ಬೆಂಗಳೂರು(ನ.08): ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಸಕ್ತರಿಗಾಗಿ ವಿಶೇಷ GloFans ಕ್ವಿಝ್ ಆ್ಯಪ್ ಬಿಡುಗಡೆಯಾಗಿದೆ. ನೂತನ ಆ್ಯಪ್ ಮೂಲಕ ವಿಶ್ವದ ಕ್ರೀಡಾಭಿಮಾನಿಗಳು ಒಂದೆಡೆ ಸೇರುವ ಅವಕಾಶ ಹಾಗೂ ರಸಪ್ರಶ್ನೆಯಲ್ಲಿ ಪಾಲ್ಗೊಲ್ಳುವ ಅವಕಾಶ ಈ GloFans ಕ್ವಿಝ್ ಮೊಬೈಲ್ ಆ್ಯಪ್ಲೀಕೇಶನ್ ನೀಡಲಿದೆ. ಇನ್ನು ಕ್ರಿಕೆಟ್ ರಸಪ್ರಶ್ನೆಯನ್ನು ಕ್ರೀಡಾ ಕ್ಷೇತ್ರದ ದಿಗ್ಗಜರು ಈ ಆಯೋಜಿಸಲಿದ್ದಾರೆ.

ಗೂಗಲ್ ಪೇ, ಫೋನ್ ಪೇ ರೀತಿ ಇದೀಗ ವ್ಯಾಟ್ಸಾಪ್ ಪೇ; NPCIನಿಂದ ಅನುಮತಿ!

ಸತತ 6 ತಿಂಗಳ ಪರಿಶ್ರಮದ ಮೂಲಕ ನೂತನ ಆ್ಯಪ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕ್ರೀಡಾ ಉತ್ಸಾಹಿಗಳು, ಅಭಿಮಾನಿಗಳ, ಇತಿಹಾಸಕಾರರು, ಡೇಟಾ ಸೈಂಟಿಸ್ಟ್, ಪತ್ರಕರ್ತರು ಜೊತೆಯಾಗಿ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಅಭಿಮಾನಿಗಳಿಗೆ ಸಮರ್ಪಿಸಿದೆ.  ವಿಶೇಷ ಅಂದರೆ ಭಾರತದ ಅತೀ ದೊಡ್ಡ ಅಭಿಮಾನಿ ಸಮುದಾಯವಾದ ಇಂಡಿಯನ್ಸ್ ಸ್ಪೋರ್ಟ್ಸ್ ಫ್ಯಾನ್ಸ್ ಬೆಂಬಲದೊಂದಿದೆ ನೂತನ ಆ್ಯಪ್ಲಿಕೇಶನ್ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 

QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?.

GloFans ಸ್ಪೋರ್ಟ್ಸ್ ಕ್ವಿಝ್ ಸೇರಿದಂತೆ ರಸಪ್ರಶ್ನೆಗಳನ್ನು ವಿಶ್ವದ 75,000 ಕ್ರೀಡಾಭಿಮಾನಿಗಳ ಫೀಡ್‌ಬ್ಯಾಕ್ ಮೂಲರ ರಚಿಸಲಾಗಿದೆ. ನೂತನ ಆ್ಯಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. GloFans ಅಧೀಕೃತ ವೆಬ್‌ಸೈಟ್ ಮೂಲಕವೂ ಡೌನ್ಲೋಡ್ ಮಾಡಿಕೊಳ್ಳಬಹುದು. 

GloFans ಕ್ವಿಝ್ ಆ್ಯಪ್ಲಿಕೇಶನ್ ಕ್ರಿಕೆಟ್‌ನ ವಿವಿದ ಹಂತದ ರಸಪ್ರಶ್ನೆಗಳನ್ನು ಒಳಗೊಂಡಿದೆ. ಪ್ರತಿ ಹಂತದಲ್ಲಿ ರಸಪ್ರಶ್ನೆಗಳು ಕಠಿಣವಾಗುತ್ತಾ ಹೋಗಲಿದೆ. ರಸಪ್ರಶ್ನೆಯಲ್ಲಿ ಭಾಗವಹಿಸುವವರು ಚಿನ್ನ, ಬೆಳ್ಳಿ, ಮತ್ತು ಕಂಚಿನ ಪದಕ ಗಳಿಸವ ಅವಕಾಶವನ್ನು ಪಡೆಯುತ್ತಾರೆ. ಆ್ಯಪ್ಲೀಕೇಶನ್ ಮುಂದಿನ ಹಂತವು ಯುದ್ಧ ಕ್ರೀಡೆಗಳು, NBA ಹಾಗೂ e ಗೇಮಿಂಗ್ ಕುರಿತ ರಸ ಪ್ರಶ್ನೆ ಒಳಗೊಂಡಿರುತ್ತದೆ.