Get Gemini Pro ChatGPT Plus for FREE ಗೂಗಲ್ ಮತ್ತು ಓಪನ್ ಎಐ ತಮ್ಮ ದುಬಾರಿ ಪ್ರೊ ಯೋಜನೆಗಳನ್ನು ಭಾರತೀಯರಿಗಾಗಿ ಉಚಿತ. ಜಿಯೋ ಮತ್ತು ಏರ್‌ಟೆಲ್ ಗ್ರಾಹಕರು ಕ್ರಮವಾಗಿ ಗೂಗಲ್ ಜೆಮಿನಿ ಪ್ರೊ ಮತ್ತು ಪರ್ಪ್ಲೆಕ್ಸಿಟಿ ಎಐ ಪ್ರೊನಂತಹ ಪ್ರೀಮಿಯಂ ಸೇವೆಗಳನ್ನು ಯಾವುದೇ ಶುಲ್ಕವಿಲ್ಲದೆ ಪಡೆಯಬಹುದು.
Get Gemini Pro ChatGPT Plus for FREE: ನೀವಿನ್ನೂ ಎಐ (Artificial Intelligence) ಬಳಸುತ್ತಿಲ್ಲವೇ? ಹಾಗಿದ್ದಲ್ಲಿ ನೀವು ಜಗತ್ತಿಗಿಂತ ಹಿಂದುಳಿದಿದ್ದೀರಿ ಎಂದೇ ಅರ್ಥ. ಆದರೆ ಈಗ ಎಐ ಲೋಕದಲ್ಲಿ ದೊಡ್ಡ ಕ್ರಾಂತಿಯೇ ನಡೆದಿದೆ. ಗೂಗಲ್ ಮತ್ತು ಓಪನ್ ಎಐನಂತಹ ದೈತ್ಯ ಕಂಪನಿಗಳು ತಮ್ಮ ಅತ್ಯಂತ ದುಬಾರಿ 'ಪ್ರೊ' ಯೋಜನೆಗಳನ್ನು ಭಾರತೀಯರಿಗಾಗಿ ಉಚಿತವಾಗಿ ನೀಡುತ್ತಿವೆ. ಈ ಹೊಸ ವರ್ಷದಲ್ಲಿ ನೀವು ಸಾವಿರಾರು ರೂಪಾಯಿ ಚಂದಾದಾರಿಕೆ ಶುಲ್ಕ ನೀಡದೆ ಈ ಪ್ರೀಮಿಯಂ ಸೇವೆಗಳನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.
ಜಿಯೋ ಗ್ರಾಹಕರಿಗೆ ಗೂಗಲ್ ಜೆಮಿನಿ ಪ್ರೊ 18 ತಿಂಗಳು ಫ್ರೀ!
ಗೂಗಲ್ ತನ್ನ ಅತ್ಯಂತ ಶಕ್ತಿಶಾಲಿ 'ಜೆಮಿನಿ ಎಐ ಪ್ರೊ' (Gemini AI Pro) ಪ್ಲಾನ್ ಅನ್ನು ರಿಲಯನ್ಸ್ ಜಿಯೋ ಬಳಕೆದಾರರಿಗೆ ಉಚಿತವಾಗಿ ನೀಡುವ ಮೂಲಕ ಧಮಾಕಾ ಸೃಷ್ಟಿಸಿದೆ. ಜಿಯೋ ಬಳಕೆದಾರರು ಗೂಗಲ್‌ನ ಸುಧಾರಿತ ಮಾದರಿಗಳಾದ Veo, Nano Banana Pro ಗಳನ್ನು ಬರೋಬ್ಬರಿ 18 ತಿಂಗಳವರೆಗೆ ಯಾವುದೇ ಪಾವತಿಯಿಲ್ಲದೆ ಬಳಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ; ಅನಿಯಮಿತ 5G ಡೇಟಾ ನೀಡುವ ಜಿಯೋ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿಕೊಂಡರೆ ಸಾಕು, ಜೆಮಿನಿ ಪ್ರೊ ಸೌಲಭ್ಯ ನಿಮ್ಮದಾಗುತ್ತದೆ.
ಚಾಟ್‌ಜಿಪಿಟಿ 'ಗೋ' ಪ್ಲಾನ್ ಈಗ ಎಲ್ಲರಿಗೂ ಉಚಿತ!
ಓಪನ್ ಎಐ (OpenAI) ತನ್ನ ಜನಪ್ರಿಯ 'ChatGPT Go' ಯೋಜನೆಯನ್ನು ಒಂದು ವರ್ಷದವರೆಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಈ ಹಿಂದೆ ತಿಂಗಳಿಗೆ 399 ರೂಪಾಯಿ ವೆಚ್ಚವಾಗುತ್ತಿದ್ದ ಈ ಪ್ಲಾನ್ ಈಗ ಶೂನ್ಯ ದರದಲ್ಲಿ ಲಭ್ಯವಿದೆ. ಚಾಟ್‌ಜಿಪಿಟಿಗೆ ಸಬ್‌ಸ್ಕ್ರೈಬ್ ಆಗುವ ಮೂಲಕ ಬಳಕೆದಾರರು ಅತೀ ವೇಗದ ಇಮೇಜ್ ಜನರೇಷನ್ ಮತ್ತು ದೀರ್ಘಕಾಲದ ಮೆಮೊರಿಯಂತಹ ಪ್ರೀಮಿಯಂ ಫೀಚರ್‌ಗಳನ್ನು ಆನಂದಿಸಬಹುದು.
ಏರ್‌ಟೆಲ್ ಬಳಕೆದಾರರಿಗೆ 'ಪರ್ಪ್ಲೆಕ್ಸಿಟಿ ಎಐ' ಬೋನಸ್!
ಗೂಗಲ್ ಜಿಯೋ ಜೊತೆ ಕೈಜೋಡಿಸಿದರೆ, 'ಪರ್ಪ್ಲೆಕ್ಸಿಟಿ ಎಐ' (Perplexity AI) ಏರ್‌ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ನೀವು ಏರ್‌ಟೆಲ್ ಗ್ರಾಹಕರಾಗಿದ್ದರೆ, ಯಾವುದೇ ಕಠಿಣ ಷರತ್ತುಗಳಿಲ್ಲದೆ ಒಂದು ವರ್ಷದವರೆಗೆ 'ಪರ್ಪ್ಲೆಕ್ಸಿಟಿ ಎಐ ಪ್ರೊ' ಯೋಜನೆಯನ್ನು ಉಚಿತವಾಗಿ ಪಡೆಯಬಹುದು. ಅಷ್ಟೇ ಅಲ್ಲದೆ, ಪ್ರೀಮಿಯಂ ಕಾಮೆಟ್ ಬ್ರೌಸರ್ (Comet Browser) ಬಳಸುವ ಅವಕಾಶವೂ ನಿಮಗೆ ಸಿಗಲಿದೆ.
ಹೊಸ ವರ್ಷಕ್ಕೆ ಸ್ಮಾರ್ಟ್ ಹೂಡಿಕೆ ಬೇಡ, ಸ್ಮಾರ್ಟ್ ಬಳಕೆ ಇರಲಿ!
ಇತ್ತೀಚಿನ ಈ ಬೆಳವಣಿಗೆಗಳು ಭಾರತೀಯ ಬಳಕೆದಾರರಿಗೆ ತಾಂತ್ರಿಕವಾಗಿ ಹೊಸ ಶಕ್ತಿ ನೀಡಿವೆ. ಸಾವಿರಾರು ರೂಪಾಯಿ ಬೆಲೆಬಾಳುವ ಈ ಸಬ್‌ಸ್ಕ್ರಿಪ್ಷನ್‌ಗಳನ್ನು ಉಚಿತವಾಗಿ ಪಡೆಯುವ ಮೂಲಕ ನಿಮ್ಮ ಕೆಲಸಗಳನ್ನು ಸುಲಭಗೊಳಿಸಿಕೊಳ್ಳಬಹುದು. ತಡ ಮಾಡಬೇಡಿ, ನಿಮ್ಮ ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಇಂದೇ ಈ ಉಚಿತ ಎಐ ಯೋಜನೆಗಳನ್ನು ಸಕ್ರಿಯಗೊಳಿಸಿಕೊಳ್ಳಿ.


