ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಬಿಡುಗಡೆ; ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್

ಭಾರತೀಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಸ್ಯಾಮ್ಸಂಗ್ ಮತ್ತೊಂದು ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಫೋನ್ ಬೆಲೆ ಕೈಗೆಟಕುವಂತಿದೆ. ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಈ ಫೋನ್‌ನಲ್ಲಿ ಪವರ್‌ಫುಲ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.

Samsung Galaxy M12 released to Indian market

ಶಿವರಾತ್ರಿ ಹಬ್ಬಕ್ಕೆ ಸ್ಯಾಮ್ಸಂಗ್ ತನ್ನ ಸ್ಮಾರ್ಟ್‌ಪೋನ್ ಗ್ರಾಹಕರಿಗೆ ಸಂತೋಷ ಸುದ್ದಿ ನೀಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್, 6000 ಎಂಎಎಚ್ ಬ್ಯಾಟರಿ, ಸ್ಯಾಮ್ಸಂಗ್ Exynos 850 ಪ್ರೊಸೆಸರ್ ಒಳಗೊಂಡಿದೆ. ಇನ್ನು ಕ್ಯಾಮೆರಾ ಸೆಟ್‌ಅಪ್‌ನಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ, 3.5 ಎಂಎಂ ಆಡಿಯೊ ಜಾಕ್, ಸ್ಮಾರ್ಟ್‌ಫೋನ್‌ನ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್  ಕೊಡಲಾಗಿದೆ. ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಹಲವು ವಿಶೇಷ ಮತ್ತು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿದೆ. ಬ್ಯಾಟರಿ ವಿಷಯದಲ್ಲಿ ಈ ಫೋನ್‌ ಇತರ ಫೋನ್‌ಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಬಲಶಾಲಿಯಾದ  ಬ್ಯಾಟರಿಯನ್ನು ಇದು ಒಳಗೊಂಡಿದೆ.

ರಿಯಲ್‌ಮಿ 8 ಪ್ರೋ ಸ್ಮಾರ್ಟ್‌ಫೋನ್‌ ಮಾ.25ಕ್ಕೆ ಬಿಡುಗಡೆ?

ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಎರಡು ಮಾದರಿಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಇದರ ಪರಿಣಾಮ ಬೆಲೆಯಲ್ಲೂ ವ್ಯತ್ಯಾಸವಿರಲಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಫೋನ್ ಬೆಲೆ 10,999 ರೂಪಾಯಿ ಇದ್ದರೆ, 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ 13,499 ರೂಪಾಯಿ ಇರಲಿದೆ. ಈ  ಬೆಲೆಗಳನ್ನು ಗಮನಿಸಿದರೆ ತೀರಾ ತುಟ್ಟಿಯ ಫೋನ್‌ಗಳೇನೂ ಅಲ್ಲ. ಬಜೆಟ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಬಹುತೇಕ ಫೀಚರ್‌ಗಳನ್ನು ನೀಡುವ ಪ್ರಯತ್ನ ಮಾಡಿದೆ ಎಂದು ಹೇಳಬಹುದು.

ಆಕರ್ಷಕ ಕಪ್ಪು, ಎಲೆಗಂಟ್ ನೀಲಿ ಮತ್ತು ಟ್ರೆಂಡಿ ಎಮರ್ಲಾಡ್ ಗ್ರೀನ್ ಬಣ್ಣಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಮಾರಾಟಕ್ಕೆ ಸಿಗಲಿದೆ. ಇ ಕಾಮರ್ಸ್ ತಾಣವಾದ ಅಮೆಜಾನ್, ಸ್ಯಾಮ್ಸಂಗ್ ಡಾಟ್ ಕಾಮ್ ಆನ್‌ಲೈನ್‌ನಲ್ಲಿ ಲಭ್ಯವಾದರೆ, ಕೆಲವು ಆಯ್ದ ರಿಟೇಲ್ ಸ್ಟೋರ್‌ಗಳಲ್ಲೂ ಈ ಫೋನ್ ಮಾ.18ರಿಂದ ಮಾರಾಟಕ್ಕೆ ದೊರೆಯಲಿದೆ. ಲಾಂಚಿಂಗ್ ಆಫರ್ ಆಗಿ ಐಸಿಐಸಿಐ ಬ್ಯಾಂಕ್ ಕಾರ್ಡ್ ಗ್ರಾಹಕರಿಗೆ ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ.

Samsung Galaxy M12 released to Indian market

ವಿಶೇಷತೆಗಳೇನು?
- ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್ ಆಂಡ್ರಾಯ್ಡ್ ಆಧರಿತ ಯುಐ ಕೋರ್ ಒಎಸ್ ‌ಮೂಲಕ ರನ್ ಆಗುತ್ತದೆ. ಇದು ನ್ಯಾನೋ ಡುಯಲ್ ಸಿಮ್‌ಗಳಿಗೆ ಸಪೋರ್ಟ್ ಮಾಡುತ್ತದೆ.

- ಈ ಫೋನ್ 6.5 ಇಂಚ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಎಚ್‌ಡಿ ಪ್ಲಸ್ ಟಿಎಫ್‌ಟಿ ಇನ್‌ಫಿನಿಟಿ ವಿ ಡಿಸ್‌ಪ್ಲೇಯಾಗಿದೆ. Exynos 850 ಪ್ರೊಸೆರ್ ಆಧರಿತವಾಗಿರುವ ಈ ಫೋನ್‌ನಲ್ಲಿ 4 ಜಿಬಿ ಮತ್ತು 6 ಜಿಬಿ ರ್ಯಾಮ್ ಇರಲಿದೆ.

BoAt Flash Watch ಬಿಡುಗಡೆ: 6,990 ರೂ. ಬೆಲೆ ವಾಚ್ 2,499 ರೂ.ಗೆ ಮಾರಾಟ!

- ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ನೀವು 128 ಜಿಬಿವರೆಗೂ ಪಡೆದುಕೊಳ್ಳಬಹುದು. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಸಾಮರ್ಥ್ಯವನ್ನು 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

- ಈ ಫೋನ್‌ನ ಹಿಂಬದಿಯಲ್ಲಿ ಒಟ್ಟು ನಾಲ್ಕು ಕ್ಯಾಮೆರಾಗಳಿವೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಉಳಿದ ಮೂರು ಕ್ಯಾಮೆರಾಗಳು, 5 ಮೆಗಾಪಿಕ್ಸೆಲ್, 2 ಮತ್ತು 2 ಮೆಗಾ ಪಿಕ್ಸಲ್ ಕ್ಯಾಮೆರಾಗಳಾಗಿವೆ.

- ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬಲಶಾಲಿ ಬ್ಯಾಟರಿ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಸ್ಮಾರ್ಟ್‌ಫೋನ್ ಬಲಶಾಲಿ 6,000 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ. 4ಜಿ ನೆಟ್ವರ್ಕ್‌ನಲ್ಲಿ ಇದು 58 ಗಂಟೆಗಳ ಟಾಕ್‌ಟೈಮ್ ಒದಗಿಸಲಿದೆ.

ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ

ಈ ಫೋನ್‌ನ  ಸೈಡಿನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಗ್ರಾಹಕರಿಗೆ ಫೋನ್ ಅನ್ಲಾಕ್ ಮಾಡಲು ಇದು ನೆರವು ನೀಡುತ್ತದೆ. ಕನೆಕ್ಟಿವಿಟಿಗೆ ಬಗ್ಗೆ ಹೇಳುವುದಾದರೆ, ಈ ಫೋನ್ 4ಜಿ ಎಲ್‌ಟಿಇಗೆ ಸಪೋರ್ಟ್ ಮಾಡುತ್ತದೆ. ವೈಫೈ, ಬ್ಲೂಟೂಥ್, ಜಿಬಿಎಸ್ ಎ ಜಿಪಿಎಸ್, ಯುಎಸ್‌ಬಿ ಟೈಪ್ –ಸಿ, 3.5 ಎಂಎಂ ಹೆಡ್‌ಫೋನ್ ಜಾಕ್ ಮತ್ತಿತರ ಸಂಗತಿಗಳಿವೆ.

Latest Videos
Follow Us:
Download App:
  • android
  • ios