ಮೇ.1 ರಿಂದ ಟೆಲಿಕಾಂ ನೀತಿಯಲ್ಲಿ ಮಹತ್ತರ ಬದಲಾವಣೆ ಆಗುತ್ತಿದೆ. ಇಷ್ಟು ದಿನ ಅನಗತ್ಯ ಕರೆ, ಅನಗತ್ಯ ಮೆಸೇಜ್ ಕಿರಿಕಿರಿ ಅನುಭವಿಸುತ್ತಿದ್ದ ಮೊಬೈಲ್ ಬಳಕೆದಾರಿರಿಗೆ ಇದೀಗ ಟ್ರಾಯ್ ಗುಡ್ ನ್ಯೂಸ್ ನೀಡಿದೆ. ಮೇ.1ರಿಂದ ಈ ರೀತಿ ಫೇಕ್ ಕಾಲ್, ಫೇಕ್ ಮೆಸೇಜ್‌ಗೆ ನಿರ್ಬಂಧ ಹೇರಲಾಗಿದೆ.

ನವದೆಹಲಿ(ಏ.27): ನಕಲಿ ಕರೆಗಳು, ನಕಲಿ ಮೆಸೇಜ್ ಕಿರಿಕಿರಿ ಅನುಭವಿಸಿದ ಮೊಬೈಲ್ ಬಳಕೆದಾರರ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಟ್ರಾಯ್ ಇದೀಗ ಟೆಲಿಕಾಂ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೇ.1 ರಿಂದ ಮೊಬೈಲ್ ಬಳಕೆದಾರರಿಗೆ ಈ ರೀತಿಯ ಯಾವುದೇ ಅನಗತ್ಯ ಕರೆ, ಅನಗತ್ಯ ಮೆಸೇಜ್ ಬರುವುದಿಲ್ಲ. ಈ ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.

ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್‌ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ. ಟೆಲಿಕಾಂ ಕಂಪನಿಗಳಿಂದ ನೀಡಲಾಗಿರುವ ಎಲ್ಲಾ ಹೆಡ್ಡರ್‌(ನೋಂದಣಿಯಾದ ಬಳಿಕ ನೀಡಲಾಗುವ ವಿಶೇಷ ನಂಬರ್‌ ಹಾಗೂ ಅಕ್ಷರಗಳ ಗುಚ್ಛ)ಗಳು ಮತ್ತು ಮೆಸೇಜ್‌ ಟೆಂಪ್ಲೇಟ್‌ಗಳನ್ನು ಪರಿಶೀಲನೆ ನಡೆಸಲಿದೆ. 

ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು, ಭಾರತದ 238 ನಗರದಲ್ಲಿ 5G ಸೇವೆ ಲಭ್ಯ!

ಜಿಯೋ, ಎರ್ಟೆಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೊರೆ ಹೋಗಿದೆ. ಅನಗತ್ಯ ಕರೆ ಹಾಗೂ ಸಂದೇಶ ನಿಯಂತ್ರಣಕ್ಕೆ AI ಮೂಲಕ ಕಾರ್ಯನಿರ್ವಹಿಸಲು ಮುಂದಾಗಿದೆ. ಈಗಾಗಲೇ ಟೆಲಿಕಾಂ ಕಂಪನಿಗಳು ಆರ್ಟಿಫೀಶಿಯಲ್ ಇಂಟೆಲೆಜೆನ್ಸಿ ಮೂಲಕ ಫೇಕ್ ಹಾಗೂ ಹಾಗೂ ಫೇಕ್ ಮೆಸೇಜ್‌ಗೆ ಕಡಿವಾಣ ಹಾಕಲಿದೆ.

ಅಪರಿಚಿತ ಕಾಲರ್‌ಗಳ ಹೆಸರೂ ಇನ್ನು ಮೊಬೈಲ್‌ನಲ್ಲಿ ಕಾಣುತ್ತೆ
ಅಪರಿಚಿತ ನಂಬರ್‌, ಸ್ಪಾ್ಯಮ್‌ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ಮಾರ್ಗ ಕಂಡು ಹಿಡಿದಿದೆ. ಫೋನ್‌ನಲ್ಲಿ ಸೇವ್‌ ಆಗಿರದ ನಂಬರ್‌ಗಳಿಂದ ಯಾರಾದರೂ ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್‌ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್‌ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ.ಟೆಲಿಕಾಂ ಆಪರೇಟರ್‌ ಬಳಿ ಲಭ್ಯವಿರುವ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್‌ನಲ್ಲಿ ಅಪರಿಚಿತ ನಂಬರ್‌ಗಳ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ.

ರಾಜ್ಯದಲ್ಲಿ 1114 ಗ್ರಾಮಗಳಿಗೆ ದೂರ ಸಂಪರ್ಕ ಜಾಲವಿಲ್ಲ

ಪ್ರಸ್ತುತ ಇಂತಹ ಸೌಲಭ್ಯವನ್ನು ಪಡೆಯಲು ಜನರು ‘ಟ್ರೂಕಾಲರ್‌’ನಂತಹ ಆ್ಯಪ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ. ಇಂತಹ ಆ್ಯಪ್‌ಗಳು ಮಾಹಿತಿಯನ್ನು ಕ್ರೌಡ್‌ಸೋರ್ಸಿಂಗ್‌ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿವೆ ಎನ್ನಲು ಸಾಧ್ಯವಾಗಿಲ್ಲ. ಆದರೆ ಕೆವೈಸಿ ಡೇಟಾಗಳು ಸಂಪೂರ್ಣವಾಗಿ ಅಧಿಕೃತ ಹಾಗೂ ನಂಬಲು ಅರ್ಹವಾಗಿರುತ್ತವೆ. ಒಂದು ವೇಳೆ ಕೆವೈಸಿ ಸರಿಯಾಗಿ ಮಾಡಿಸದಿದ್ದರೆ ಫೋನ್‌ನಲ್ಲಿ ಹೆಸರು ಕಂಡುಬರುವುದಿಲ್ಲ. ಹೀಗಾಗಿ ಟ್ರಾಯ್‌ನ ಈ ಹೊಸ ಉಪಕ್ರಮದಿಂದಾಗಿ ಟೆಲಿಕಾಂ ಸೇವೆ ಪೂರೈಕೆದಾರರು ಕೆವೈಸಿ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ.