ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್ ಒಳಗೆ ನುಸುಳುತ್ತದೆ?: ತಜ್ಞರ ಉತ್ತರ
ಭಾರತೀಯ ಸಚಿವರು, ಪ್ರತಿಪಕ್ಷದ ನಾಯಕರು, ನ್ಯಾಯಾಧೀಶರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕ ಫೋನ್‌ಗಳನ್ನು ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್ ಮಾಡಿರುವ ಸುದ್ದಿ ಸದ್ದು ಮಾಡುತ್ತಿದೆ. ಇಸ್ರೇಲ್ ಮೂಲದ ಕಂಪನಿಯ ಈ ಸ್ಪೈವೇರ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಸಚಿವರು, ಪ್ರತಿಪಕ್ಷದ ನಾಯಕರು, ನ್ಯಾಯಾಧೀಶರು, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿರುವ ಮಾಹಿತಿ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಸ್ರೇಲ್ ಮೂಲದ ಕಂಪನಿಯ ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಈ ಕೃತ್ಯ ಎಸಗಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ.
ಪೆಗಾಸಸ್ ಸಾಫ್ಟ್‌ವೇರ್ ಬಳಸಿಕೊಂಡು ವ್ಯಕ್ತಿಗಳ ಮೊಬೈಲ್ ಹ್ಯಾಕ್ ಮಾಡಿ ಮಾಹಿತಿಯನ್ನು ಕದಿಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಭಾರತ ಸರ್ಕಾರವು ಯಾವುದೇ ವ್ಯಕ್ತಿಯ ಮೇಲೆ ಯಾವುದೇ ರೀತಿಯಲ್ಲೂ ಕಣ್ಗಾವಲು ವಹಿಸಿಲ್ಲ ಎಂದು ಹೇಳಿಕೊಂಡಿದೆ.
40 ಪತ್ರಕರ್ತರು ಸೇರಿ 300 ಗಣ್ಯರ ಮೊಬೈಲ್ ಹ್ಯಾಕ್: ವರದಿ!
ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ‘ದಿ ವೈರ್’ ವೆಬ್‌ಸೈಟ್ ವಿಶ್ವಾದ್ಯಂತ 50 ಸಾವಿರ ಮೊಬೈಲ್ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿದ್ದವು
ಪೆಗಾಸಸ್ ಹೇಗೆ ಮಾಹಿತಿ ಪಡೆಯುತ್ತದೆ?
ಇಷ್ಟು ತಿಳಿದು ಮೇಲೆ ಏನಿದು ಪೆಗಾಸಿಸ್ ಸ್ಪೈವೇರ್ ಎಂಬ ಪ್ರಶ್ನೆ ಬರುವುದು ಸಹಜ. ಸೈಬರ್ ಅಟ್ಯಾಕ್ ಸಂಬಂಧ ವಾಟ್ಸಾಪ್‌ಗೆ ನೆರವು ನೀಡಿದ್ದ ಯುನಿವರ್ಸಿಟಿ ಆಫ್ ಟೊರೊಂಟೊದಲ್ಲಿರುವ ದಿ ಸಿಟಿಜನ್ ಲ್ಯಾಬ್ ಪ್ರಕಾರ, ಪೆಗಾಸಸ್ ಎಂಬುದು ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್‌ನ ಸ್ಪೈವೇರ್(ಗೂಡಚರ ತಂತ್ರಾಂಶ) ಆಗಿದೆ. ಈ ಪೆಗಾಸಸ್‌ಗೆ ಕ್ಯೂ ಸೂಟ್ ಮತ್ತು ಟ್ರಿಡಿಯೆಂಟ್ ಎಂಬ ಹೆಸರುಗಳಿವೆ ಎಂದು ನಂಬಲಾಗಿದೆ. ಈ ಸ್ಪೈವೇರ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಆರಾಮಾಗಿ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ. ನಾನಾ ರೀತಿಯಲ್ಲಿ ಟಾರ್ಗೆಟೆಡ್ ಮೊಬೈಲ್ ಫೋನ್‌ಗಳಿಂದ ಮಾಹಿತಿಯನ್ನು ಕದಿಯಬಲ್ಲದು.
ವಾಟ್ಸಾಪ್ ಮೇಲಿನ ಸೈಬರ್ ಅಟ್ಯಾಕ್ ವೇಳೆ, ವಾಟ್ಸಾಪ್‌ನ VoIP ಸ್ಟಾಕ್‌ನಲ್ಲಿನ ಸುರಕ್ಷಿತೆಯ ದುರ್ಬಲತೆಯನ್ನು ಬಳಸಿಕೊಂಡು ಈ ಸ್ಪೈವೇರ್ ಕನ್ನ ಹಾಕಿತ್ತು. ಸ್ಪೈವೇರ್ ಕೇವಲ ಟಾರ್ಗೆಟೆಡ್ ವಾಟ್ಸಾಪ್‌ಗೆ ವಿಡಿಯೋ ಮತ್ತು ಆಡಿಯೋ ಮೀಸ್ಡ್ ಕಾಲ್ ಮಾಡಿದ್ರೂ ಸಾಕು, ಪೆಗಾಸಸ್ ಟಾರ್ಗೆಟೆಡ್ ಸಾಧನದೊಳಗೆ ಪ್ರವೇಶ ಪಡೆಯಲು ಸಾಧ್ಯವಾಗಿತ್ತು.
ನಿಮ್ಮ ಬೆಡ್ ಪಕ್ಕ ಇರಲೇಬೇಕು ಲೆನೋವೋ ಸ್ಮಾರ್ಟ್ ಕ್ಲಾಕ್ 2
ಸಾಮಾಜಿಕ ಎಂಜಿನಿಯರಿಂಗ್ ಬಳಸಿ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಮಾಡುವುದು ಅಥವಾ ಸ್ಪೈವೇರ್ ಅನ್ನು ಒಳಗೆ ಕಳುಹಿಸುವುದಕ್ಕಾಗಿ ನಕಲಿ ಪ್ಯಾಕೇಜ್ ಅಧಿಸೂಚನೆಗಳನ್ನು ಕಳುಹಿಸುವುದು ಮುಂತಾದ ದಾರಿಗಳ ಮೂಲಕ ಒಳನುಸುಳಲು ಪೆಗಾಸಸ್ ತಂತ್ರಗಳನ್ನು ಬಳಸಿದೆ ಎಂದು ಸಿಟಿಜನ್ ಲ್ಯಾಬ್ ಹೇಳುತ್ತದೆ. ಪೆಗಾಸಸ್ 2016ರಿಂದಲೂ ಚಾಲ್ತಿಯಲ್ಲಿದ್ದು ಮತ್ತು ಇದನ್ನು ಮೊದಲಿನಿಂದಲೂ ಭಾರತೀಯರನ್ನು ಗುರಿಯಾಗಿಸಲು ಬಳಸಲಾಗುತ್ತಿತ್ತು ಎಂದು ನಂಬಲಾಗಿತ್ತು.
ಏನೇನು ಮಾಡುತ್ತದೆ ಪೆಗಾಸಸ್?
ಟಾರ್ಗೆಟೆಡ್ ಸಾಧನಗಳಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ ಆದಮೇಲೆ, ಅದು ಸರ್ವರ್ ನಿಯಂತ್ರಣ ಮಾಡುತ್ತದೆ ಮತ್ತು ಇನ್ಫೆಕ್ಟೆಡ್ ಡಿವೈಸ್‌ನಿಂದ ಡೇಟಾ ಪಡೆಯಲು ಆಜ್ಞೆಗಳನ್ನು ನೀಡುತ್ತದೆ. ಪಾಸ್ವರ್ಡ್‌ಗಳು, ಸಂಪರ್ಕ ಸಂಖ್ಯೆಗಳು, ಪಠ್ಯ ಸಂದೇಶಗಳು, ಕ್ಯಾಲೆಂಡ್ ವಿವರ ಕದಿಯುತ್ತದೆ. ಇಷ್ಟು ಮಾತ್ರವಲ್ಲದೇ, ಆಪ್ ಬಳಸಿ ಮಾಡಲಾದ ವಾಯ್ಸ್‌ಗಳ ಮಾಹಿತಿಯನ್ನು ಸುಲಭವಾಗಿ ಎತ್ತಿಟ್ಟುಕೊಳ್ಳುತ್ತದೆ. ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸಿ ಮಾಹಿತಿ ಪಡೆದುಕೊಳ್ಳಬಹುದು. ಜೊತೆಗೆ ನಿಮ್ಮ ಲೈವ್ ಲೊಕೆಷನ್ ಪತ್ತೆ ಮಾಡಲು ಜಿಪಿಎಸ್ ಅನ್ನು ಕೂಡ ಅದು ಬಳಸಿಕೊಳ್ಳುತ್ತದೆ! ಇದೊಂದು ಖತರ್ನಾಕ್ ಸ್ಪೈವೇರ್ ಆಗಿದೆ.
ಪೆಗಾಸಸ್ ಇನ್‌ಸ್ಟಾಲ್ ಮಾಡಿ ಭಾರತದ ಪ್ರಮುಖ ಫೋನ್‌ಗಳನ್ನು ಹ್ಯಾಕ್ ಮಾಡಿರುವ ವಿಷಯವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. 2018 ಮತ್ತು 2019ರ ಅವಧಿಯಲ್ಲಿ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಮಾಹಿತಿಯು ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಆದರೆ, ಭಾರತ ಸರ್ಕಾವು ಇಂಥ ಯಾವುದೇ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದೇನಿದು ‘ಆಲೂಗಡ್ಡೆ’ ರೀತಿ ಕಾಣುತ್ತಿದೆಯಲ್ಲ? ಯಾವ ಕಾಯಿ ಇದು