2 ದಿನ ಬಿಎಸ್ಸೆನ್ನೆಲ್‌ನಿಂದ ಉಚಿತ ಕರೆ, ಬ್ರಾಡ್‌ಬ್ಯಾಂಡ್‌

ಬಿಎಸ್‌ಎನ್‌ಎಲ್‌ ದೀಪಾವಳಿ ಹಬ್ಬದ ಪ್ರಯುಕ್ತ ಅ.27 ಮತ್ತು 28ರಂದು ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಅನಿಯಮಿತ ಉಚಿತ ಕರೆ ಸೌಲಭ್ಯದ ಕೊಡುಗೆ ನೀಡಿದೆ.

BSNL Offer Free Calling  for Landline

ಬೆಂಗಳೂರು [ಅ.27]: ಭಾರತ್‌ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ದೀಪಾವಳಿ ಹಬ್ಬದ ಪ್ರಯುಕ್ತ ಅ.27 ಮತ್ತು 28ರಂದು ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಅನಿಯಮಿತ ಉಚಿತ ಕರೆ ಸೌಲಭ್ಯದ ಕೊಡುಗೆ ನೀಡಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರು ಈ ಎರಡು ದಿನಗಳ ಕಾಲ ದಿನದ 24 ತಾಸು ಅನಿಯಮಿತವಾಗಿ ಉಚಿತ ಕರೆ ಮಾಡಬಹುದು. ಅಲ್ಲದೆ, ಬಿಎಸ್‌ಎನ್‌ಎಲ್‌ ಮುಂದಿನ ಕೆಲವೇ ತಿಂಗಳಲ್ಲಿ ದೇಶದ ಹಲವು ಪಟ್ಟಣ ಹಾಗೂ ಹಳ್ಳಿಗಳಿಗೆ ಭಾರತ್‌ ಫೈಬರ್‌ ಸರ್ವಿಸ್‌ ಕಲ್ಪಿಸಲು ನಿರ್ಧರಿಸಿದೆ. 

ಇದು ಅಂತಿಂಥ ವ್ಯಾಕ್ಯೂಂ ಕ್ಲೀನರ್ ಅಲ್ಲ, ಮಾತಿನಲ್ಲೇ ಕೆಲ್ಸ ಮಾಡುತ್ತೆ ಎಲ್ಲಾ!...

ಬ್ರಾಡ್‌ಬ್ಯಾಂಡ್‌ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಉತ್ತಮ ಅನುಭವ ನೀಡುವುದು ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ನ 50 ಎಂಬಿಪಿಎಸ್‌ ವೇಗದ 500 ಜಿಬಿ ಡೌನ್‌ಲೋಡ್‌ ಪ್ಲಾನ್‌ ಹೆಚ್ಚು ಜನಪ್ರಿಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ

Latest Videos
Follow Us:
Download App:
  • android
  • ios