕು ದುಡ್ಡು.!
ಗೂಗಲ್ BIMI ಫೀಚರ್ಸ್ 2021ರಲ್ಲಿ ಗೂಗಲ್ ಪರಿಚಯಿಸಿದೆ. ಆದರೆ ಕಳೆದೆರಡು ವರ್ಷದಿಂದ ಟೆಸ್ಟಿಂಗ್ ನಡೆಸಿದ ಗೂಗಲ್ ಇದೀಗ ಬಳಕೆದಾರರಿಗೆ ನೀಡುತ್ತಿದೆ. BIMI ಫೀಚರ್ ಮೂಲಕ ಬಳಕೆದಾರರು ಸುರಕ್ಷಿತ ಹಾಗೂ ಬ್ರಾಂಡ್ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳಲಿದ್ದಾರೆ ಎಂದು ಗೂಗಲ್ ಹೇಳಿದೆ. ಮೇ.2 ರಿಂದ ಗೂಗಲ್ ಬ್ಲೂಟಿಕ್ ಸೇವೆ ಗ್ರಾಹಕರಿಗೆ ಲಭ್ಯವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳು, ಜಿಮೇಲ್ ಸೇರಿದಂತೆ ಹಲವು ಡಿಜಿಟಲ್ ಖಾತೆಗಳಿಗೆ ಬ್ಲೂಟಿಕ್ ಅತ್ಯಗತ್ಯವಾಗಿದೆ. ನಕಲಿ ಖಾತೆಗಳ ಹಾವಳಿ, ಸುಳ್ಳು ಮಾಹಿತಿ ಹರಡುವಿಕೆ ಸೇರಿದಂತೆ ಹಲವು ಕಾರಣಗಳಿಗೆ ಅಧಿಕೃತ ಬ್ಲೂಟಿಕ್ ಅವಶ್ಯಕವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಉಚಿತವಾಗಿದ್ದ ಈ ಬ್ಲೂಟಿಕ್ ಚಂದಾದಾರಿಕೆ ಮೂಲಕ ನೀಡುತ್ತಿದೆ. ಆದರೆ ಜಿಮೇಲ್ ಇದೀಗ ತನ್ನ ಬಳಕೆದಾರರಿಗೆ ಉಚಿತವಾಗಿ ಬ್ಲೂಟಿಕ್ ನೀಡುತ್ತಿದೆ.
ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯ; ಸಿನಿ ಸೆಲೆಬ್ರಿಟಗಳ ರಿಯಾಕ್ಷನ್ ಹೀಗಿದೆ
ಟ್ವಿಟರ್ ಚಂದಾದಾರಿಕೆ ಆರಂಭಗೊಂಡ ಬಳಿಕ ಪಾವತಿ ಮಾಡದ ಖಾತೆಗಳ ಬ್ಲೂಟಿಕ್ ತೆಗೆದು ಹಾಕಿದೆ. ಇನ್ನು ಕೆಲವರಿಗೆ ದಿಢೀರ್ ಆಗಿ ಬ್ಲೂಟಿಕ್ ಮರಳಿಸಿದ ಘಟನೆಯೂ ನಡೆದಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಗಣ್ಯರ ಬ್ಲೂಟಿಕ್ ತೆಗೆದು ಹಾಕಿದ್ದ ಟ್ವೀಟರ್, ಭಾನುವಾರ ಹಲವು ಸೆಲೆಬ್ರೆಟಿಗಳಿಗೆ ದಿಢೀರನೆ ಬ್ಲೂಟಿಕ್ ಮರಳಿಸಿದೆ. ಹೀಗೆ ಬ್ಲೂಟಿಕ್ ಮರಳಿಸಲು ಕಾರಣವೇನು ಎಂಬುದರ ಬಗ್ಗೆ ಟ್ವೀಟರ್ ಸ್ಪಷ್ಟನೆ ನೀಡಿಲ್ಲವಾದರೂ, 10 ಲಕ್ಷಕ್ಕಿಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವವರಿಗೆ ಮಾತ್ರವೇ ಬ್ಲೂಟಿಕ್ ಮರಳಿಸಿರುವುದು ಕಂಡುಬಂದಿದೆ.
ಬ್ಲೂಟಿಕ್ ಕಳೆದುಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿರಿಯ ನಟ ಅಮಿತಾಭ್ ಬಚ್ಚನ್, ಖ್ಯಾತ ಕ್ರಿಕೆಟರ್ಸ್ ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ನಟ ಸಲ್ಮಾನ್ ಖಾನ್, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಅನೇಕರ ಖಾತೆಗಳಿಗೆ ಬ್ಲೂಟಿಕ್ (ವೆರಿಫೈಡ್, ಅಧಿಕೃತ ಸೂಚಕ) ನೀಡಲಾಗಿದೆ. ಆದರೆ ಈ ಕುರಿತು ಟ್ವೀಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬ್ಲೂಟಿಕ್ ತೆಗೆದ ಬಳಿಕ ಟ್ವೀಟ್ ಮಾಡಿದ್ದ ಅಮಿತಾಭ್ ಬಚ್ಚನ್ ‘ನಾನು ಈಗಾಗಲೇ ಹಣ ಪಾವತಿಸಿದ್ದೇನೆ. ಹೆಸರಿನ ಮುಂದೆ ನೀಲಿ ಕಮಲವನ್ನು ಈಗಲಾದರೂ ನೀಡಿ. ಆಗ ನಾನೇ ಅಮಿತಾಭ್ ಎಂಬುದು ಜನರಿಗೆ ಗೊತ್ತಾಗಲಿದೆ’ ಎಂಬುದು ಭಾರಿ ವೈರಲ್ ಆಗಿತ್ತು.