ಇದು ತಾಜ್ ಮಹಲ್ ಅಲ್ವೇ ಅಲ್ಲ, ಹೀಗಿದೆ ನೋಡಿ Microsoft ಹೊಸ ಆಫೀಸ್!

First Published Jan 30, 2021, 4:40 PM IST

ಕೊರೋನಾ ಮಹಾಮಾರಿ ಎಂಟ್ರಿ ಕೊಟ್ಟಾಗಿನಿಂದ ವರ್ಕ್ ಫ್ರಂ ಹೋಂ ಮಾಡುತ್ತಿರುವ Microsoft ಉದ್ಯೋಗಿಗಳಿಗೆ ಆಫೀಸ್‌ಗೆ ಮರಳಿದ ಬಳಿಕ ಲಕ್ಸರಿ ಲೈಫ್ ಸಿಗುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಟೆಕ್ನಾಲಜಿ ಕಂಪನಿ ದೆಹಲಿ ಎನ್‌ಸಿಆರ್‌ನ ನೊಯ್ಡಾದಲ್ಲಿ ತನ್ನ ಆಫೀಸ್ ಆರಂಭಿಸಿದೆ. ಇದನ್ನು ಕಂಪನಿ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್ ಎನ್‌ಸಿಆರ್‌ ಎಂದು ನಾಮಕರಣ ಮಾಡಿದೆ. ಇನ್ನು ಇದು ಭಾರತದಲ್ಲಿ Microsoft ಕಂಪನಿಯ ಮೂರನೇ ಆಫಿಸ್ ಎಂಬುವುದು ಉಲ್ಲೇಖನೀಯ. ಇನ್ನುಳಿದ ಎರಡು ಆಫೀಸ್‌ಗಳು ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿವೆ. ಆದರೀಗ ನೂತನವಾಗಿ ದೆಹಲಿಯಲ್ಲಿ ಆರಂಭವಾಗಿರುವ ಈ ಕಂಪನಿ ಆಪೀಸ್‌ ಫೋಟೋಗಳು ವೈರಲ್ ಆಗಿದ್ದು, ನೋಡುಗರಿಗೆ ಇವು ಪ್ರೇಮ ಸೌಧ ತಾಜ್‌ಮಹಲ್ ನೆನಪುಗಳನ್ನು ಕೊಟ್ಟಿದೆ.