Asianet Suvarna News Asianet Suvarna News

ಹಬ್ಬದ ಪ್ರಯುಕ್ತ 2000 ಫ್ಯಾಷನ್ ಸ್ಟೋರ್ ಜೊತೆ ಒಪ್ಪಂದ ಮಾಡಿದ ಫ್ಲಿಪ್‌ಕಾರ್ಟ್!

  • 300 ಕ್ಕೂ ಹೆಚ್ಚು ನಗರಗಳಲ್ಲಿ 100 ಕ್ಕೂ ಅಧಿಕ ಬ್ರ್ಯಾಂಡ್ ಗಳ ಸ್ಟೋರ್ ಗಳ ಸಂಗ್ರಹ
  • 2000 ಕ್ಕೂ ಅಧಿಕ ಫ್ಯಾಷನ್ ಸ್ಟೋರ್ ಗಳ ಜೊತೆ ಒಪ್ಪಂದ
Flipkart partners with 2000 fashion stores PAN India ahead of the festive season ckm
Author
Bengaluru, First Published Oct 16, 2020, 7:28 PM IST

ಬೆಂಗಳೂರು(ಅ.16): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಈ ಬಾರಿಯ ಹಬ್ಬದ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಜತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಮೂಲಕ ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ 2000 ಕ್ಕೂ ಅಧಿಕ ಫ್ಯಾಷನ್ ಸ್ಟೋರ್ ಗಳ ವಿಸ್ತಾರವಾದ ಉತ್ಪನ್ನಗಳನ್ನು ತರಲಿದೆ. 300 ಕ್ಕೂ ಹೆಚ್ಚು ನಗರಗಳಲ್ಲಿ ವಿಸ್ತಾರವಾದ ಜಾಲವನ್ನು ಹೊಂದಿರುವ ಈ ಪಾಲುದಾರಿಕೆಯು ಬ್ರ್ಯಾಂಡ್ ಗಳು ತಮ್ಮಲ್ಲಿನ ಉತ್ಪನ್ನಗಳನ್ನು ಹತ್ತಿರದ ಪಿನ್ ಕೋಡ್ ಗಳಲ್ಲಿ ಲಭ್ಯವಾಗುವಂತೆ ಮಾಡುವ ಮೂಲಕ ಗ್ರಾಹಕರಿಗೆ ವಿಸ್ತಾರವಾದ ಆಯ್ಕೆಯನ್ನು ಮಾಡಿಕೊಳ್ಳಲು ನೆರವಾಗುತ್ತವೆ ಮತ್ತು ಫ್ಲಿಪ್ ಕಾರ್ಟ್ ನ ಸುರಕ್ಷಿತ ಹಾಗೂ ಸ್ಯಾನಿಟೈಸ್ಡ್ ಸಪ್ಲೈ ಚೇನ್ ಮೂಲಕ ವಿತರಣೆ ಮಾಡಲು ಸಹಕಾರಿಯಾಗುತ್ತವೆ.

ಕೈಗೆಟುಕುವ ದರದಲ್ಲಿ ಶಾಂಪಿಂಗ್‌ಗಾಗಿ ಹಣಕಾಸು ಸಂಸ್ಥೆಗಳೊಂದಿಗೆ ಫ್ಲಿಪ್‌ಕಾರ್ಟ್ ಒಪ್ಪಂದ!.

ಹಬ್ಬದ ಸಮಯ ಆರಂಭವಾಗಿದೆ ಮತ್ತು ದೇಶಾದಾದ್ಯಂತ ಗ್ರಾಹಕರು ಇ-ಕಾಮರ್ಸ್ ಮೂಲಕ ಶಾಪ್ ಮಾಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಪಾಲುದಾರಿಕೆಯು ನೂರಾರು ಬ್ರ್ಯಾಂಡ್ ಗಳಿಗೆ ಒಮ್ನಿಚಾನೆಲ್ ಮಾರ್ಗಕ್ಕೆ ಪ್ರವೇಶವನ್ನು ಪಡೆಯಲು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಈ ಮೂಲಕ ತಮ್ಮ ಗ್ರಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅವಕಾಶ ಮಾಡಿಕೊಡುತ್ತದೆ. ಈ ಉಪಕ್ರಮವು ಫ್ಲಿಪ್ ಕಾರ್ಟ್ ನ 250 ದಶಲಕ್ಷಕ್ಕೂ ಅಧಿಕ ಗ್ರಾಹಕರ ಉತ್ಪನ್ನಗಳ ಆಯ್ಕೆಯನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ ಹಾಗೂ ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಸುರಕ್ಷತೆಯಿಂದ, ಮೆಟ್ರೋಗಳು, 2 ನೇ ಹಂತದ ನಗರಗಳು ಹಾಗೂ ಅದರ ನಂತರದ ನಗರಗಳಲ್ಲಿ ಆನ್ ಲೈನ್ ಶಾಪಿಂಗ್ ಗೆ ಆದ್ಯತೆ ನೀಡುವ ಮೂಲಕ ಅವರ ಅಗತ್ಯತೆಗಳನ್ನು ಪೂರೈಸುತ್ತದೆ.

ಫ್ಲಿಪ್ ಕಾರ್ಟ್ ತಂತ್ರಜ್ಞಾನ ಮತ್ತು ಉತ್ತಮ ನಿರ್ವಹಣಾ ವ್ಯವಸ್ಥೆಗಳಾದ `ಜಿಯೋ ಫೆನ್ಸಿಂಗ್’ ಮತ್ತು `ಸ್ಟೋರ್ ಹ್ಯಾಪನಿಂಗ್’ದಂತಹ ಉಪಕ್ರಮಗಳ ಮೂಲಕ ರೀಟೇಲ್ ಸ್ಟೋರ್ ಗಳನ್ನು ಇ-ಕಾಮರ್ಸ್ ನಲ್ಲಿ ದೃಢವಾದ ಸಪ್ಲೈ ಚೇನ್ ನೊಂದಿಗೆ ಸಕ್ರಿಯಗೊಳಿಸಲು ಸದುಪಯೋಗಪಡಿಸಿಕೊಳ್ಳುತ್ತಿದೆ. ಇದು ಮೆಟ್ರೋ ಹೊರತಾದ ಪ್ರದೇಶಗಳು ಮತ್ತು ನಗರಗಳನ್ನು ಒಳಗೊಳ್ಳುತ್ತದೆ ಮತ್ತು ಗ್ರಾಹಕರು ಮತ್ತು ಬ್ರ್ಯಾಂಡ್ ಗಳೆರಡರ ಅಗತ್ಯಗಳನ್ನು ಪರಿಹರಿಸುತ್ತದೆ. ಗುಲ್ಬರ್ಗಾ ಮತ್ತು ಸೀತಾಪುರದ `ಲಿಬರ್ಟಿ ಸ್ಟೋರ್ಸ್’, ಕೊಚ್ಚಿನ್, ಪಣಜಿ ಮತ್ತು ಕ್ಯಾಲಿಕಟ್ ನ `ಪೆಪೆ ಸ್ಟೋರ್ಸ್, ಝಿರಾಕ್ ಪುರ ಮತ್ತು ಮೊಗಾದ `ರೇಮಂಡ್ ಸ್ಟೋರ್ಸ್’ ಜಮ್ಮುವಿನ `ಆ್ಯರೋ ಸ್ಟೋರ್ಸ್’, ಜೋಧ್ಪುರದ `ಖಾದಿಮ್ಸ್ ಸ್ಟೋರ್ಸ್’, ದುರ್ಗಾಪುರ ಮತ್ತು ಇತರೆ ಪ್ರದೇಶಗಳ `ಎಥ್ನಿಸಿಟಿ ಸ್ಟೋರ್ಸ್’ ಗಳನ್ನು ಒಳಗೊಂಡಿದೆ.

 ಮೆಟ್ರೋ ನಗರಗಳಲ್ಲಿನ ಗ್ರಾಹಕರಿಗೆ ಇತ್ತೀಚಿನ ಸ್ಟೈಲ್ ಗಳನ್ನು ತ್ವರಿತವಾಗಿ ವಿತರಣೆ ಮಾಡುವ ನಿಟ್ಟಿನಲ್ಲಿ ಪಾಲುದಾರಿಕೆಯು ಕಾರ್ಯೋನ್ಮುಖವಾಗಿರುವ ಜತೆಗೆ, ಇತ್ತೀಚಿನ ಟ್ರೆಂಡಿ ಬ್ರ್ಯಾಂಡ್ ಆಫರ್ ಗಳ ವಿಸ್ತಾರವಾದ ಆಯ್ಕೆ ಮೂಲಕ 2 ನೇ ಶ್ರೇಣಿಯ ನಗರಗಳ ಮತ್ತು ಪ್ರದೇಶಗಳ ಗ್ರಾಹಕರ ನಿರೀಕ್ಷೆಗಳನ್ನೂ ಈಡೇರಿಸಲಿದೆ.ಈ ಉಪಕ್ರಮದ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಫ್ಯಾಷನ್ ನ ಉಪಾಧ್ಯಕ್ಷ ನಿಶಿತ್ ಗಾರ್ಗ್ ಅವರು, ``ಸಂದಿಗ್ಧ ಪರಿಸ್ಥಿತಿಯಲ್ಲಿರುವ ಗ್ರಾಹಕರು, ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರಿಗೆ ಭವಿಷ್ಯದ ಶಾಪಿಂಗ್ ಅವಿಭಾಜ್ಯ ಮಾದರಿಯಾಗಲಿದೆ. ಈ ಆಯ್ಕೆಯೊಂದಿಗೆ ನಾವು 3 ನೇ ಶ್ರೇಣಿಯ ನಗರಗಳು ಮತ್ತು ಅದಕ್ಕಿಂತ ಹೊರತಾಗಿರುವ ಪ್ರದೇಶಗಳ ಗ್ರಾಹಕರಲ್ಲಿ ಇರುವ ಅಂತರವನ್ನು ಕಡಿಮೆ ಮಾಡಲು ಮೊದಲ ಆದ್ಯತೆ ನೀಡುತ್ತಿದ್ದೇವೆ. ಈ ಗ್ರಾಹಕರು ಪ್ರಸ್ತುತದ ಫ್ಯಾಷನ್ ಟ್ರೆಂಡ್ ಗಳನ್ನು ಬಯಸುತ್ತಿದ್ದಾರೆ. ಆದರೆ, ಸೀಮಿತ ಲಭ್ಯತೆ ಇರುವ ಕಾರಣ ಅದನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 ಈ ಹಿನ್ನೆಲೆಯಲ್ಲಿ ಈ ಕೊರತೆಯನ್ನು ನೀಗಿಸಲಾಗುವುದು. ಎರಡನೆಯದಾಗಿ, ಮೆಟ್ರೋಗಳಲ್ಲಿನ ಗ್ರಾಹಕರು ತಾಜಾ ಫ್ಯಾಷನ್ ಅನ್ನು ಕಡಿಮೆ ಅವಧಿಯಲ್ಲಿ ಬಯಸುತ್ತಿದ್ದಾರೆ. ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಗಮನಹರಿಸಿದ್ದೇವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸಂತುಷ್ಟಗೊಳಿಸುವಂತೆ ಮಾಡುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಆಯ್ಕೆ ಮತ್ತು ವೇಗದ ವಿಚಾರದಲ್ಲಿ ನಮ್ಮ ಈ ಉಪಕ್ರಮವು ಸಹಕಾರಿಯಾಗಲಿದೆ’’ ಎಂದು ಅಭಿಪ್ರಾಯಪಟ್ಟರು.
ಈ ವರ್ಷ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮತ್ತು ಹಬ್ಬದ ಸಮಯದಲ್ಲಿ ಅತಿ ದೊಡ್ಡ ಫ್ಯಾಷನ್ ಆಯ್ಕೆಗಳನ್ನು ಒದಗಿಸುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಪ್ರಮುಖ ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. 
 

Follow Us:
Download App:
  • android
  • ios