ಬೆಂಗಳೂರು(ಮೇ.14):  ಕೊರೋನಾ ಸಂಕಷ್ಟದ ಸಮಯದಲ್ಲಿ ಜಾಗತಿಕವಾಗಿ ಫೇಸ್‍ಬುಕ್ ಮತ್ತು ಇನ್‌ಸ್ಟಾಗ್ರಾಂ ಕೋವಿಡ್ 19  ಸಂಬಂಧಿಸಿದ ಹಾಗೂ ಲಸಿಕೆಗಳ ಕುರಿತಾದ ಸುಳ್ಳು ಸುದ್ದಿಗಳನ್ನು ಮಾಹಿತಿಗಳನ್ನು ತೆಗೆದುಹಾಕಿದೆ. ಬರೋಬ್ಬರಿ 12 ಮಿಲಿಯನ್ ತಪ್ಪು ಮಾಹಿತಿಗಳನ್ನು ಫೇಸ್‌ಬುಕ್ ಪತ್ತೆ ಹಚ್ಚಿ, ಫೇಕ್ ಎಂದು ಲೇಬಲ್ ಹಾಕಿದೆ. ಇದರಲ್ಲಿ ಹಲವು ಪೋಸ್ಟ್‌ಗಳನ್ನು ನಿರ್ಬಂಧಿಸಿದೆ. 

ಕೋವಿಡ್ ನಿರ್ವಹಣೆ ಟೀಕೆ: 100ಕ್ಕೂ ಹೆಚ್ಚು ಪೋಸ್ಟ್ ಡಿಲಿಟ್ ಮಾಡಿದ ಟ್ವಿಟರ್, ಫೇಸ್‌ಬುಕ್!.

ಫೇಸ್‌ಬುಕ್ ಗ್ರಾಹಕರಿಗೆ ತಪ್ಪು ಸಂದೇಶಗಳನ್ನು ರವಾನಿಸಿದಂತೆ ತಡೆಯಲು ಫೇಸ್‌ಬುಕ್ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಈಗಾಗಲೇ ಫೇಸ್‌ಬುಕ್ ಹಾಗೂ ಇನ್ಸ್‌ಸ್ಟಾಗ್ರಾಂ ಮೂಲಕ ಹರಿದಾಡುತ್ತಿರುವ ಸುಳ್ಳು ಮಾಹಿತಿ, ಸುಳ್ಳು ಸುದ್ದಿ, ಸುಳ್ಳು ಚಿತ್ರಗಳನ್ನು ನಿರ್ಬಂಧಿಸುವ ಕೆಲದಲ್ಲಿ ಫೇಸ್‌ಬುಕ್ ನಿರತವಾಗಿದೆ. ಇದಕ್ಕಾಗಿ ಭಾರತದಲ್ಲಿ ಹೊಸ ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.

ಫೇಸ್‌ಬುಕ್ ಕೋವಿಡ್-19 ತಪ್ಪು ಮಾಹಿತಿಯ ವಿರುದ್ಧ ಹೋರಾಡಲು 6 ಸುಲಭ ಟಿಪ್ಸ್ ಅಭಿವೃದ್ಧಿಪಡಿಸಿದೆ. ಈ ಟಿಪ್ಸ್  ಫೇಸ್‍ಬು  ಸರಣಿ ಜಾಹೀರಾತುಗಳ ಮೂಲಕ ಪ್ರದರ್ಶಿಸಲಿದೆ. ಜೊತೆಗೆ ಸುಳ್ಳು ಮಾಹಿತಿಗಳನ್ನು ಹರಡುವ ಮೊದಲು ಪರಿಶೀಲಿಸಲು ಕೆಲ ಸೂಚನೆಗಳನ್ನು ನೀಡಿದೆ.

ಮೇ 15ರ ನಂತರ ವಾಟ್ಸಾಪ್ ಅಕೌಂಟ್ ರದ್ದಾಗಲ್ಲ! ಯಾಕೆ ಗೊತ್ತಾ?.

1.    ಸಂಪೂರ್ಣ ಮಾಹಿತಿ ಪಡೆಯಿರಿ, ಬರೀ ಹೆಡ್‌ಲೈನ್ ಮಾತ್ರ ಅಲ್ಲ
2.    ವಿಶ್ವಾಸಾರ್ಹ ಮೂಲಗಳಲ್ಲಿ ಪರಿಶೀಲನೆ ಮಾಡಿ(ಉದಾ: www.mygov.in/covid-19)
3.    ವಾಸ್ತವಗಳನ್ನು ಹಂಚಿಕೊಳ್ಳಿ, ವದಂತಿಗಳನ್ನಲ್ಲ
4.    ವಿಶ್ವಾಸಾರ್ಹ ಮೂಲಗಳಿಂದ ಸಂಪೂರ್ಣ ಸಂದರ್ಭ ತಿಳಿದುಕೊಳ್ಳಿ
5.    ಬಂಧುಮಿತ್ರರಿಗೆ ಅವರು ತಪ್ಪಾದ ಮಾಹಿತಿ ಹಂಚಿಕೊಂಡಾಗ ತಿಳಿಸಿ
6.    ಷೇರ್ ಮಾಡುವ ಮುನ್ನ ತಡೆಯಿರಿ

ಈ ಅಭಿಯಾನ ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು, ಒರಿಯಾ, ಮಲಯಾಳಂ, ಮರಾಠಿ, ಗುಜರಾತಿ ಮತ್ತು ಬಂಗಾಳಿ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ನಡೆಯಲಿದೆ. ಕೋವಿಡ್-19ರ ಕುರಿತಂತೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪೂರೈಸುವ  ಪ್ರಯತ್ನದ ನಿಟ್ಟಿನಲ್ಲಿ ಫೇಸ್‍ಬುಕ್ ದೇಶದ ಮುಂಚೂಣಿಯ ವೈದ್ಯರೊಂದಿಗೆ ಅಭಿಯಾನವನ್ನೂ ಆರಂಭಿಸಿದೆ.  ಈ ಅಭಿಯಾನವು 12 ವಿಡಿಯೋಗಳ ಸರಣಿಯನ್ನು ಒಳಗೊಂಡಿದ್ದು ಅದರಲ್ಲಿ ವೈದ್ಯರು ಕೋವಿಡ್-19 ಕುರಿತಾದ  ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ಸರಣಿ ಫೇಸ್‌ಬುಕ್ ಇಂಡಿಯಾದಲ್ಲಿ ನೇರಪ್ರಸಾರವಾಗಲಿದೆ.