ಜಿ-ಮೇಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇಂದು ಪ್ರತಿಯೊಂದಕ್ಕೂ ಜಿ-ಮೇಲ್ ಬೇಕೇ ಬೇಕು ಅನ್ನುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ನಮ್ಮ ಪ್ರತಿ ವ್ಯಾವಹಾರಿಕ ಚಟುವಟಿಕೆಯೂ ಇದರೊಂದಿಗೆ ಆರಂಭವಾಗುತ್ತದೆ ಎಂದರೆ ತಪ್ಪಿಲ್ಲ. ಖಂಡಿತವಾಗಿಯೂ ವೈಯುಕ್ತಿಕ ಬಳಕೆಗೂ ಇದು ಉಪಯೋಗವಾಗುತ್ತಿದೆ. ಆದರೆ, ವ್ಯಾವಹಾರಿಕ ಬಳಕೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಒಂದು ಸ್ಮಾರ್ಟ್ ಫೋನ್ ಬಳಸಬೇಕೆಂದಿದ್ದರೂ ಜಿ-ಮೇಲ್ ಬೇಕೇ ಬೇಕು. ಆ ಮೂಲಕ ನಾವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಹೊಸ ಹೊಸ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಜಿ-ಮೇಲ್ ನಮ್ಮೊಳಗೆ ಆವರಿಸಿದೆ. ಇಲ್ಲಿ ವಿಷಯ ಅದಲ್ಲ, ಜಿ-ಮೇಲ್ ನ ಫೀಚರ್‌ನದ್ದಾಗಿದೆ.

ಜಿ-ಮೇಲ್ ಪ್ರಾರಂಭದಿಂದ ಇಲ್ಲಿಯವರೆಗೂ ಅನೇಕ ಉತ್ತಮ ಫೀಚರ್ ಗಳನ್ನು ಒದಗಿಸುತ್ತಾ ಬಂದಿದೆ. ಆ ಮೂಲಕ ಬಳಕೆದಾರ ಸ್ನೇಹಿಯಾಗಿ ಮಾರ್ಪಟ್ಟಿದೆ. ಅನೇಕ ಅನುಕೂಲಗಳನ್ನು ಕಲ್ಪಿಸುವ ಮೂಲಕ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸಿಯೂ ಇದೆ. ಇದೀಗ ಜಿ-ಮೇಲ್ ತನ್ನ ಹೊಸ ಫೀಚರ್ ಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಮತ್ತಷ್ಟು ಉತ್ತಮ ಅನುಭವವನ್ನು ನೀಡಲು ಹೊರಟಿದೆ.
 
ಇದನ್ನು ಓದಿ: ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್! 

ಇಷ್ಟಾದರೂ ತಕ್ಷಣಕ್ಕೇ ಗೂಗಲ್ ತನ್ನ ಜಿ-ಮೇಲ್‌ನ ಈ ಹೊಸ ಫೀಚರ್ ಅನ್ನು ಸಾರ್ವಜನಿಕ ಬಳಕೆ ಮುಕ್ತ ಮಾಡುತ್ತಿಲ್ಲ. ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಮೊದಲಿಗೆ ಪರೀಕ್ಷಾರ್ಥವಾಗಿ ಬಳಕೆಗೆ ಬಿಟ್ಟು ನಂತರದಲ್ಲಿ ಪರಿಚಯಿಸಲು ನಿರ್ಧರಿಸಿದೆ. ಹಾಗಾದರೆ, ನೀವು ಈಗಲೇ ಈ ಫೀಚರ್‌ಗಳನ್ನು ಅಳವಡಿಸಿಕೊಳ್ಳಲು ಆಗುವುದಿಲ್ಲವೇ ಎಂಬ ಪ್ರಶ್ನೆ ಕಾಡುವುದು ಸಹಜ. ಖಂಡಿತವಾಗಿಯೂ ನೀವು ಬಳಸಬಹುದು. ಈಗಲೇ ನೂತನ ಫೀಚರ್ ಅನ್ನು ಬಳಸಬೇಕೆಂದಿದ್ದರೆ ಹೀಗೆ ಮಾಡಿ…

1. ಮೊದಲಿಗೆ ಜಿ-ಮೇಲ್ ತೆರೆಯಿರಿ
ಮೊದಲಿಗೆ ಜಿ-ಮೇಲ್ ಅನ್ನು ಸೈನ್ ಇನ್ ಆಗಬೇಕು. ಒಮ್ಮೆ ಜಿ-ಮೇಲ್ ನ ನಿಮ್ಮ ಖಾತೆಯ ಪುಟವನ್ನು ತೆರೆದ ನಂತರ ಸೆಟ್ಟಿಂಗ್ಸ್‌ನತ್ತ ಹೋಗಬೇಕು.

2. ಜಿ-ಮೇಲ್ ಪುಟದ ಮೇಲ್ಭಾಗದ ಬಲಬದಿಗೆ ಇರುವ ಸೆಟ್ಟಿಂಗ್ಸ್‌ನತ್ತ ಹೋಗಿ ಅದನ್ನು ಕ್ಲಿಕ್ ಮಾಡಬೇಕು. 

ಇದನ್ನು ಓದಿ: ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್? 

3. ಹೀಗೆ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿದ ಬಳಿಕ ಅಲ್ಲಿ ಕಾಣುವ ಆಲ್ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಬೇಕು.

4. ಆಲ್ ಸೆಟ್ಟಿಂಗ್ಸ್ ವಿಭಾಗದಲ್ಲಿ ಕಾಣುವ General (ಜನರಲ್) ನ ಕೆಳಗೆ ಸ್ಕ್ರೋಲ್ ಮಾಡಿದರೆ ಎಕ್ಸ್ ಪಿರಿಮೆಂಟಲ್ ಆ್ಯಕ್ಸಸ್ (Experimental access) ಆಯ್ಕೆ ಸಿಗುತ್ತದೆ. 

5. ಅಲ್ಲಿರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Experimental access ಅನ್ನು ಸಕ್ರಿಯಗೊಳಿಸಬೇಕು. 

6. ಹೀಗೆ Experimental access ಅನ್ನು ಸಕ್ರಿಯಗೊಳಿಸಿದ ಬಳಿಕ ಆ ಪುಟದಲ್ಲಿ ಕೊನೆಯಲ್ಲಿ ಇರುವ Save Changes ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಇದುವರೆಗೆ ಮಾಡಿದ ಬದಲಾವಣೆಗಳಿಗೆ ಒಪ್ಪಿಗೆ ಮುದ್ರೆಯನ್ನು ಒಪ್ಪಿಗೆ ಕೊಡಿ. 
 

ಈ ಎಲ್ಲ ಆಯ್ಕೆಗಳನ್ನು ನೀವು ಮೊಬೈಲ್ ನಲ್ಲಿ ಸಹಿತ ಯಾವುದೇ ಡಿವೈಸ್‌ನಲ್ಲಿ ಮಾಡಬಹುದಾಗಿದೆ. ಆದರೆ, ಇದರ ಬಳಕೆ ಮಾತ್ರ ಮೊಬೈಲ್‌ನಲ್ಲಿ ಸದ್ಯಕ್ಕೆ ಸಿಗುವುದಿಲ್ಲ. ಸದ್ಯಕ್ಕೆ ಈ ಪ್ರಾಯೋಗಿಕ ನೂತನ ಫೀಚರ್‌ಗಳು ಡೆಸ್ಕ್‌ಟಾಪ್ ಬಳಕೆದಾರರಿಗೆ ಅಂದರೆ ಡೆಸ್ಕ್‌ಟಾಪ್ ಬಳಸುವಾಗ ಮಾತ್ರ ಸಿಗುತ್ತದೆ. 

ಇದನ್ನು ಓದಿ: ಏರ್‌ಟೆಲ್‌ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಬರಲಿದೆ 5ಜಿ ತಂತ್ರಜ್ಞಾನ 

ಇದಲ್ಲದೆ, ನೂತನ ಫೀಚರ್‌ಗಳನ್ನು ಬಳಸುವಾಗ ಅದು ಇಷ್ಟವಾಗದಿದ್ದರೆ, ಅಥವಾ ಹಿಂದಿನ ಫೀಚರ್‌ಗೇ ಹೋಗಬೇಕೆಂದಿದ್ದರೆ ಇಲ್ಲವೇ, ಈ ಫೀಚರ್‌ಗಳಲ್ಲಿ ಕೆಲವು ಬೇಡವೆಂದಾದರೆ ನಿಮಗೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ.