Airtel Service ನೆಟ್‌ವರ್ಕ್, ಡೇಟಾ ಸಮಸ್ಯೆ, ಏರ್‌ಟೆಲ್ ಗ್ರಾಹಕರ ಪರದಾಟ!
- ಏರ್‌ಟೆಲ್ ಸೇವೆಯಲ್ಲಿ ಸಮಸ್ಯೆ, ಬಳಕೆದಾರರ ಆಕ್ರೋಶ
- ದೇಶದ ಹಲೆವೆಡೆ ನೆಟ್‌ವರ್ಕ್, ಡೇಟಾ ಸಮಸ್ಯೆ
- ಬೆಂಗಳೂರು ಸೇರಿದಂತೆ ಹಲವೆಡೆ ಸಮಸ್ಯೆ ತೀವ್ರ
ನವದೆಹಲಿ(ಮೇ.28): ದೇಶದ ಹಲವೆಡೆ ಏರ್‌ಟೆಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ ಎಂದು ಹಲವು ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.ಟೆಲಿಕಾಂ ಸೇವೆ ನೀಡುವ ಏರ್‌ಟೆಲ್ ಸೇವೆಯಲ್ಲಿ ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರು ನೀಡುತ್ತಿದ್ದಾರೆ.
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಗುವ್ಹಾಟಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ವೇಳೆಗೆ ಜಿಯೋ, ಏರಟೆಲ್, ವೊಡಾಫೋನ್ ಐಡಿಯಾ ಪ್ಲಾನ್ಸ್ ಬೆಲೆ ಹೆಚ್ಚಳ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ!
ಇಂದು(ಮೇ.28) ಮಧ್ಯಾಹ್ನದಿಂದ ಏರ್‌ಟೆಲ್ ಗ್ರಾಹಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ . ಆದರೆ ಏರ್‌ಟೆಲ್ ಅಧಿಕೃತವಾಗಿ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತ ಹಲವರು ಏರ್‌ಟೆಲ್ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ ಎಂದು ವರದಿ ಮಾಡಿದ್ದರೆ, ಮತ್ತೆ ಕೆಲವರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಮೊಬೈಲ್ ಕರೆ ಮಾಡಲು ಸಾಧ್ಯವಾಗುತ್ತಿಲ್ಲ, ಡೇಟಾ ಬಳಕೆಯೂ ಆಗುತ್ತಿಲ್ಲ ಎಂದು ಗ್ರಾಹಕರು ಹೇಳಿದ್ದಾರೆ.
ಕೆಲ ಗ್ರಾಹಕರು ಏರ್‌ಟೆಲ್‌ಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ದೇಶದ ಹಲವು ಭಾಗಗಳಲ್ಲಿ ಏರ್‌ಟೆಲ್ ಸಮಸ್ಯೆಯಾಗುತ್ತಿದೆ. ಆದರೂ ಏರ್‌ಟೆಲ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಏರ್‌ಟೆಲ್ ಡೌನ್ ಅನ್ನೋ ಹ್ಯಾಶ್‌ಟ್ಯಾಗ್ ಮೂಲಕ ಗ್ರಾಹಕರು ಟೆಲಿಕಾಂ ಸಂಸ್ಥೆಗೆ ದೂರು ನೀಡಿದ್ದಾರೆ.
3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಏರಟೆಲ್ 2 ಯೋಜನೆ ಲಾಂಚ್: ಬೆಲೆ ಎಷ್ಟು?
20 ದಿನಗಳಿಂದ ಸಿಗದ ಏರ್‌ಟೆಲ್ ನೆಟ್‌ವರ್ಕ್, ಗ್ರಾಹಕರ ಪರದಾಟ
ಕರ್ನಾಟಕದ ಬಾಳೆಹೊನ್ನೂರು ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಭಾಪುರಿ ಪೀಠದಲ್ಲಿರುವ ಏರ್‌ಟೆಲ್ ಟವರ್‌ನ ಮೊಬೈಲ್ ನೆಟ್‌ವರ್ಕ್ ಕಳೆದ 20 ದಿನಗಳಿಂದ ಲಭ್ಯವಾಗದೇ ಸಾವಿರಾರು ಗ್ರಾಹಕರು ತೀವ್ರ ಪರದಾಡುತ್ತಿದ್ದಾರೆ.ರಂಭಾಪುರಿ ಪೀಠದಲ್ಲಿರುವ ಏರ್‌ಟೆಲ್ ಟವರ್ ಅನ್ನು ರಸ್ತೆ ವಿಸ್ತರಣೆ ಹಿನ್ನೆಲೆ ತೆರವುಗೊಳಿಸಲು ಮುಂದಾಗಿದ್ದು, ಇದರಿಂದಾಗಿ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಕಳೆದ 20 ದಿನಗಳ ಹಿಂದೆ ನೆಟ್‌ವರ್ಕ್ ಸ್ಥಗಿತಗೊಳಿಸಿದ್ದು ತೀವ್ರ ತೊಂದರೆಯಾಗಿದೆ.
ರಂಭಾಪುರಿ ಪೀಠದ ಏರ್‌ಟೆಲ್ ಟವರ್ ಅನ್ನು ಇಂಡಸ್ ಕಂಪೆನಿಯವರು ನಿರ್ವಹಣೆ ಮಾಡುತ್ತಿದ್ದಾರೆ. ಈ ಟವರ್‌ನ ಅಡಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಗ್ರಾಹಕರು ಮೊಬೈಲ್ ಸಂಪರ್ಕ ಹೊಂದಿದ್ದಾರೆ. ಟವರ್‌ನ ವ್ಯಾಪ್ತಿಗೆ ರಂಭಾಪುರಿ ಪೀಠ, ಮೆಣಸುಕೊಡಿಗೆ, ಮಸೀದಿಕೆರೆ, ಅಕ್ಷರನಗರ, ಕಡ್ಲೇಮಕ್ಕಿ, ವಾಟುಕೊಡಿಗೆ, ಮಠ ಕಾಲನಿ, ಸೋಮೇಶ್ವರ ನಗರ, ಬಸವಕೂಗು, ಅರಳೀಕೊಪ್ಪ, ಕುಂಬತ್ತಿ, ತಲವಾನೆ, ಕಂಚಿಕೊಡಿಗೆ, ಬಸವನಕಟ್ಟೆ, ಅರಳೀಕೊಪ್ಪ, ಕೋಣೆಮನೆ, ಸೀಕೆ, ಮುದುಗುಣಿ, ಹಲಸೂರು, ನೇಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಒಳಪಡುತ್ತವೆ.
ಈ ವ್ಯಾಪ್ತಿಯಲ್ಲಿನ ಮೊಬೈಲ್ ಬಳಸುವ ಎಲ್ಲ ಗ್ರಾಹಕರು ಹೆಚ್ಚಾಗಿ ಏರ್‌ಟೆಲ್ ನೆಟ್‌ವರ್ಕ್ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಕಳೆದ 20 ದಿನಗಳಿಂದ ನೆಟ್‌ವರ್ಕ್ ಇಲ್ಲದೇ ದಿನನಿತ್ಯದ ಮುಖ್ಯ ಕೆಲಸಗಳಿಗೆ ತೀವ್ರ ತೊಂದರೆಯಾಗಿದೆ. ಹಲವು ಗ್ರಾಹಕರು ಮೊಬೈಲ್‌ಗೆ ಈಗಾಗಲೇ ಒಂದು ವರ್ಷದ ರೀಚಾಚ್‌ರ್ ಮಾಡಿಸಿಕೊಂಡಿದ್ದು, ಅದೂ ಉಪಯೋಗಕ್ಕೆ ಬಾರದೇ, ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.