Asianet Suvarna News Asianet Suvarna News

ರೊಪೋಸೋದಲ್ಲಿ ಡ್ಯಾನಿಶ್ ಸೇಠ್ ಕ್ರಿಕೆಟೇನ್ಮೆಂಟ್ ಸರಣಿ!

  • ಗ್ಲಾನ್ಸ್‍ನಿಂದ ಇದೇ ಮೊದಲ ಬಾರಿಗೆ ರೊಪೋಸೋ ವೇದಿಕೆಯಲ್ಲಿ ಆರಂಭ
  • ಸೆ.19 ರಂದು IPL ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆಯೇ ಈ ಸರಣಿ ಆರಂಭಗೊಳ್ಳಲಿದೆ
Glance Launches Its First Exclusive Cricketainment Series with Danish Sait on Roposo
Author
Bengaluru, First Published Sep 17, 2020, 3:07 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.17): ಗ್ಲಾನ್ಸ್ ತನ್ನ ಮೊದಲ ಇಂಟಲೆಕ್ಚುವಲ್ ಪ್ರಾಪರ್ಟಿ (IP) ಸರಣಿಯಾದ ``ಡ್ಯಾನಿಷ್ ಕಿ ಗೂಗ್ಲಿ ರೊಪೋಸೋದಲ್ಲಿ ಬಿಡುಗಡೆ ಮಾಡಿದೆ. ಈ ಐಪಿ ಸರಣಿಯಲ್ಲಿ ಸ್ಟಾಂಡ್-ಅಪ್ ಹಾಸ್ಯಗಾರ, ಟಿವಿ ನಿರೂಪಕ, ರೇಡಿಯೋ ಜಾಕಿ, ನಟ ಮತ್ತು ಲೇಖಕ ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ . ಕ್ರಿಕೆಟ್ ಮತ್ತು ಮನೋರಂಜನೆಯನ್ನು ಒಟ್ಟಿಗೆ ತರುವ ನಿಟ್ಟಿನಲ್ಲಿ ಕ್ರಿಕೆಟ್ ಆಟಗಾರರು, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅವರ ಸಾಧನೆ, ತಂಡಗಳ ಮಾಲೀಕರು, ಚಿಯರ್ ಲೀಡರ್ಸ್, ಪ್ರೇಕ್ಷಕರ ಕೊರತೆ ಸೇರಿದಂತೆ ಹಲವು ರೀತಿಯಲ್ಲಿ ಮತ್ತು ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.  2020 ರ ಸೆಪ್ಟೆಂಬರ್ 19 ರಂದು ಐಪಿಎಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆಯೇ ಈ ಸರಣಿ ಆರಂಭಗೊಳ್ಳಲಿದೆ.

ದೇಸಿ ಟಿಕ್‌ಟಾಕ್ 'ರೊಪೋಸೋ': ಎರಡೇ ದಿನದಲ್ಲಿ 2.2 ಕೋಟಿ ಡೌನ್‌ಲೋಡ್‌!.

ರೊಪೋಸೋ ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಆಗಿದ್ದು, ತಿಂಗಳಿಗೆ 100 ದಶಲಕ್ಷ ಡೌನ್‍ಲೋಡ್‍ಗಳು ಮತ್ತು 55 ದಶಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಕ್ರಿಕೆಟ್ ಸೀಸನ್‍ನಲ್ಲಿ ಇನ್ನೂ ಹೆಚ್ಚಿನ ಬಳಕೆದಾರರನ್ನು ಹೊಂದುವ ನಿರೀಕ್ಷೆ ಇದೆ. ಈ ಸರಣಿಯು ಪ್ರತಿದಿನ 100 ದಶಲಕ್ಷಕ್ಕೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಉಟಚಿಟಿಛಿe ಐoಛಿಞಜಿeeಜ ನಲ್ಲಿಯೂ ಲಭ್ಯವಾಗಲಿದೆ.

ರೊಪೋಸ್ ಮತ್ತು ಗ್ಲಾನ್ಸ್‍ನಲ್ಲಿ ತಮ್ಮ ಹೊಸ ಸರಣಿ ಆರಂಭವಾಗುತ್ತಿರುವ ಬಗ್ಗೆ ಮಾತನಾಡಿದ ಡ್ಯಾನಿಶ್, ``ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಮತ್ತು ಭಾರತದ 3 ನೇ ಅತಿ ದೊಡ್ಡ ಕಂಟೆಂಟ್ ಪ್ಲಾಟ್‍ಪಾರ್ಮ್ ಆಗಿರುವ ಗ್ಲಾನ್ಸ್ ಜತೆ ಸೇರುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ರೊಪೋಸೋ ಮತ್ತು ಗ್ಲಾನ್ಸ್ ಈ ಕ್ರಿಕೆಟ್ ಋತುವಿನ ವೇಳೆ 200 ದಶಲಕ್ಷ ಬಳಕೆದಾರರನ್ನು ತಲುಪಲು ಮತ್ತು ಅವರಿಗೆ ಮನೋರಂಜನೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ’’ ಎಂದರು.

ಈ ಬಾರಿಯ ಕ್ರಿಕೆಟ್ ಟೂರ್ನಿಯ ವೇಳೆ ಅತ್ಯದ್ಭುತವಾದ ವಿವರಣೆಗಳನ್ನು ನಮ್ಮ ಬಳಕೆದಾರರಿಗೆ ತಲುಪಿಸುವುದರತ್ತ ಗಮನ ಹರಿಸಿದ್ದೇವೆ. ಎಲ್ಲಾ ಬಗೆಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿದ್ದೇವೆ ಮತ್ತು ಅತ್ಯದ್ಭುತವಾದ ವೀಕ್ಷಕ ವಿವರಣೆಗಳನ್ನು ಹೊಂದಿದ್ದೇವೆ. ಇದಕ್ಕೆ ರೊಪೋಸೋ ಜತೆ ಮಾಡಿಕೊಂಡಿರುವ ಪಾಲುದಾರಿಕೆ ಬೆಂಬಲವಾಗಿ ನಿಲ್ಲುತ್ತಿದೆ ಎಂದು ಗ್ಲಾನ್ಸ್‍ನ ಸಿಎಂಒ ಬಿಕಾಶ್ ಚೌಧರಿ ಹೇಳಿದರು.
 

Follow Us:
Download App:
  • android
  • ios