ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ
ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ಮಾಡುತ್ತಲೇ ಇದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇದೀಗ ಸ್ಟಾರ್ಟಪ್ ಕಂಪನಿಯೊಂದು ಇದೇ ಕೆಲಸಕ್ಕಾಗಿ ಮೊಬೈಲ್ ಆಪ್‌ವೊಂದನ್ನು ಬಿಡುಗಡೆ ಮಾಡಿದೆ. ಈ ಆಪ್ ಮತದಾರರಿಗೆ ಚುನಾವಣೆಯ ಎಲ್ಲ ಮಾಹಿತಿ ಜೊತೆಗೆ ಆರ್ಥಿಕಾಭಿವೃದ್ಧಿಯ ಮಾಹಿತಿಯನ್ನು ಒದಗಿಸುತ್ತದೆ. ಈ ಮೂಲಕ ಮತದಾರರು ಸೂಕ್ತ ನಿರ್ಧಾರ ಕೈಗೊಳ್ಳಲು ನೆರವು ನೀಡುತ್ತದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಮ್ ಸೇರಿ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಚುನಾವಣೆಗೆ ಸನ್ನದ್ಧವಾಗಿವೆ. ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಮತದಾರರನ್ನು ಪೂರ್ತಿಯಾಗಿ ಜಾಗೃತಿಗೊಳಿಸುವ ಕೆಲಸವನ್ನು ಈ ಪಕ್ಷಗಳು ಮಾಡುತ್ತಿವೆಯೇ? ಖಂಡಿತ ಇಲ್ಲ. ಈ ಹಿನ್ನೆಲೆಯಲ್ಲೇ ಸ್ಟಾರ್ಟಪ್‌ವೊಂದು ಮತದಾರರನ್ನು ಫ್ಯಾಕ್ಟ್ ಬೇಸ್ಡ್ ಆಗಿಯೇ ಜಾಗೃತಿಗೊಳಿಸಲು ಕೆಲಸಕ್ಕೆ ಮುಂದಾಗಿದೆ ಮತ್ತು ಇದಕ್ಕಾಗಿಯೇ ಪ್ರತ್ಯೇಕ ಆಪ್ ಹೊರ ತಂದಿದೆ.
ಮೇರಾ ರೇಷನ್ ಕಾರ್ಡ್ ಆಪ್ ಬಿಡುಗಡೆ: ಸಮೀಪದ ರೇಷನ್ ಅಂಗಡಿ ಎಲ್ಲಿದೆ ತಿಳಿಯಿರಿ
ಈ ಆಪ್ ಹೆಸರು ಬೋಲ್‌ಸುಬೋಲ್(BolSubol). ಈ ಮೊಬೈಲ್ ಆಪ್ ಸಾಂಪ್ರದಾಯಿಕ ರೀತಿಯಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಆಪ್ ಎಂದು ಭಾವಿಸಬೇಕಿಲ್ಲ. ಇದು ಹಲವು ರೀತಿಯಲ್ಲಿ ಭಿನ್ನವಾಗಿದೆ. ಚುನಾವಣೆಯಲ್ಲಿ ಮತದರಾರರು ಸರಿಯಾದ ನಿರ್ಧಾರ ಕೈಗೊಳ್ಳಲು ಈ ಆಪ್ ಸಹಾಯ ಮಾಡುತ್ತದೆ ಎಂಬುದು ಆಪ್ ನಿರ್ಮಾತೃಗಳ ಅಂಬೋಣವಾಗಿದೆ.
ಒಂದು ಕೇಂದ್ರಾಡಳಿತ ಮತ್ತು ನಾಲ್ಕು ರಾಜ್ಯಗಳಲ್ಲಿ ಈಗ ಚುನಾವಣೆಯ ಕಾವು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ಟಪ್ ಚುನಾವಣಾ ಅಂಕಿ-ಸಂಖ್ಯೆಗಳು ಮತ್ತು ದೇಶದ ಆರ್ಥಿಕ ಸ್ಥಿತಿಯ ಮೇಲಿನ ಡೇಟಾವನ್ನು ಒಳಗೊಂಡಿರುವ ಮೊಬೈಲ್ ಆಪ್ ಬೋಲ್‌ಸುಬೋಲ್ ಅನಾವರಣ ಮಾಡಿದೆ. ಈ ಮೂಲಕ ಮತದಾರರಿಗೆ ಫ್ಯಾಕ್ಟ್ ಬೇಸ್ಡ್ ಆಧರಿತ ಅಂದರೆ ಸತ್ಯ ಸಂಗತಿಗಳಾಧರಿತ ಜಾಗೃತಿಯನ್ನು ಇದು ನೀಡಲಿದೆ. ಆ ಮೂಲಕ, ಮತದಾರರ ತಮ್ಮ ಹಕ್ಕನ್ನು ಚಲಾಯಿಸುವ ಮುನ್ನ ಫ್ಯಾಕ್ಟ್ ಬೇಸ್ಡ್ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಸ್ಟಾರ್ಟಪ್‍ನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡೆಮೊಕ್ರಟಿಕಾ ಎಂಬ ನವೋದ್ಯಮವು ಈ ಬೋಲ್‌ಸುಬೋಲ್ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿ, ವಿನ್ಯಾಸಗೊಳಿಸಿ ಈಗ ಅನಾವರಣಗೊಳಿಸಿದೆ. ಕಳೆದ 60 ವರ್ಷದಲ್ಲಿನ ಸರಾಸರಿ ಎಲ್ಲ ಆರ್ಥಿಕ ಮತ್ತು ರಾಜಕೀಯ ಮಾಹಿತಿಯನ್ನು ಈ ಆಪ್ ಒಳಗೊಂಡಿದೆ ಎಂದು ಸ್ಟಾರ್ಟಪ್ ಕಂಪನಿ ಹೇಳಿಕೊಂಡಿದೆ. ಹಾಗಾಗಿ, ಈ ಆಪ್ ಒಂದು ರೀತಿಯಲ್ಲಿ ನಿಮ್ಮನ್ನು ಚುನಾವಣೆಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಬಹುದು.
ಪ್ರಿಪೇಡ್ ಗ್ರಾಹಕರಿಗೆ Viನಿಂದ 4 ಹೊಸ ಪ್ಲ್ಯಾನ್; ಏನೆಲ್ಲ ಲಾಭಗಳಿವೆ ಪರೀಕ್ಷಿಸಿಕೊಳ್ಳಿ!
ಚುನಾವಣಾ ಆಯೋಗದ ಪ್ರಯತ್ನಗಳ ಹೊರತಾಗಿ ಮತದಾರರನ್ನು ಸಶಕ್ತಗೊಳಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಅಷ್ಟೇನೂ ಮಾಡಿಲ್ಲ. ಆದ್ದರಿಂದಲೇ ಈ ಬೋಲ್‌ಸುಬೋಲ್ ಆಪ್ ಹೊರ ತರಲಾಗಿದೆ. ಇದು ಶಸಕ್ತವಾದ ಮೈಕ್ರೋಬ್ಲಾಗಿಂಗ್ ಟೂಲ್ ಅನ್ನು ಒದಗಿಸಲಿದೆ ಎಂದು ಕಂಪನಿಯ ನಿರ್ದೇಶಕರಲ್ಲಿರೊಬ್ಬರಾದ ರಿತೇಶ್ ವರ್ಮಾ ತಿಳಿಸಿದ್ದಾರೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಡಿಜಿಟಲ್ ವೇದಿಕೆಗಳು ಕೇವಲ ಸೋಷಿಯಲ್ ನೆಟ್ವರ್ಕಿಂಗ್ ಅಪ್ಲಿಕೇಷನ್‌ಗಳಾಗಿವೆ. ಇವು, ಮತದಾರರು ಸತ್ಯ ಸಂಗತಿಗಳನ್ನಾಧರಿಸಿ ನಿರ್ಧಾರ ಕೈಗೊಳ್ಳಲು ಯಾವುದೇ ನೆರವು ನೀಡುವುದಿಲ್ಲ ಎಂದು ಕಂಪನಿಯ ಮತ್ತೊಬ್ಬ ನಿರ್ದೇಶಕ ಶೇಷಗಿರಿ ಆನೆಗೊಂದಿ ತಿಳಿಸಿದ್ದಾರೆ.
ಈ ಬೋಲ್‌ಸುಬೋಲ್ ಆಪ್‌ನಲ್ಲಿ ಎಲೆಕ್ಷನ್ ಜ್ಞಾನಕ್ಕೆ ಸಂಬಂಧಿಸಿದ ಗೇಮ್ ಕೂಡ ಇದ್ದು ಬಳಕೆದಾರರ ಆಡಬಹುದಾಗಿದೆ. ಈ ಆಪ್‌ನ ಬಹುತೇಕ ಎಲ್ಲ ಫೀಚರ್‌ಗಳು ಉಚಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊಬೈಲ್ ಅಪ್ಲಿಕೇಷನ್‌ನ ಒಂದಿಷ್ಟು ಫೀಚರ್‌ಗಳ ಬಳಕೆಗೆ ಬಳಕೆದಾರರು ಹಣ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ; ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್
ತಮಿಳುನಾಡು, ಕೇರಳ ಮತ್ತು ಪುದುಚೆರಿಗಳಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಇದೇ ವೇಳೆ, ಅಸ್ಸಾಮ್‌ನ ರಾಜ್ಯ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಿಂದ ಮೊದಲನೆಯ ಹಂತ ಆರಂಭವಾಗಲಿದೆ. ಇನ್ನು ಪಶ್ಚಿಮ ಬಂಗಾಳ ವಿಧಾನಸಭೆಗೆ 8 ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಿಂದ ಆರಂಭವಾಗಿ ಏಪ್ರಿಲ್ 29ರವರೆಗೂ 8 ಹಂತಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ. ಮೇ 2ರಂದು ಐದು ರಾಜ್ಯ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.