ದಿಗ್ಗಜ ಆಪಲ್ ನಿಂದ ಸಣ್ಣ ಕಂಪನಿಗಳ ಮೇಲೆ ಸರ್ವಾಧಿಕಾರ/ ಲೋಗೋ-ಟ್ರೇಡ್ ಮಾರ್ಕ್ ಹೆಸರಿನಲ್ಲಿ ಕ್ಯಾತೆ/ ಸಾವಿರ ಸಾವಿರ ಡಾಲರ್ ಗೆ ಬೇಡಿಕೆ/ ಎಲ್ಲರ ಮೇಲೂ ಕಾನೂನು ಸಮರ

ನವದೆಹಲಿ(ಆ. 10) ದಿಗ್ಗಜ ಆಪಲ್ ಕಂಪನಿ ಕಾನೂನು ಸಮರಕ್ಕೆ ಮುಂದಾಗಿದೆ. ಇದಕ್ಕೆ ಕಾರಣ ಲೋಗೋ. ಊಟ ಸಿದ್ಧತೆ ಮತ್ತು ಹೊಸ ರೆಸಿಪಿಗಳನ್ನು ತಿಳಿಸುವ 'ಪ್ರಿಪೇರ್' ಎಂಬ ಕಂಪನಿ ತನ್ನ ಅಪ್ಲಿಕೇಶನ್ ಲೋಗೋವನ್ನು ಆಪಲ್ ಲೋಗೋದ ರೀತಿಯೆ ಮಾಡಿದೆ ಎನ್ನುವುದು ಪ್ರಮುಖ ಆರೋಪ.

ಆಪಲ್ ತನ್ನ ಸೋಶಿಯಲ್ ಮೀಡಿಯಾ ಮುಖೇನ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಈ ರೀತಿಯ ಲೋಗೋ ಬಳಕೆ ಮಾಡಿದರೆ ತನ್ನ ಬ್ಯ್ರಾಂಡ್ ವಾಲ್ಯೂಗೆ ಹೊಡೆತ ಬೀಳುತ್ತದೆ ಎನ್ನುವುದು ಆಪಲ್ ವಾದ.

iPhone 12 ಮಾರುಕಟ್ಟೆಗೆ; ಐಫೋನ್11ಗಿಂತ ಕಡಿಮೆ ಬೆಲೆ!

ಆಪಲ್ ಗೆ ಹೋಲಿಕೆ ಮಾಡಿದರೆ ಬಾವು ಅತಿ ಚಿಕ್ಕ ಕಂಪನಿ. ಕೇವಲ 5 ಜನ ಸಿಬ್ಬಂದಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಕಾನೂನು ಸಮರಕ್ಕೆ ಮುಂದಾಗಿರುವ ಆಪಲ್ ಸಾವಿರಾರು ಡಾಲರ್ ಪರಿಹಾರ ಕೇಳಿದೆ ಎಂದು ಪ್ರಿಪೇರ್ ಕಂಪನಿ ಆತಂಕ ವ್ಯಕ್ತಪಡಿಸುತ್ತದೆ.

ಇದಲ್ಲದೆ ಹಣ್ಣಿಗೆ ಸಂಬಂಧಿಸಿದ ಅನೇಕ ಕಂಪನಿಗಳ ಲೋಗೋಗಳ ಮೇಲೆ ಟ್ರೇಡ್ ಮಾರ್ಕ್ ಹೆಸರಿನಲ್ಲಿ ಆಪಲ್ ದಾಳಿ ಮಾಡಿದೆ ಎನ್ನುತ್ತಾರೆ. ಚೆಂಜ್ ಪೆಟಿಶನ್ ಆನ್ ಲೈನ್ ನಲ್ಲಿ ಸಿದ್ಧ ಮಾಡಿರುವ ಪ್ರಿಪೇರ್ ಆಪಲ್ ನ ಸರ್ವಾಧಿಕಾರ ನೀತಿ ವಿರೋಧಿಸಲು ಸಹಕಾರ ಕೇಳಿದೆ.