ಚೀನಾದಲ್ಲಿ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಸ್ಥಗಿತ; ಕಾರಣ ತಿಳಿಸಿದ ಮೈಕ್ರೋಸಾಫ್ಟ್!
- ಫೇಸ್‌ಬುಕ್, ಟ್ವಿಟರ್, ಮೆಸೇಂಜರ್ ರೀತಿ ಚೀನಾದಿಂದ ಲಿಂಕ್ಡ್ ಇನ್ ಮಾಯ
- ಚೀನಾದಲ್ಲಿ ಲಿಂಕ್ಡ್ ಇನ್ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್
- 2014ರಿಂದ ಚೀನಾದಲ್ಲಿ ಲಿಂಕ್ಡ್ ಇನ್ ಆರಂಭ, 2021ರಲ್ಲಿ ಸ್ಥಗಿತ
ಬೀಜಿಂಗ್(ಅ.15): ಚೀನಾದಲ್ಲಿ ಇತರ ದೇಶದ ಸಾಮಾಜಿಕ ಜಾಲತಾಣಗಳು, ಆ್ಯಪ್‌ಗಳಿಗೆ ಅವಕಾಶವಿಲ್ಲ. ಆದರೆ ಅಮೆರಿಕದ ಮೂಲದ ಅತೀ ದೊಡ್ಡ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಚೀನಾದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಚೀನಾದಲ್ಲಿ ಲಿಂಕ್ಡ್ ಇನ್ ಸೇವೆ ಕೂಡ ಸ್ಥಗಿತಗೊಳ್ಳುತ್ತಿದೆ. ಈ ಕುರಿತು ಮೈಕ್ರೋಸಾಫ್ಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಯಾರನ್ನೂ ಸೆಳೆಯುತ್ತಿಲ್ಲವೇ? ಈ ಕಾರಣಗಳಿರಬಹುದು...
ಚೀನಾದಲ್ಲಿ ಹೆಚ್ಚು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಚೀನಾ ಪರಿಸರದಲ್ಲಿ ಲಿಂಕ್ಡ್ ಇನ್ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಲಿಂಕ್ಡ್ ಇನ್ ಸೇವೆ ಸ್ಥಗಿತಗೊಳಿಸುತಿದ್ದೇವೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಿಂಕ್ಡ್ ಇನ್ ಸ್ಥಳೀಯವಾಗಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಕೆಲ ಅಸಹಜ ಪರಿಸ್ಥಿತಿಯಿಂದ ಚೀನಾದಲ್ಲಿ ಲಿಂಕ್ಡ್ ಇನ್ ಮುಂದುವರಿಯುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಮೈಕ್ರೋಸಾಫ್ಟ್ ಪ್ರಕಟಣೆಯಲ್ಲಿ ಹೇಳಿದೆ.
ಕಳೆದ ಕೆಲ ತಿಂಗಳುಗಳಿಂದ ಚೀನಾ ಇಂಟರ್ನೆಟ್ ರೆಗ್ಯುಲೇಟರ್ ಹಾಗೂ ಲಿಂಕ್ಡ್ ಇನ್ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಲಿಂಕ್ಡ್ ಇನ್ ಕಂಟೆಂಟ್ ಆಧುನಿಕಗೊಳಿಸಬೇಕು. ಚೀನಾದ ನಿಯಮಗಳಿಗೆ ಅನುಸಾರವಾಗಿ ಪರಿವರ್ತನೆ ಆಗಬೇಕು ಎಂದು ಸೂಚನೆ ನೀಡಿತ್ತು. ಇಷ್ಟೇ ಚೀನಾ ಲಿಂಕ್ಡ್ ಇನ್ ಕೆಲ ಅಮೆರಿಕ ಪತ್ರಕರ್ತರ ಲಿಂಕ್ಡ್ ಇನ್ ಖಾತೆಯನ್ನು ಬ್ಲಾಕ್ ಮಾಡಿತ್ತು. ಇದೀಗ ಲಿಂಕ್ಡ್ ಇನ್ ಸೇವೆಯೇ ಸ್ಥಗಿತಗೊಳ್ಳುವ ಮೂಲಕ ಚೀನಾ ತನ್ನ ಮೇಲುಗೈ ಸಾಧಿಸಿದೆ.
ಇದು ತಾಜ್ ಮಹಲ್ ಅಲ್ವೇ ಅಲ್ಲ, ಹೀಗಿದೆ ನೋಡಿ Microsoft ಹೊಸ ಆಫೀಸ್!
ಚೀನಾದಲ್ಲಿ ಫೇಸ್‌ಬುಕ್, ಟ್ವಿಟರ್, ಮೆಸೇಂಜರ್ ಸೇರಿದಂತೆ ಇತರ ದೇಶಗಳ ಪ್ರಖ್ಯಾತ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಸೋಶಿಯಲ್ ಮಿಡಿಯಾಗಳನ್ನು ಚೀನಾದೊಳಗೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಕಾರ್ಯನಿರ್ವಹಿಸುತ್ತಿದ್ದ ಲಿಂಕ್ಡ್ ಇನ್ ಕೂಡ ಇದೀಗ ಕಾಲ್ಕಿತ್ತಿದೆ. ಈ ಮೂಲಕ ಅಮೆರಿಕ ಹಾಗೂ ಇತರ ದೇಶದ ಯಾವುದೇ ಸಾಮಾಜಿಕ ಜಾಲತಾಣ ಚೀನಾದಲ್ಲಿ ಇಲ್ಲ. ಚೀನಾದಲ್ಲಿ ಅಲ್ಲಿನ ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಸದ್ಯ ಅಮೆರಿಕದ ಮೂಲದ ಟೆಕ್ ಕಂಪನಿಗಳಲ್ಲಿ ಆ್ಯಪಲ್ ಮಾತ್ರ ಚೀನಾದಲ್ಲಿ ಉಳಿದಿಕೊಂಡಿದೆ. ಚೀನಾದಿಂದ ಮೈಕ್ರೋಸಾಫ್ಟ್ ಸಂಪೂರ್ಣವಾಗಿ ಕಾಲ್ಕಿತ್ತಿಲ್ಲ. ಉದ್ಯೋಗ ಹುಡುಕುವ ಜಾಬ್ ಇನ್ ಕಾರ್ಯನಿರ್ವಹಿಸಲಿದೆ. ಇದು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಸ್ಥಳೀಯ ನೆರವಿನಿಂದಲೇ ಕಾರ್ಯನಿರ್ವಹಿಸಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ..?
ಮೈಕ್ರೋಸಾಫ್ಟ್ ಚೀನಾದಲ್ಲಿ ಆರಂಭಿಸುವ ಜಾಬ್ ಇನ್ ಆ್ಯಪ್, ಇತರ ಫೀಡ್‌ಗಳನ್ನು ನೀಡುವುದಿಲ್ಲ. ಕೇವಲ ಉದ್ಯೋಗ ಹುಡುಕವ, ಉದ್ಯೋಗ ಪಡೆದುಕೊಳ್ಳುವ ತಾಣವಾಗಿ ಕೆಲಸ ಮಾಡಲಿದೆ.
2014ರಲ್ಲಿ ಲಿಂಕ್ಡ್ ಇನ್ ಚೀನಾಗೆ ಕಾಲಿಟ್ಟಿತು. ಆರಂಭದಲ್ಲೇ ಚೀನಾ ನಿಯಮಕ್ಕೆ ಒಪ್ಪಿ ಲಿಂಕ್ಡ್ ಇನ್ ಆರಂಭಗೊಂಡಿತ್ತು. ಲಿಂಕ್ಡ್ ಇನ್ ಕೆಲಸ ಹಾಗೂ ಇತರ ಮಾಹಿತಿಗಳನ್ನು ನೀಡಬೇಕು, ಇದರಲ್ಲಿ ಸಾಮಾಜಿಕ ಜಾಲತಾಣಗಳಂತೆ ಫೀಡ್ ಇರಬಾರದು ಎಂದು ಚೀನಾ ಸೂಚಿಸಿತ್ತು. ಹೀಗಾಗಿ ಕಂಟೆಂಟ್ ಹಾಗೂ ಆ್ಯಪ್ ಡೆವಲಂಪಿಂಗ್ ಬದಲಿಸುವಂತೆ ಚೀನಾ ಸೂಚಿಸಿತ್ತು. ಈ ಹಗ್ಗಜಗ್ಗಾಟದಲ್ಲಿ ಮೈಕ್ರೋಸಾಫ್ಟ್ ಲಿಂಕ್ಡ್ ಇನ್ ಸೇವೆಯನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿದೆ.