ಏರ್‌ಟೆಲ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್...!   5 ಜಿ ಟೆಸ್ಟಿಂಗ್ ನಡೆಸಿದ್ದು  ಇದನ್ನು ಯಶಸ್ವಿಯಾಗಿ ಪೂರ್ಣ ಮಾಡಿದೆ. ಅಲ್ಲದೇ ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆ ಇದೆ.

 ನವದೆಹಲಿ (ಜ.29): ದೂರಸಂಪರ್ಕ ಸೇವೆಗಳ ಪೂರೈಕೆದಾರ ಕಂಪನಿ ಭಾರ್ತಿ ಏರ್‌ಟೆಲ್‌ ಭಾರತದಲ್ಲಿ ಮೊದಲ ಬಾರಿ ಹೈದರಾಬಾದ್‌ ನಗರದಲ್ಲಿ 5ಜಿ ಸೇವೆಗಳನ್ನು ನೀಡುವ ಮೂಲಕ 5ಜಿ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ತನ್ಮೂಲಕ ಸರ್ಕಾರದಿಂದ ಅನುಮತಿ ದೊರೆತರೆ 5ಜಿ ಸೇವೆ ನೀಡಲು ತಾನು ಸಿದ್ಧ ಎಂದು ತೋರಿಸಿದೆ.

ಹೈದರಾಬಾದ್‌ನಲ್ಲಿ ಹಾಲಿ ಲಭ್ಯವಿರುವ ತರಂಗಾಂತರವನ್ನೇ ಬಳಸಿಕೊಂಡು ಏರ್‌ಟೆಲ್‌ 5ಜಿ ಸೇವೆಗಳ ಎಲ್ಲಾ ಅನುಭವ ಗ್ರಾಹಕರಿಗೆ ಸಿಗುವಂತೆ ಮಾಡಿತ್ತು. ಏರ್‌ಟೆಲ್‌ ಗ್ರಾಹಕರು ಏಕಕಾಲಕ್ಕೆ 5ಜಿ ಅಥವಾ 4ಜಿ ಈ ಎರಡರಲ್ಲಿ ಯಾವ ಆಯ್ಕೆಯನ್ನು ಬೇಕಾದರೂ ಮಾಡಿಕೊಳ್ಳಬಹುದಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಸಾಮಾನ್ಯ ನೆಟ್‌ವರ್ಕ್ಗಿಂತ 10 ಪಟ್ಟು ಹೆಚ್ಚು ವೇಗ 5ಜಿಯಲ್ಲಿ ದೊರಕಿದೆ. ಸರ್ಕಾರದಿಂದ ಸೂಕ್ತ ತರಂಗಾಂತರ ಹಾಗೂ ಅನುಮತಿ ದೊರೆತ ತಕ್ಷಣ 5ಜಿ ಸೇವೆ ಆರಂಭಿಸಲಾಗುವುದು ಎಂದು ಏರ್‌ಟೆಲ್‌ ಕಂಪನಿ ಹೇಳಿಕೊಂಡಿದೆ.

ರಿಲಯನ್ಸ್‌ ಜಿಯೋಗೆ ಗ್ರಾಹಕರೇ ಗಮನಿಸಿ : ಇಲ್ಲಿದೆ ಒಂದು ಸಿಹಿ ಸುದ್ದಿ ..

‘ಟೆಕ್‌ ಸಿಟಿ ಹೈದರಾಬಾದ್‌ನಲ್ಲಿ ದೇಶದಲ್ಲೇ ಮೊದಲ ಬಾರಿ 5ಜಿ ಸೇವೆಗಳನ್ನು ಒದಗಿಸಲು ನಮ್ಮ ಎಂಜಿನಿಯರ್‌ಗಳು ಅವಿರತ ಪ್ರಯತ್ನ ಮಾಡಿದ್ದರು. ಈ ಪ್ರಯೋಗ ಯಶಸ್ವಿಯಾಗಿದೆ. ಇನ್ನುಮುಂದೆ 5ಜಿಯನ್ನು ಗಮನದಲ್ಲಿಟ್ಟುಕೊಂಡೇ ನಮ್ಮೆಲ್ಲಾ ಹೂಡಿಕೆಗಳನ್ನೂ ಮಾಡುತ್ತೇವೆ. ಭಾರತಕ್ಕೆ 5ಜಿ ತಂತ್ರಜ್ಞಾನ ಸಂಬಂಧಿ ಸಂಶೋಧನೆಗಳ ಜಾಗತಿಕ ಕೇಂದ್ರವಾಗುವ ಸಾಮರ್ಥ್ಯವಿದೆ’ ಎಂದು ಭಾರ್ತಿ ಏರ್‌ಟೆಲ್‌ ಎಂ.ಡಿ. ಹಾಗೂ ಸಿಇಒ ಗೋಪಾಲ್‌ ವಿತ್ತಲ್‌ ಹೇಳಿದ್ದಾರೆ.