Micromax is Back: 6,999 ಮತ್ತು 10,999 ರೂ.ಗೆ ಫೋನ್!
ಭಾರತೀಯ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮರಳಿದ್ದು, ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1 ಮತ್ತು ಮೈಕ್ರೋಮ್ಯಾಕ್ಸ್ ಐಎನ್ 1ಬಿ ಎಂಬ ಎರಡು ಬಜೆಟ್ ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ನವೆಂಬರ್ 26ರಿಂದ ಮಾರಾಟಕ್ಕೆ ಲಭ್ಯವಾಗಲಿವೆ.
ಕಳೆದ ಎರಡ್ಮೂರು ವರ್ಷಗಳಿಂದ ಮೈಕ್ರೋಮ್ಯಾಕ್ಸ್ ಬ್ರಾಂಡ್ ಹೆಸರನ್ನೇ ಜನರು ಮರೆತ್ತಿದ್ದರೇನೋ? ಅಂದರೆ, ಜನರ ಮನಸ್ಸಿನಿಂದಲೇ ಈ ಬ್ರ್ಯಾಂಡ್ ದೂರವಾಗಿತ್ತು. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಚೀನಾ ಮೂಲದ ಕಂಪನಿಗಳು ಲಗ್ಗೆ ಹಾಕುತ್ತಿದ್ದಂತೆ ಭಾರತೀಯ ಮೂಲದ ಈ ಮ್ಯಾಕ್ರೋಮ್ಯಾಕ್ಸ್ ಕಂಪನಿ ಸ್ಪರ್ಧೆಯಲ್ಲಿ ಸೋತು ಮಾರುಕಟ್ಟೆಯಿಂದಲೇ ಕಣ್ಮರೆಯಾಯಿತು. ಆದರೆ, ಇದೀಗ ಮತ್ತೆ ಮೈಕ್ರೋಮ್ಯಾಕ್ಸ್ ಮಾರುಕಟ್ಟೆಗೆ ಮರಳಿದೆ. ಹಾಗಾಗಿ Micromax is back ಅಂತಾ ಹೇಳಲಾಗುತ್ತಿದೆ.
ಗುರುಗಾಂವ್ ಮೂಲದ ಈ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿಕೊಂಡಿತ್ತು. ಆದರೆ, ಚೀನಾ ಮೂಲದ ಒಪ್ಪೋ, ವಿವೋ, ಶಿಯೋಮಿ ಬ್ರ್ಯಾಂಡ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆ ಮೈಕ್ರೋಮ್ಯಾಕ್ಸ್ ಹಿನ್ನಲೆಗೆ ಸರಿದಿತ್ತು. ಇದೀಗ ಮೇಕ್ ಇನ್ ಇಂಡಿಯಾ ಭಾಗವಾಗಿ ಮತ್ತೆ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಆರಂಭಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?
ಐಎನ್ ಸೀರಿಸ್‌ನಲ್ಲಿ ಮೈಕ್ರೋಮ್ಯಾಕ್ಸ್ ತನ್ನ ನೂತನ ಫೋನ್‌ಗಳನ್ನು ಕೊನೆಗೂ ಹಲವು ಟೀಸರ್‌ಗಳ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1 ಮತ್ತು ಮೈಕ್ರೋಮ್ಯಾಕ್ಸ್ ಐಎನ್ 1ಬಿ ಬಿಡುಗೆಯಾಗಿರುವ ಹೊಸ ಫೋನ್‌ಗಳು. ಈ ಎರಡೂ ಫೋನ್‌ಗಳಲ್ಲಿ ಮೀಡಿಯಾಟೆಕ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 10 ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿವೆ. ಜೊತೆಗೆ, ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಅಪ್‌ಡೇಟ್ ಆಫರ್ ಕೂಡ ನೀಡುತ್ತಿದೆ.
ಬೆಲೆ ಎಷ್ಟು?
ಮೇಕ್ ಇನ್ ಇಂಡಿಯಾ ಅಡಿ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಿರುವ ಮೈಕ್ರೋಮ್ಯಾಕ್ಸ್ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು ಈ ಪೈಕಿ ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1 ಬೆಲೆ 12,459 ಹಾಗೂ 10,999 ಇದ್ದರೆ, ಮೈಕ್ರೋಮ್ಯಾಕ್ಸ್ ಐಎನ್ 1ಬಿ ಫೋನ್ ಬೆಲೆ 7999 ಮತ್ತು 6,999 ರೂಪಾಯಿ ಮಾತ್ರ. ಅಂದರೆ, ಈ ಎರಡೂ ಮಾದರಿಯ ಫೋನ್‌ಗಳು ಇತರೆ ಕಂಪನಿಗಳ ಫೋನ್ ದರಕ್ಕೆ ಹೋಲಿಸಿದರೆ ತುಂಬ ಅಗ್ಗ. ಹಾಗಾಗಿ ಇವು ಬಜೆಟ್ ಸ್ಮಾರ್ಟ್‌ಫೋನ್‌ಗಳಾಗಿದ್ದು, ಬಹುದೊಡ್ಡ ವರ್ಗವನ್ನು ಗುರಿಯಾಗಿಸಿಕೊಂಡು ಹೊರ ತರಲಾಗಿದೆ. ಈ ಫೋನ್‌ಗಳು ನವೆಂಬರ್ 26ರಿಂದ ಮಾರಾಟಕ್ಕೆ ದೊರೆಯಲಿವೆ.
ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1 ಎರಡು ಮಾದರಿಗಳಲ್ಲಿ ದೊರೆಯಲಿದೆ. ಮೊದಲನೆಯದ್ದು ನಾಲ್ಕು ಜಿಬಿ ರಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದ್ದಾದರೆ ಮತ್ತೊಂದು 4ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಇದೆ. ಮೈಕ್ರೋಮ್ಯಾಕ್ಸ್ ಐಎನ್ 1ಬಿ ಕೂಡ ಎರಡು ಮಾದರಿಯಲ್ಲಿ ದೊರೆಯಲಿದೆ. 2ಜಿಬಿ ರಾಮ್ ತಮ್ತು 32ಜಿಬಿ ಸ್ಟೋರೇಜ್ ಮೊದಲನೆಯ ಮಾದರಿಯದ್ದಾದರೆ, ಎರಡನೆಯದ್ದು 4ಜಿ ರಾಮ್ ಮತ್ತು 64 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಒನ್‌ಪ್ಲಸ್‌ನಿಂದ ಲಿಮಿಟೆಡ್ ಎಡಿಷನ್ ಫೋನ್, ವಿಶೇಷತೆಗಳೇನು?
ಆನ್‌ಲೈನ್‌ನಲ್ಲೂ ಕೂಡ ಈ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ಮ್ತತು ಮೈಕ್ರೋಮ್ಯಾಕ್ಸ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಈಗಾಗಲೇ ಖರೀದಿ ನೋಂದಣಿ ಕೂಡ ಆರಂಭಿಸಲಾಗಿದೆ. ರೆಡ್‌ಮೀ ನೋಟ್, ರಿಯಲ್‌ಮೀ ನರ್ಜೋ 20ಗೆ ಮೈಕ್ರೋಮ್ಯಾಕ್ಸ್ ನೋಟ್ 1 ಸ್ಪರ್ಧೆಯೊಡ್ಡಿದರೆ, ರೆಡ್‌ಮೀ 9, ಪೋಕೊ ಸಿ3 ಮತ್ತು ರಿಯಲ್‌ಮೀ ಸಿ15 ಫೋನ್‌ಗಳಿಗೆ ಮೈಕ್ರೋಮ್ಯಾಕ್ಸ್ ಐಎನ್ 1ಬಿ ತೀವ್ರ ಸ್ಪರ್ಧೆ ನೀಡಬಹುದು ಎಂದು ಅಂದಾಜಿಸಲಾಗಿದೆ.
ಕ್ಯಾಮರಾ ಹೇಗಿದೆ?
ಮೈಕ್ರೋಮ್ಯಾಕ್ಸ್ ಐಎನ್ ನೋಟ್ ಫೋನ್‌ನ ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್, 5 ಮೆಗಾಪಿಕ್ಸೆಲ್, 2 ಮೆಗಾಪಿಕ್ಸೆಲ್‌ನ ಎರಡು ಕ್ಯಾಮರಾಗಳ ಕ್ವಾಡ್ ಕ್ಯಾಮರಾ ಸೆಟ್‌ಅಪ್ ಇದೆ. ಇನ್ನು ಸೆಲ್ಫಿಗಾಗಿ ಮುಂಬದಿಯಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮರಾ ನೀಡಲಾಗಿದೆ. ಅದೇ ರೀತಿ ಮೈಕ್ರೋಮ್ಯಾಕ್ಸ್ ಐಎನ್ 1ಬಿ ಫೋನ್‌ನಲ್ಲೂ 13 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಅಳವಡಿಸಲಾಗಿದೆ. ಜತೆಗೆ ಸೆಲ್ಫಿಗೆ 8 ಮೆಗಾಪಿಕ್ಸೆಲ್ ಕ್ಯಾಮರವನ್ನು ಕಂಪನಿ ನೀಡಿದೆ. ಮೈಕ್ರೋಮ್ಯಾಕ್ಸ್ ಐಎನ್ ನೋಟ್ 1 ಫೋನ್‌ನಲ್ಲಿ 5000 ಎಂಎಎಚ್ ಬ್ಯಾಟರಿ ನೀಡಲಾಗಿದೆ.
ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸ್ಯಾಮ್ಸಂಗ್