ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಇನ್ಸಟಾಗ್ರಾಮ್‌ನಲ್ಲಿ ಮಂಗಳನ ಉಪಗ್ರಹ ಫೋಬೋಸ್ ಚಿತ್ರವನ್ನು ಪೋಸ್ಟ್ ಮಾಡಿದೆ. ಈ ಚಿತ್ರದ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ನೋಡಲು ಆಲೂಗಡ್ಡೆ ರೀತಿ ಕಾಣುತ್ತಿರುವ ಫೋಬೋಸ್ ಪ್ರತಿ ಶತಮಾನಕ್ಕೆ 1.8 ಮೀಟರ್‌ನಷ್ಟು ಮಂಗಳನಿಗೆ ಹತ್ತಿರವಾಗುತ್ತಿದೆಯಂತೆ!

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ(NASA) ಅದ್ಭುತವಾದ ಚಿತ್ರವೊಂದನ್ನು ಇನ್ಸಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದು ನೋಡಲು ನಿಮಗೆ ಆಲೂಗಡ್ಡೆ ತರಹ ಕಾಣುತ್ತದೆ. ಆದರೆ ವಾಸ್ತವದಲ್ಲಿ ಅದೊಂದು ಮಂಗಳ ಗ್ರಹದ ಎರಡು ಉಪಗ್ರಹಳ ಪೈಕಿ ದೊಡ್ಡದಾಗಿರುವ ಫೋಬೋ ಆಗಿದೆ. 

ಮಂಗಳದ ಗ್ರಹದ ಈ ಫೋಬೋ ಕಾಯವನ್ನು ಭೂಮಿಯಿಂದ ಮತ್ತೊಂದು ಗ್ರಹಕ್ಕೆ ಕಳುಹಿಸಲಾಗಿರುವ ಅತ್ಯಾಧುನಿಕ ಶಕ್ತಿಶಾಲಿ ಕ್ಯಾಮೆರಾ ಸೆರೆ ಹಿಡಿದು ಭೂಮಿಗೆ ಕಳುಹಿಸಿದೆ ಎಂದು ನಾಸಾ ತನ್ನ ಇನ್ಸಟಾಗ್ರಾಮ್‌ದಲ್ಲಿ ಹೇಳಿಕೊಂಡಿದೆ. ನಾಸಾ ಹಂಚಿಕೊಂಡಿಕೊಂಡಿರುವ ಪೋಸ್ಟ್‌ನಲ್ಲಿ ನೋಡಲು ಈ ಕಾಯ ಆಲೂಗಡ್ಡೆಯ ರೀತಿಯಲ್ಲಿದೆ. ಆದರೆ, ಮಂಗಳ ಗ್ರಹದ ಫೋಬೋ ಆಗಿದೆ ಮತ್ತು ಇದೇ ಗ್ರಹದ ಮತ್ತೊಂದು ಉಪಗ್ರಹವನ್ನು ಡೈಮೂಸ್ ಎಂದೂ ಕರೆಯಲಾಗುತ್ತದೆ. 

ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!

ನಾಸಾ ಇನ್ಸಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿರುವ ಪ್ರಕಾರ, ಮೇಲ್ಮೈಯಿನಿಂದ ಸುಮಾರು 6,800 ಕಿ.ಮೀ ದೂರದ ಕಕ್ಷೆಯಲ್ಲಿರುವ ಮಾರ್ಸ್ ರೆಕಾನೈಸನ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆಯಲ್ಲಿರುವ ಹೈರೇಸ್ ಕ್ಯಾಮೆರಾದಿಂದ ಸಹಾಯದಿಂದ ಈ ಫೋಟೋ ಸೆರೆ ಹಿಡಿಯಲಾಗಿದೆ. ಮಂಗಳದ ಉಪಗ್ರಹವಾಗಿರುವ ಈ ಫೋಬೋಸ್ ಪ್ರತಿ ಶತಮಾನಕ್ಕೆ 1.8 ಮೀಟರ್‌ನಷ್ಟು ಮಂಗಳನತ್ತ ಸಮೀಪಿಸುತ್ತಿದೆ. ಅಂದರೆ, ಮುಂದಿನ 50 ದಶಲಕ್ಷ ವರ್ಷಗಳಲ್ಲಿ ಮಂಗಳಕ್ಕೆ ಈ ಉಪಗ್ರಹ ಫೋಬೋಸ್ ಅಪ್ಪಳಿಸಿದರೂ ಅಪ್ಪಳಿಸಬಹುದು. ಇಲ್ಲವೇ ಭಗ್ನಾವೇಷಗಳ ಉಂಗುರುಗಳಾಗಿ ವಿಭಜನೆಯಾಗುತ್ತಾ ನಾಶವಾಗಬಹುದು.

ಮಂಗಳ ಗ್ರಹದ ಉಪಗ್ರಹವಾಗಿರುವ ಈ ಫೋಬೋಸ್‌ನಲ್ಲಿ ಯಾವುದೇ ವಾತಾವರಣವಿಲ್ಲ. ಹಾಗೆಯೇ ಈ ಫೋಬೋಸ್ ಮಂಗಳ ಗ್ರಹವನ್ನು ದಿನಕ್ಕೆ ಮೂರು ಬಾರಿ ಪರಿಭ್ರಮಿಸುತ್ತದೆ. ಒಂದು ಜನಪ್ರಿಯ ಸಿದ್ಧಾಂತವೆಂದರೆ ಅದು ಸೆರೆಹಿಡಿದ ಕ್ಷುದ್ರಗ್ರಹವಾಗಿರಬಹುದು ಎಂದು ನಾಸಾ ಹೇಳಿದೆ, ಆದರೆ ಕೆಲವು ವಿಜ್ಞಾನಿಗಳು ಈ ವಾದವನ್ನು ಒಪ್ಪಿಕೊಳ್ಳುವುದಿಲ್ಲ. 1877 ರಲ್ಲಿ ಅಮೆರಿಕದ ಖಗೋಳ ವಿಜ್ಞಾನಿ ಆಸಾಫ್ ಹಾಲ್ ಫೋಬೊಸ್ ಅನ್ನು ಕಂಡುಹಿಡಿದಿದ್ದಾನೆ ಎಂದು ನಾಸಾ ಪೋಸ್ಟ್‌ನಲ್ಲಿ ವಿವರಿಸಿದೆ. ಗ್ರೀಕ್ ಪುರಾಣಗಳಲ್ಲಿ, ಫೋಬೋಸ್ ಮತ್ತು ಡೀಮೋಸ್ ಅರೆಸ್ (ರೋಮನ್ ಪುರಾಣದಲ್ಲಿ ಮಂಗಳ)ದ ಅವಳಿ ಪುತ್ರರು ಎಂದು ನಂಬಲಾಗುತ್ತಿದೆ ಎಂದ ನಾಸಾ ಹೇಳಿಕೊಂಡಿದೆ. 

View post on Instagram

ಇನ್ಸಟಾಗ್ರಾಮ್‌ದಲ್ಲಿ ನಾಸಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಮಂಗಳ ಗ್ರಹದ ಈ ಉಪಗ್ರಹ ಫೋಬೋಸ್‌ಗೆ ಒಂದಿಷ್ಟು ಮಾಹಿತಿಯನ್ನು ನೀಡಿದೆ. ಹೈರೇಸ್ ಕ್ಯಾಮೆರಾ ಕ್ಲಿಕ್ಕಿಸಿರುವ ಈ ಫೋಬೋಸ್‌ ಫೋಟೋವು ಪೋಕ್ಮಾರ್ಕ್ ಮಾಡಿದ ಆಕಾಶಕಾಯವನ್ನು ಸ್ಟಿಕ್ನಿ ಕುಳಿ ಎಂಬ ದೊಡ್ಡ ಪ್ರದೇಶವನ್ನು ತೋರಿಸುತ್ತದೆ. ಅದರ ಪಕ್ಕದಲ್ಲಿ ಕಾಣುವ ಕೊರಕಲುಗಳು ಉಬ್ಬರವಿಳಿತದ ಶಕ್ತಿಗಳ ಪರಿಣಾಮದಿಂದ ಸೃಷ್ಟಿಯಾಗಿರುವಂಥವು. ಅಂದರೆ, ಗ್ರಹ ಮತ್ತು ಉಪಗ್ರಹ ಪರಸ್ಪರ ಗುರುತ್ವಾಕರ್ಷಣೆಯಿಂದಾಗಿ ಸೃಷ್ಟಿಯಾಗಿರುವಂಥವುಗಳು ಎನ್ನಬಹುದು.

ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ: GPS, ನೆಟ್‌ವರ್ಕ್‌ ಸಮಸ್ಯೆ

ನಾಸಾ ಹಂಚಿಕೊಂಡಿರುವ ಮಂಗಳನ ಉಪಗ್ರಹ ಫೋಬೋಸ್ ‌ಚಿತ್ರದ ಬಗ್ಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿವೆ. ಸೋಷಿಯಲ್ ಮೀಡಿಯಾ ಬಳಕೆದಾರರು ಇದೊಂದು ಅದ್ಭುತ ಚಿತ್ರವೆಂದು ಶ್ಲಾಘಿಸುತ್ತಿದ್ದಾರೆ. 

ಅಮೇರಿಕನ್ ಖಗೋಳ ವಿಜ್ಞಾನಿ ಆಸಾಫ್ ಹಾಲ್ 1877ರಲ್ಲಿ ಮಂಗಳನ ಈ ಎರಡೂ ಉಪಗ್ರಹಗಳನ್ನು ಕಂಡುಹಿಡಿದನು. ರೋಮನ್ ದೇವರಾದ ಮಂಗಳನ ಗ್ರೀಕ್ ಪ್ರತಿರೂಪವಾದ ಅರೆಸ್‌ನ ಪೌರಾಣಿಕ ಪುತ್ರರಿಗೆ ಹಾಲ್, ಈ ಉಪಗ್ರಹಗಳನ್ನು ಹೆಸರಿಸಿದ್ದಾನೆ. ಫೋಬೋಸ್, ಅಂದರೆ ಭಯ, ಡೀಮೋಸ್‌ನ ಸಹೋದರ. ಈ ಕುಳಿಗಳಿಗೆ ಅವರ ಪತ್ನಿ ಮತ್ತು ಗಣಿತಜ್ಞ ಕ್ಲೋಯ್ ಏಂಜಲೀನ್ ಸ್ಟಿಕ್ನಿ ಹಾಲ್ ಹೆಸರಿಡಲಾಗಿದೆ.

ಮಂಗಳನ ಉಪಗ್ರಹವಾಗಿರುವ ಈ ಫೋಬೋಸ್‌ನ ವಾತಾವರಣದಲ್ಲಿ ಸಾಕಷ್ಟು ವೈಪರೀತ್ಯಗಳಿರುತ್ತವೆ. ಹಗಲು ಮತ್ತು ರಾತ್ರಿ ವಾತಾವರಣದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಇಲ್ಲಿ ಅತಿ ಹೆಚ್ಚಿನ ತಾಪಮಾನ ಎಂದರೆ -4 ಡಿಗ್ರಿ ಸೆಲ್ಷಿಯಸ್ ಮತ್ತು ಕಡಿಮೆ ತಾಪಮಾನ -112 ಡಿಗ್ರಿ ಸೆಲ್ಷಿಯಸ್‌ನಷ್ಟಿರುತ್ತದೆ.

ಆ.12ಕ್ಕೆ ಜಿಸಾಟ್ 1 ಸ್ಯಾಟ್‌ಲೈಟ್ ಉಡಾವಣೆ, ಗಡಿಯ ನೈಜ್ಯ ಸ್ಥಿತಿ ತಿಳಿಯಲು ನೆರವು