ಲಸಿಕೆ ಪ್ರಕ್ರಿಯೆ ಸರಳೀಕರಣಗೊಳಿಸಲು ಕೋವಿನ್ ಆ್ಯಪ್, ಪೋರ್ಟಲ್ 50 ಕ್ಕೂ ಹೆಚ್ಚು ದೇಶಗಳು ಕೋವಿನ್ ಬಳಸಲು ಆಸಕ್ತಿ ಒಪನ್ ಸೋರ್ಸ್ ತಂತ್ರಜ್ಞಾನ ನೀಡಿಲು ಪ್ರಧಾನಿ ಮೋದಿ ಸೂಚನೆ  

ನವದೆಹಲಿ(ಜೂ.28): ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕಾ ಅಭಿಯಾನ ಇತರ ಎಲ್ಲಾ ದೇಶಗಳಿಂದ ಅತ್ಯುತ್ತಮ ಹಾಗೂ ಅತೀ ಹೆಚ್ಚು ಮಂದಿಯನ್ನು ತಲುಪಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಕೋವಿನ್ ಆ್ಯಪ್, ಹಾಗೂ ಪೋರ್ಟಲ್ ಪಾಲು ಹೆಚ್ಚಾಗಿದೆ. ಕೋವಿನ್ ಮೂಲಕ ಭಾರತದಲ್ಲಿ ಲಸಿಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಭಾರತದ ಕೋವಿನ್ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಇದೀಗ 50ಕ್ಕೂ ಹೆಚ್ಚು ದೇಶಗಳು ಕೋವಿನ್ ಬಳಸಿಕೊಳ್ಳಲು ಆಸಕ್ತಿ ತೋರಿದೆ.

CoWin ನಿಂದಲೇ ಪಾಸ್‌ಪೋರ್ಟ್‌ಗೆ ವ್ಯಾಕ್ಸೀನ್ ಸರ್ಟಿಫೀಕೇಟ್ ಲಿಂಕ್ ಮಾಡೋದೇಗೆ ?.

ವಿದೇಶಗಳ ಬೇಡಿಕೆ ಹೆಚ್ಚಾಗುತ್ತದ್ದಂತೆ ಪ್ರಧಾನಿ ನರೇಂದ್ರ ಮೋದಿ, ಕೋವಿನ್ ಪೋರ್ಟಲ್ ತಂತ್ರಜ್ಞಾನವನ್ನು ಓಪನ್ ಸೋರ್ಸ್ ವರ್ಶನ್ ನೀಡಲು ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲ ಇದು ಉಚಿತವಾಗಿ ನೀಡಲು ಸೂಚಿಸಿದ್ದಾರೆ. ಈ ಮೂಲಕ ಕೋವಿನ್ ಬಳಸಲು ಇಚ್ಚಿಸುವ ದೇಶಗಳು ಸುಲಭವಾಗಿ, ಯಾವುದೇ ಅಡೆ ತಡೆ ಇಲ್ಲದೆ ಬಳಕೆ ಮಾಡುವಂತೆ ಅನುವು ಮಾಡಿಕೊಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಡಾ. ಆರ್.ಎಸ್ .ಶರ್ಮಾಗೆ ಮೋದಿ ಸೂಚಿಸಿದ್ದಾರೆ.

Scroll to load tweet…

ಮೋದಿ ಸೂಚನೆ ಬೆನ್ನಲ್ಲೇ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ಕೋವಿನ ಇದೀಗ ಅತ್ಯಂತ ಜನಪ್ರಿಯವಾಗಿದೆ. ಸೆಂಟ್ರಲ್ ಏಷ್ಯಾ, ಲ್ಯಾಟಿನ್ ಅಮೆರಿಕ, ಆಫ್ರಿಕಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಕೋವಿನ್ ತಂತ್ರಜ್ಞಾನ ಬಳಸಲು ಆಸಕ್ತಿ ತೋರಿದೆ. ಇದೀಗ ಪ್ರಧಾನಿ ಮೋದಿ, ಉಚಿತವಾಗಿ ಕೋವಿನ್ ತಂತ್ರಜ್ಞಾನವನ್ನು ಓಪನ್ ಸೋರ್ಸ್ ವರ್ಶನ್ ನೀಡಿ ಎಂದು ಸೂಚಿಸಿದ್ದಾರೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಕೋವಿನ್‌ನಿಂದ ಲಸಿಕೆ ನೀಡುವಿಕೆ ಪ್ರಕ್ರಿಯೆ ಸರಳವಾಗಲಿದೆ. ನೋಂದಣಿ ಮಾಡಿದವರಿಗೆ ಮೆಸೇಜ್ ಬರಲಿದೆ. ಇನ್ನು ಇಂಗ್ಲೀಷ್, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.