CoWin ನಿಂದಲೇ ಪಾಸ್‌ಪೋರ್ಟ್‌ಗೆ ವ್ಯಾಕ್ಸೀನ್ ಸರ್ಟಿಫೀಕೇಟ್ ಲಿಂಕ್ ಮಾಡೋದೇಗೆ ?
- CoWin ನಿಂದಲೇ ಪಾಸ್‌ಪೋರ್ಟ್‌ಗೆ ವ್ಯಾಕ್ಸೀನ್ ಸರ್ಟಿಫೀಕೇಟ್ ಲಿಂಕ್
- ಜನರಿಗೆ ಸುಲಭ ರೀತಿಯಲ್ಲಿ ಸರ್ಟಿಫಿಕೇಟ್ ಎಟ್ಯಾಚ್ ಮಾಡೋ ಅವಕಾಶ
ದೆಹಲಿ(ಜೂ.26): ದೇಶದ ಕೋವಿಡ್ -19 ವ್ಯಾಕ್ಸಿನೇಷನ್ ಪ್ಲಾಟ್‌ಫಾರ್ಮ್ ಕೋವಿನ್ ಈಗ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಿದೆ.
ಆರೋಗ್ಯಾ ಸೇತು ಆ್ಯಪ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. "ಈಗ ನೀವು ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ನಿಮ್ಮ ಪಾಸ್ಪೋರ್ಟ್ ಸಂಖ್ಯೆಯನ್ನು ನವೀಕರಿಸಬಹುದು" ಎಂದು ಆರೋಗ್ಯ ಸೇತು ಹ್ಯಾಂಡಲ್ ಟ್ವೀಟ್ ಮಾಡಿದೆ.
ಪಾಸ್ಪೋರ್ಟ್ ಅನ್ನು ವ್ಯಾಕ್ಸಿನೇಷನ್ ಪ್ರಮಾಣಪತ್ರಕ್ಕೆ ಹೇಗೆ ಲಿಂಕ್ ಮಾಡುವುದು ? ಇಲ್ಲಿದೆ ಸರಳ ವಿಧಾನ :
(1.) cowin.gov.in ಗೆ ಲಾಗಿನ್ ಮಾಡಿ ಮತ್ತು ನಿಮ್ಮ ಮಾಹಿತಿ ನಮೂದಿಸಿ.
(2.) "Raise an issue" ಎಂಬುದನ್ನು ಆಯ್ಕೆಮಾಡಿ.
(3.) "ಪಾಸ್‌ಪೋರ್ಟ್" ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ, ಪಾಸ್‌ಪೋರ್ಟ್‌ಗೆ ಲಿಂಕ್ ಮಾಡಬೇಕಾದ ಪ್ರಮಾಣಪತ್ರದ ವ್ಯಕ್ತಿಯ ಹೆಸರನ್ನು ಆಯ್ಕೆ ಮಾಡಿ.
(4.) ಪಾಸ್ಪೋರ್ಟ್ ಸಂಖ್ಯೆಯನ್ನು ನಮೂದಿಸಿ ಮತ್ತು "Submit" ಕ್ಲಿಕ್ ಮಾಡಿ.
(5.) ಬಳಕೆದಾರರು ನವೀಕರಿಸಿದ ಪ್ರಮಾಣಪತ್ರವನ್ನು ಕೆಲವೇ "ಸೆಕೆಂಡುಗಳಲ್ಲಿ" ಸ್ವೀಕರಿಸುತ್ತಾರೆ.
(6.) ಪ್ರಮಾಣಪತ್ರದಲ್ಲಿನ ಹೆಸರು ಪಾಸ್‌ಪೋರ್ಟ್‌ನಲ್ಲಿ ಹೊಂದಿಕೆಯಾಗದಿದ್ದರೆ, ಹೆಸರನ್ನು ಸರಿಪಡಿಸಲು ಸಹ ನಿಮಗೆ ಅವಕಾಶವಿದೆ
(7.) ಪಾಸ್ಪೋರ್ಟ್ ಸಂಖ್ಯೆಯನ್ನು ನಮೂದಿಸಿ ಮತ್ತು ಹೆಸರು ಬದಲಾವಣೆಗೆ ಒಂದು ಸಲ ರಿಕ್ವೆಸ್ಟ್ ಮಾಡಬಹುದು. ಹೀಗಾಗಿ, ವಿವರಗಳನ್ನು ನಮೂದಿಸುವಾಗ ಕಾಳಜಿ ವಹಿಸಬೇಕು.
ವೈಯಕ್ತಿಕ ವಿವರಗಳನ್ನು ಹೇಗೆ ಎಡಿಟ್ ಮಾಡುವುದು:
(1.) cowin.gov.in ಗೆ ಹೋಗಿ ಮತ್ತು ಲಾಗಿನ್ ಮಾಡಿ.
(2.) "Raise an issue" ಆಯ್ಕೆಮಾಡಿ.
(3.) Correction in certificate "ಪ್ರಮಾಣಪತ್ರದಲ್ಲಿ ತಿದ್ದುಪಡಿ" ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ, ನೀವು ಬದಲಾಯಿಸಲು ಬಯಸುವ ವಿವರಗಳನ್ನು ಆಯ್ಕೆಮಾಡಿ.
(4.) ತಿದ್ದುಪಡಿ ಮಾಡಬೇಕಾದ ಎಲ್ಲಾ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ಎಡಿಟ್ ಮಾಡಿ.
(5.) "Submit" ಕ್ಲಿಕ್ ಮಾಡಿ.