ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್?

ಕಳೆದ ತಿಂಗಳಷ್ಟೇ ಚೀನಾದಲ್ಲಿ ಬಿಡುಗಡೆ ಕಂಡಿದ್ದ 5ಜಿ ಬೆಂಬಲಿತ ಸ್ಮಾರ್ಟ್‌ಫೋನ್ ಅನ್ನು ರಿಬ್ರ್ಯಾಂಡ್ ಆಗಿ ಭಾರತದಲ್ಲಿ ಫೆಬ್ರವರಿ 4ರಂದು ರಿಯಲ್‌ಮಿ ಬಿಡುಗಡೆ ಮಾಡಲಿದೆ. ಒಂದು ಅಂದಾಜಿನ ಪ್ರಕಾರ ಇದು ದೇಶದ ಅತ್ಯಂತ ಅಗ್ಗದ 5ಜಿ ಸ್ಮಾರ್ಟ್‌ಫೋನ್ ಆಗುವ ಸಾಧ್ಯತೆ ಇದೆ. ಎರಡೂ ಮಾದರಿಯ ಫೋನ್‌ಗಳ ಬೆಲೆ 20 ಸಾವಿರ ರೂಪಾಯಿ ಒಳಗೇ ಇರಲಿದೆ.

Realme X7 5G and X7 Pro 5G will launched on Feb 4

ನಿಧಾನವಾಗಿ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಿಗಿ ಹಿಡಿತವನ್ನ ಸಾಧಿಸುತ್ತಿರುವ ರಿಯಲ್‌ಮಿ ಮತ್ತೆ ಹೊಸ ಸ್ಮಾರ್ಟ್‌ಫೋನ್ ಗಳ ಮೂಲಕ ಲಗ್ಗೆ ಹಾಕುತ್ತಿದೆ. ರಿಯಲ್‌ಮಿ ಬಹು ನಿರೀಕ್ಷೆಯ ಎಕ್ಸ್7 5ಜಿ ಮತ್ತು ಎಕ್ಸ್ 7 ಪ್ರೋ 5ಜಿ ಫೋನ್‌ಗಳ ಬಿಡುಗಡೆ ಪಕ್ಕಾ ಆಗಿದೆ.

5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಈ ರಿಯಲ್‌ಮಿ ಫೋನ್‌ ಫೆಬ್ರವರಿ 4ರಂದು ಮಧ್ಯಾಹ್ನ ಭಾರತೀಯ ಮಾರುಕಟ್ಟೆಗೆ ಅನಾವರಣಗೊಳ್ಳಲಿವೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ಗೆ ಹೋಗಲಿವೆ. ಈ ಎರಡೂ ಫೋನ್‌ಗಳಿಗೆ ಸಂಬಂಧಿಸಿದಂತೆ ಕಂಪನಿ ಟೀಸರ್ ಬಿಡುಗಡೆ ಮಾಡಿದೆ.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಕಂಪನಿ ರಿಯಲ್‌ಮಿ ಎಕ್ಸ್7 ಪ್ರೋ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳ ಮಾಹಿತಿಯನ್ನು ಹಂಚಿಕೊಂಡಿದೆ. ಈ ಸ್ಮಾರ್ಟ್‌ಫೋನ್, ಮೀಡಿಯಾ ಟೆಕ್ ಡಿಮೆನ್ಸಿಟಿ 1000 ಪ್ಲಸ್ ಚಿಪ್‌ಸೆಟ್, 184 ಗ್ರಾಮ್ ಸ್ಲಿಮ್ ಡಿಸೈನ್, 120Hz Super AMOLED ಡಿಸ್‌ಪ್ಲೇ, 65 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಇತ್ಯಾದಿ ವಿಶೇಷತೆಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದೇ ಮಾದರಿಯ ಸ್ಮಾರ್ಟ್ ಇತ್ತೀಚೆಗಷ್ಟೇ  ಚೀನಾದಲ್ಲಿ ಬಿಡುಗಡೆಯಾಗಿತ್ತು. ಆದರೆ, ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎಕ್ಸ್7 5ಜಿ ಸ್ಮಾರ್ಟ್‌ಫೋನ್‌ ವಿಶೇಷತೆಗಳು ಚೀನಾದಲ್ಲಿ ಬಿಡುಗೆಯಾದ ಫೋನ್‌ಗಿಂತ ತುಂಬ ಭಿನ್ನವಾಗಿದೆ.

Realme X7 5G and X7 Pro 5G will launched on Feb 4

ರಿಯಲ್‌ಮಿ ಎಕ್ಸ್7 5 ಜಿ ಮೀಡಿಯಾ ಟೆಕ್ ಡೈಮೆನ್ಸಿಟಿ 800 ಯು ಚಿಪ್‌ಸೆಟ್, 50 ವ್ಯಾಟ್ ಸೂಪರ್‌ಡಾರ್ಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್, 4,300 ಎಂಎಎಚ್ ಬ್ಯಾಟರಿ, 64 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 176 ಗ್ರಾಂ ತೂಕವನ್ನು ಹೊಂದಿದೆ. ಇವೆಲ್ಲವೂ ವಿ15 ಫೋನಿನ ವಿಶೇಷತೆಗಳನ್ನು ಹೋಲುತ್ತವೆ ಎಂದು ಕಂಪನಿಯ ಅಧಿಕೃತ ಜಾಲತಾಣದಲ್ಲಿ ತಿಳಿಸಲಾಗಿದೆ.

Mi Notebook 14 (IC) ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?

ರಿಯಲ್‌ಮಿ ಎಕ್ಸ್ 7 ಚೀನಾ ವೆರಿಯೆಂಟ್ 65W ಫಾಸ್ಟ್ ಚಾರ್ಜಿಂಗ್ ಬೆಂಬಲ, 64 ಎಂಪಿ ಕ್ವಾಡ್ ಕ್ಯಾಮೆರಾಗಳನ್ನು ನೀಡುತ್ತದೆ ಮತ್ತು 185 ಗ್ರಾಂ ತೂಗುತ್ತದೆ. ಇದಲ್ಲದೆ, ರಿಯಲ್‌ಮಿ ಎಕ್ಸ್ 7 5 ಜಿ ಇಂಡಿಯಾ ರೂಪಾಂತರ ವಿನ್ಯಾಸವು ಗ್ರೇಡಿಯಂಟ್ ನೆಬ್ಯುಲಾ ಕಲರ್ ಫಿನಿಶ್‌ನೊಂದಿಗೆ ರಿಯಲ್‌ಮಿ ವಿ15 ಅನ್ನು ಹೋಲುತ್ತದೆ.

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ರಿಯಲ್‌ಮಿ ಎಕ್ಸ್‌7 5ಜಿ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾದ ರಿಯಲ್‌ಮಿ ವಿ15 ರೂಪಾಂತರವಾಗಿರುವುದರಿಂದ ನಾವು ರಿಯಲ್‌ಮಿ ಎಕ್ಸ್7 ಚೀನಾ ರೀತಿಯಲ್ಲೇ ಕೈಗೆಟುಕುವ ದರದಲ್ಲಿ ಇರುತ್ತದೆ ಎಂದು ನಿರೀಕ್ಷಿಸಬಹುದಾಗಿದೆ. ಚೀನಾದಲ್ಲಿ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮಾದರಿಯ ರಿಯಲ್‌ಮಿ ವಿ15 ಬೆಲೆ ಅಂದಾಜು 15,800 ರೂಪಾಯಿ ಇದ್ದರೆ, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಮಾಡೆಲ್‌ ಬೆಲೆ ಅಂದಾಜು 22,500 ರೂಪಾಯಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ,  ಭಾರತದಲ್ಲೂ ಈ ಫೋನ್‌ಗಳ ಬೆಲೆ 20 ಸಾವಿರ ರೂಪಾಯಿ ಒಳಗಡೆ ಇರಲಿದೆ ಎಂದು ವಿಶ್ಲಿಸಬಹುದು. ಒಂದೊಮ್ಮೆ ಈ ವಿಶ್ಲೇಷಣೆ ಏನಾದರೂ ನಿಜವಾದರೆ ಭಾರತದಲ್ಲಿ ದೊರೆಯುವ ಅತ್ಯಂತ ಅಗ್ಗದ 5ಜಿ ಫೋನ್ ಎಂಬ ಹೆಗ್ಗಳಿಕೆ ಬರಲಿದೆ.

ಅದೇ ರೀತಿ, ರಿಯಲ್‌ಮಿ ಎಕ್ಸ್7 ಪ್ರೋ 5ಜಿ ಕೂಡ ಹಲವು ವಿಶೇಷತೆಗಳನ್ನು ಒಳಗೊಂಡಿವೆ. 120ಹಜಾರ್ಡ್ ರಿಫ್ರೆಶ್ ರೇಟ್‌ನೊಂದಿಗೆ ಸೂಪರ್ ಎಎಂಒಎಲ್‌ಇಡಿ ಡಿಸ್‌ಪ್ಲೇ ಹೊಂದಿರಲಿದೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡಿಮ್ನಿಸಿಟಿ ಚಿಪ್ ಇರಲಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದ್ದು, 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಇದ್ದರೆ, 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಪೊರಟ್ರಿಯೆಟ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಇರಲಿವೆ.

ಒಪ್ಪೋ ರೆನೋ 5 ಪ್ರೋ 5ಜಿ ಬಿಡುಗಡೆ; ಸಿಕ್ಕಾಪಟ್ಟೆ ಕ್ಯಾಶ್‌ಬ್ಯಾಕ್, ಖರೀದಿಸಿ ಈಗಲೇ!

Latest Videos
Follow Us:
Download App:
  • android
  • ios