ಬೆಂಗಳೂರು(ಜು.10): ಭಾರತದ ಮುಂಚೂಣಿಯ ಇ-ಕಾಮರ್ಸ್ ಮಾರುಕಟ್ಟೆ ವೇದಿಕೆ ಫ್ಲಿಪ್‌ಕಾರ್ಟ್ ರಾಜ್ಯದ ಕಲೆ, ಕರಕುಶಲ ಮತ್ತು ಕೈಮಗ್ಗದ ವಲಯಗಳಿಗೆ ಇ-ಕಾಮರ್ಸ್ ಮಾರುಕಟ್ಟೆ ಒದಗಿಸಿ ಉತ್ತೇಜಿಸಲು ಮುಂದಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರದ MSME ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಸ್ಥಳೀಯ ಉತ್ಪನ್ನ ಖರೀದಿಸಿ: ಚೀನಿ ಉತ್ಪನ್ನ ತ್ಯಜಿಸಲು ಮೋದಿ ಪರೋಕ್ಷ ಮನವಿ!.

ಫ್ಲಿಪ್‌ಕಾರ್ಟ್ ಸಮರ್ಥ್ ಕಾರ್ಯಕ್ರಮದ ಅಡಿಯಲ್ಲಿ ಈ ಪಾಲುದಾರಿಕೆಯು ಕರ್ನಾಟಕದ ಸ್ಥಳೀಯ ಕುಶಲಕರ್ಮಿಗಳು, ನೇಕಾರರಿಗೆ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಭಾರತದಾದ್ಯಂತ ಗ್ರಾಹಕರ ನೆಲೆಯಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಡಲಾಗುತ್ತದೆ. ಕರ್ನಾಟಕ ಸರ್ಕಾರ ಮತ್ತು ಫ್ಲಿಪ್‌ಕಾರ್ಟ್ ಗ್ರೂಪ್ ಎರಡೂ ಸಮಾಜದ ಅವಕಾಶವಂಚಿತ ಪ್ರದೇಶಗಳಲ್ಲಿ ವ್ಯವಹಾರ ಮತ್ತು ವ್ಯಾಪಾರದ ಸೇರ್ಪಡೆ ಅವಕಾಶಗಳನ್ನು ಹೆಚ್ಚಿಸುವ ಮಾರ್ಗಗಳನ್ನು ರಚಿಸುವತ್ತ ಗಮನ ಹರಿಸಲಿವೆ. ಈ ಮೂಲಕ ‘ಮೇಡ್ ಇನ್ ಇಂಡಿಯಾ’ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡುವ ಗುರಿ ಹೊಂದಿದೆ.

ಆತ್ಮನಿರ್ಭರತೆ ಸಾಧಿಸೋದು ಹೇಗೆ? ಆತ್ಮನಿರ್ಭರತೆಯತ್ತ ಕರೆದೊಯ್ಯುವ ಸೂತ್ರಗಳು!.

ಫ್ಲಿಪ್‌ಕಾರ್ಟ್ ಸಮರ್ಥ್ ನಿಗದಿತ ಸಮಯದ ಬೆಂಬಲವನ್ನು ವಿಸ್ತರಿಸುವ ಮೂಲಕ ಕುಶಲಕರ್ಮಿಗಳ ಅವಕಾಶಗಳ ಅಡೆತಡೆಗಳನ್ನು ಮುರಿಯಲು ಪ್ರಯತ್ನಿಸಲಿದೆ. ಇದರಲ್ಲಿ ಆನ್‌ಬೋರ್ಡಿಂಗ್, ಉಚಿತ ಕ್ಯಾಟಲಾಗ್, ಮಾರ್ಕೆಟಿಂಗ್, ಖಾತೆ ನಿರ್ವಹಣೆ, ವ್ಯವಹಾರ ಒಳನೋಟಗಳು ಮತ್ತು ಉಗ್ರಾಣ ಬೆಂಬಲದ ರೂಪದ ಪ್ರಯೋಜನಗಳನ್ನು ಒಳಗೊಂಡಿದೆ.

ಈ ಸಹಭಾಗಿತ್ವದಲ್ಲಿ ಪ್ರಖ್ಯಾತ ಕರ್ನಾಟಕ ಮೂಲದ ಬ್ರಾಂಡ್‌ಗಳಾದ ಕಾವೇರಿ - ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಭಾಗವಾದ ಪ್ರಿಯದರ್ಶಿನಿ ಕೈಮಗ್ಗಗಳು ಫ್ಲಿಪ್‌ಕಾರ್ಟ್ ಸಮರ್ಥ್ ಕಾರ್ಯಕ್ರಮಕ್ಕೆ  ಕೈಜೋಡಿಸಿವೆ.

ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಸರ್ಕಾರದ ಎಂಎಸ್‌ಎಂಇ ಮತ್ತು ಗಣಿ ವಿಭಾಗದ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್, “ಫ್ಲಿಪ್‌ಕಾರ್ಟ್‌ನ ಸಹಯೋಗವು ರಾಜ್ಯದಲ್ಲಿ ವಾಣಿಜ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಸಹಭಾಗಿತ್ವವು ಕರ್ನಾಟಕದ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ವ್ಯವಹಾರಗಳನ್ನು ರಾಷ್ಟ್ರೀಯ ಗ್ರಾಹಕ ನೆಲೆಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಸ್ಥಳೀಯವಾಗಿ ತಯಾರಿಸಿದ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ಪ್ರದರ್ಶಿಸುವಾಗ ಬ್ರ್ಯಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಹಣಕಾಸು ನಿರ್ವಹಣೆಯ ಕೌಶಲ್ಯಗಳಿಂದ ರಾಜ್ಯದ ಎಂಎಸ್‌ಎಂಇಗಳು ಪ್ರಯೋಜನ ಪಡೆಯಲಿವೆ” ಎಂದಿದ್ದಾರೆ.

ಫ್ಲಿಪ್‌ಕಾರ್ಟ್ ಸಮೂಹದ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್, “ರಾಜ್ಯದ ಕುಶಲಕರ್ಮಿಗಳಿಗೆ ವ್ಯಾಪಕ ಮಾರುಕಟ್ಟೆ ಪ್ರವೇಶದ ಭರವಸೆಯೊಂದಿಗೆ ತಮ್ಮ ಉತ್ಪನ್ನಗಳನ್ನು ಪಾರದರ್ಶಕ ವೇದಿಕೆಯಲ್ಲಿ ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅವಕಾಶವನ್ನು ನೀಡುವ ಸಲುವಾಗಿ ಕರ್ನಾಟಕ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ. ಇದು ಸವಾಲಿನ ಸಮಯವಾಗಿದ್ದು, ಸ್ವದೇಶಿ ವೇದಿಕೆಯಾಗಿ, ಸ್ಥಳೀಯ ವ್ಯವಹಾರಗಳನ್ನು ಹೆಚ್ಚಿಸಲು ಅಗತ್ಯ ವಾತಾವರಣದ ಸಹಭಾಗಿತ್ವವನ್ನು ವೇಗ ನೀಡುವುದು ನಮ್ಮ ಜವಾಬ್ದಾರಿ ಎಂದು ನಾವು ನಂಬುತ್ತೇವೆ. ಸಾಮಾಜಿಕ ಮತ್ತು ಜನಸಂಖ್ಯಾ ಅಡೆತಡೆಗಳನ್ನು ಮುರಿಯಲು ಮತ್ತು ಅವುಗಳನ್ನು ಔಪಚಾರಿಕ ಆರ್ಥಿಕತೆಯ ವ್ಯಾಪ್ತಿಗೆ ತರುವಲ್ಲಿ ಹಿಂದುಳಿದ ಸಮುದಾಯಗಳಿಗೆ ಸಹಾಯ ಮಾಡುವುದನ್ನು ಫ್ಲಿಪ್‌ಕಾರ್ಟ್ ಸಮರ್ಥ್ ಮುಂದುವರಿಸಲಿದೆ ಎಂದಿದ್ದಾರೆ.

ಪ್ರಾರಂಭವಾದ ಒಂದು ವರ್ಷದೊಳಗೆ, ಫ್ಲಿಪ್‌ಕಾರ್ಟ್ ಸಮರ್ಥ ದೇಶದ ಗ್ರಾಮೀಣ ಮತ್ತು ಅವಕಾಶವಂಚಿತ ಸಮಾಜದ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇಂದು ಭಾರತದಾದ್ಯಂತ 500,000 ಕ್ಕೂ ಹೆಚ್ಚು ಕುಶಲಕರ್ಮಿಗಳು, ನೇಕಾರರು ಮತ್ತು ಸೂಕ್ಷ್ಮ ಉದ್ಯಮಗಳ ಜೀವನೋಪಾಯಕ್ಕೆ ಈ ಯೋಜನೆ ಬೆಂಬಲ ನೀಡುತ್ತಿದೆ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ವಿಶೇಷ ಗಮನ ನೀಡುವುದರ ಜೊತೆಗೆ, ವಿಭಿನ್ನ ಸಾಮರ್ಥ್ಯದ ಉದ್ಯಮಿಗಳು, ಕುಶಲಕರ್ಮಿಗಳು ಮತ್ತು ನೇಕಾರರಿಗೂ ನೆರವು ನೀಡುತ್ತಿದೆ. ಫ್ಲಿಪ್‌ಕಾರ್ಟ್ ಸಮರ್ಥ್  ಹೆಚ್ಚಿನ ಸಂಖ್ಯೆಯ ಗ್ರಾಮೀಣ ಉದ್ಯಮಿಗಳನ್ನು ತಲುಪಲು ಪ್ರತಿಷ್ಠಿತ ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಫ್ಲಿಪ್‌ಕಾರ್ಟ್ ಸಮರ್ಥ್ ಅನ್ನು ಈ ಗುಂಪುಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆನ್‌ಲೈನ್‌ನಲ್ಲಿ ಪಟ್ಟಿ ಮಾಡಿ ಮಾರಾಟ ಮಾಡಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ.