ಬೆಂಗಳೂರು(ಅ.18):  ಈ ಹಬ್ಬದ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುವುದು, ಮಾರಾಟಗಾರರು, ಎಂಎಸ್ಎಂಇಗಳು ಮತ್ತು ಕುಶಲಕರ್ಮಿಗಳ ಪ್ರಗತಿ ಮತ್ತು ಮುನ್ನಡೆಯನ್ನು ನೀಡುವ ತನ್ನ ಬದ್ಧತೆಯನ್ನು ಮುಂದುವರಿಸಿದೆ. ದಿ ಬಿಗ್ ಬಿಲಿಯನ್ ಡೇಸ್ ನ ಮೊದಲ ದಿನದಿಂದಲೇ ಭಾರತ ಯಾವ ರೀತಿ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳುವುದನ್ನು ಹೆಚ್ಚು ಮಾಡಿದೆ ಎಂಬುದಕ್ಕೆ ಇಲ್ಲಿವೆ ಕೆಲವು ಅಂಶಗಳು.

ಹಬ್ಬದ ಪ್ರಯುಕ್ತ 2000 ಫ್ಯಾಷನ್ ಸ್ಟೋರ್ ಜೊತೆ ಒಪ್ಪಂದ ಮಾಡಿದ ಫ್ಲಿಪ್‌ಕಾರ್ಟ್!

ಭಾರತಕ್ಕೆ ಆನ್ ಲೈನ್ ಲಭ್ಯತೆ
ಮೆಟ್ರೋಗಳು ಮತ್ತು 2 ನೇ ಶ್ರೇಣಿಯ ನಗರಗಳಲ್ಲಿ ಡಿಜಿಟಲೀಕರಣದ ಅಳವಡಿಕೆ ವೇಗವನ್ನು ಪಡೆದುಕೊಂಡಿದ್ದರೆ, ಎಲ್ಲಾ ವಿಭಾಗಗಳಲ್ಲಿ ಇದರ ವ್ಯಾಪ್ತಿಗೆ 3 ನೇ ಶ್ರೇಣಿಯ ನಗರಗಳಲ್ಲಿ ಶೇ.50 ರಷ್ಟು ಹೊಸ ಗ್ರಾಹಕರು ಬಂದಿದ್ದಾರೆ.

ಗೃಹೋಪಯೋಗಿ ಉತ್ಪನ್ನಗಳ ವಿಭಾಗದಲ್ಲಿ ಹೊಸ ಗ್ರಾಹಕರ ಸಂಖ್ಯೆಯಲ್ಲಿ ಶೇ.53 ರಷ್ಟು ಹೆಚ್ಚಳವಾಗಿದೆ ಮತ್ತು ಬೃಹತ್ ಅಪ್ಲೈಯನ್ಸಸ್ ಪ್ಲಸ್ ಬಿಜಿಎಂ (ಬ್ಯೂಟಿ & ಜನರಲ್ ಮರ್ಚೆಂಡೈಸ್) ನಲ್ಲಿ ಸರಿಸುಮಾರು ಶೇ.50 ರಷ್ಟು ಹೆಚ್ಚ ಹೊಸ ಗ್ರಾಹಕರು ಬಂದಿದ್ದಾರೆ. ಈ ಎಲ್ಲವೂ 3 ನೇ ಶ್ರೇಣಿಯ ನಗರಗಳಲ್ಲಿನ ಬೆಳವಣಿಗೆಗಳು.

ಹಬ್ಬದ ಸೀಸನ್‌ನಲ್ಲಿ ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನ್ ಶಿಪ್!

ಈ ಹಬ್ಬದ ವೇಳೆಯಲ್ಲಿ 2 ನೇ ಶ್ರೇಣಿಯ ನಗರಗಳು ಮತ್ತು ಅದರಾಚೆಗಿನ ನಗರಗಳಲ್ಲಿನ ಎಂಎಸ್ಎಂಇಗಳು ಮುಂಚೂಣಿಯಲ್ಲಿದ್ದು, ಮಾರಾಟಗಾರರು ಇ-ಕಾಮರ್ಸ್ ನಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ

  1. ·   ದೇಶಾದ್ಯಂತ 2,550 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಂದ ಸ್ಥಳೀಯ ಎಂಎಸ್ಎಂಇ ಉತ್ಪನ್ನಗಳಿಗೆ ಬೇಡಿಕೆಗಳು ಬಂದಿವೆ.
  2. ·   167 ಹೊಸ ನಗರಗಳ ಮಾರಾಟಗಾರರು ಈ ಬಿಬಿಡಿ ಮೂಲಕ ಇ-ಕಾಮರ್ಸ್ ಗೆ ಸೇರ್ಪಡೆಯಾಗಿದ್ದಾರೆ.
  3. ·   ಮಾರಾಟಗಾರರು ತಾಲ್ಷೇರ್, ವೇಲೂರು, ಸೋಹಗ್ಪುರ, ಸಿಂಧಿ ಸೇರಿದಂತೆ ವಿವಿಧ 2 ಶ್ರೇಣಿಯ ನಗರಗಳ ನಿವಾಸಿಗಳಾಗಿದ್ದಾರೆ.
  4. ·  ಜೈಪುರ, ಸೂರತ್ ಮತ್ತು ಪಾಣಿಪತ್ ಸೇರಿದಂತೆ 2 ನೇ ಶ್ರೇಣಿಯ ಮಾರಾಟಗಾರರು ಟಾಪ್ ಸಾಧಕರಾಗಿದ್ದಾರೆ.

ಕೈಗೆಟುಕುವ ದರಗಳು
ಗಣನೀಯ ಪ್ರಮಾಣದಲ್ಲಿ ಡಿಜಿಟಲ್ ಇಂಡಿಯಾಗೆ ವರ್ಗಾವಣೆ ಆಗುತ್ತಿರುವುದು ಕಂಡುಬಂದಿದೆ. ಪ್ರೀಪೇಯ್ಡ್ ವ್ಯವಹಾರಗಳಲ್ಲಿ ಶೇ.75 ರಷ್ಟು ಹೆಚ್ಚಳ ಕಂಡುಬಂದಿದೆ. ಇದು ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ಡುಕೊಂಡು ತಮ್ಮ ಖರೀದಿ ಮಾಡಲು ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಬಳಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಇಎಂಐ ಆಯ್ಕೆಗಳು ಹಬ್ಬದ ಸಡಗರವನ್ನು ಹೆಚ್ಚು ಮಾಡಿವೆ. ಮೊಬೈಲ್ ಗಳು, ಫರ್ನಿಚರ್, ಲಾರ್ಜ್ ಅಪ್ಲಾಯನ್ಸಸ್ & ಎಲೆಕ್ಟ್ರಾನಿಕ್ಸ್ ನಂತಹ ಹೈ ಟಿಕೆಟ್ ವಿಭಾಗಗಳಲ್ಲಿ  ಪ್ರತಿ 5 ಖರೀದಿಗಳಲ್ಲಿ ಒಂದು ಖರೀದಿ ಇಎಂಐನಿಂದ ಕೂಡಿದೆ.