ನೀರಿನಲ್ಲಿ ತೇಲುವ Apple ಸ್ಟೋರ್, ಇದು ವಿಶ್ವದಲ್ಲೇ ಮೊದಲು!

ವಿಶ್ವದ ದೈತ್ಯ ಎಲೆಕ್ಟ್ರಾನಿಕ್ ಕಂಪನಿ ಆ್ಯಪಲ್ ಇದೀಗ ಭಾರತ ಸೇರಿದಂತೆ ಏಷ್ಯಾದಲ್ಲಿ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿನೂತನ ಪ್ರಯತ್ನದ ಮೂಲಕ ಗ್ರಾಹಕರನ್ನು ಸೆಳೆಯುವ ಹಾಗೂ ಬ್ರ್ಯಾಂಡ್ ಪ್ರಮೋಶನ್‌ಗೆ ಆ್ಯಪಲ್ ಮುಂದಾಗಿದೆ. ವಿಶ್ವದಲ್ಲೇ ಮೊದಲ ನೀರಿನಲ್ಲಿ ತೇಲುವ ಆ್ಯಪಲ್ ಸ್ಟೋರ್ ಇದೀಗ ಪ್ರಾರಂಭವಾಗಿದ.

Apple opens news store that floats on the waters of Marina Bay Singapore

ಸಿಂಗಾಪುರ(ಆ.24): Apple ಇದೀಗ ಸಿಂಗಾಪುರದಲ್ಲಿ ವಿಶೇಷ ಸ್ಟೋರ್ ಆರಂಭಿಸಿದೆ. ಇದು ಸಿಂಗಾಪುರದಲ್ಲಿನ 3ನೇ ಸ್ಟೋರ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಸ್ಟೋರ್‌ನ ವಿಶೇಷತೆ ಅಂದರೆ ನೀರಿನಲ್ಲಿ ತೇಲುವ ಸ್ಟೋರ್ ಇದಾಗಿದೆ. ಇಷ್ಟೇ ಅಲ್ಲ ವಿಶ್ವದಲ್ಲೇ ಈ ರೀತಿಯ ಆ್ಯಪಲ್ ಸ್ಟೋರ್ ಇದೇ ಮೊದಲು. 

ಕರ್ನಾಟಕದಲ್ಲಿ iPhone 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ!.

ಸಿಂಗಾಪುರದ ಮರೀನಾ ಬೇ ನಲ್ಲಿ ನೂತನ ಆ್ಯಪಲ್ ಸ್ಟೋರ್ ತೆರೆಯಲಾಗಿದೆ. ಮರೀನಾ ಬೇ ಸ್ಯಾಂಡ್ ಸ್ಟೋರ್ ಅನ್ನೋ ನೂತನ ಮಳಿಗೆ ನೀರಿನಲ್ಲಿ ತೇಲುತ್ತದೆ. ಗೋಲಾಕಾರದ ಹೊಂದಿರುವ ಈ ಸ್ಟೋರ್‌ ಒಳಗಡೆ ಆ್ಯಪಲ್ ವಸ್ತುಗಳು, ಸರ್ವೀಸ್ ಸೇರಿದಂತೆ ಎಲ್ಲಾ ಸೇವೆಗಳು ಲಭ್ಯವಿದೆ. 

ಲೋಗೋ ವಿಚಾರದಲ್ಲಿ ರಾಜಿಯೇ ಇಲ್ಲ, ಚಿಕ್ಕ ಕಂಪನಿಯ ಮೇಲೆ ಆಪಲ್ ದಾಳಿ!.

2017ರಲ್ಲಿ ಆ್ಯಪಲ್ ಸಿಂಗಾಪುರದ ಆರ್ಚರ್ಡ್ ರಸ್ತೆಯಲ್ಲಿ ಮೊದಲ ಆ್ಯಪಲ್ ಸ್ಟೋರ್ ಆರಂಭಿಸಿತು. ಇದು ಸೌತ್ಈಸ್ಟ್ ಏಷ್ಯಾದ ಮೊದಲ ಸ್ಟೋರ್ ಆಗಿತ್ತು. 2019ರಲ್ಲಿ ಜುವೆಲ್ ಚಾಂಗಿ ಏರ್‌ಪೋರ್ಟ್ ಬಳಿ 2ನೇ ಆ್ಯಪಲ್ ಸ್ಟೋರ್ ಆರಂಭಿಸಿತ್ತು. 

ಇದೀಗ 3ನೇ ಸ್ಟೋರ್ ಮರೀನಾ ಬೇನಲ್ಲಿ ಆರಂಭಿಸಲಾಗಿದ್ದು,ಗ್ರಾಹಕರಿಗೆ ಅತ್ಯುನ್ನತ ಅನುಭವ, ಆ್ಯಪಲ್ ಕ್ರೀಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಇದು ಗ್ರಾಹಕರಿಗೆ  ಆ್ಯಪಲ್ ವಸ್ತುಗಳ ಖರೀದಿ ಜೊತೆಗೆ ನೆಚ್ಚಿನ ತಾಣವಾಗಲಿದೆ ಎಂದು ಆ್ಯಪಲ್ ಸಿಂಗಾಪುರ ವಿಶ್ವಾಸ ವ್ಯಕ್ತಪಡಿಸಿದೆ.

Latest Videos
Follow Us:
Download App:
  • android
  • ios