ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ARPU ಹೆಚ್ಚಿಸಲು ಕಳೆದ ವರ್ಷ ತಮ್ಮ ಪ್ರಿಪೇಡ್‌ ಯೋಜನೆಗಳ ಬೆಲೆ ಹೆಚ್ಚಿಸಿವೆ. ಟೆಲಿಕಾಂ ಕಂಪನಿಗಳು ಈ ವರ್ಷ ಕೂಡ ಮತ್ತೆ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ.

Telecom Tariff Hike: ಭಾರತದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು, ಅಂದರೆ, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಅಥವಾ ವಿ ಈ ವರ್ಷದ ಕೊನೆಯಲ್ಲಿ ತಮ್ಮ ಯೋಜನೆಗಳ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಹೊಸ ವರದಿಯ ಪ್ರಕಾರ, ಈ ವರ್ಷದ ದೀಪಾವಳಿ ವೇಳೆಗೆ ಈ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇಟಿ ಟೆಲಿಕಾಂ, ವಿಶ್ಲೇಷಕರ ವರದಿಯನ್ನು ಉಲ್ಲೇಖಿಸಿ ಈ ಮೂರು ಟೆಲಿಕಾಂ ಆಪರೇಟರ್‌ಗಳು ತಮ್ಮ ಸರಾಸರಿ ಆದಾಯವನ್ನು ಪ್ರತಿ ಬಳಕೆದಾರರಿಗೆ (ARPU) ಹೆಚ್ಚಿಸುವ ಪ್ರಯತ್ನದಲ್ಲಿ ಈ ವರ್ಷ ದೀಪಾವಳಿಯ ವೇಳೆಗೆ ತಮ್ಮ ಯೋಜನೆ ಬೆಲೆಗಳನ್ನು 10 ರಿಂದ 12 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಈ ದರದ ಹೆಚ್ಚಳದ ಹೊರತಾಗಿಯೂ, ಮೂರು ಟೆಲಿಕಾಂ ಕಂಪನಿಗಳು ಸೇರಿ ಸುಮಾರು 35 ರಿಂದ 40 ಮಿಲಿಯನ್ ಹೊಸ ಚಂದಾದಾರರನ್ನು ಸೇರಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ವಿಶ್ಲೇಷಕರ ಪ್ರಕಾರ, ಟೆಲಿಕಾಂ ಉದ್ಯಮದ ಒಟ್ಟಾರೆ ಆಶಾವಾದವನ್ನು ಹೆಚ್ಚಿಸುವ ಮತ್ತೊಂದು ಅಂಶವೆಂದರೆ, ಕಳೆದ ವರ್ಷ ನವೆಂಬರ್-ಡಿಸೆಂಬರ್ ನಡುವೆ ಅದರ ಬೆಲೆಗಳನ್ನು ಹೆಚ್ಚಿಸಿದರೂ ಈ ವರ್ಷದ ಮಾರ್ಚ್‌ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ವೀ ಚಂದಾದಾರರನ್ನು ಕಳೆದುಕೊಂಡಿಲ್ಲ.

ಇದನ್ನೂ ಓದಿ: ಈ ವರ್ಷ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್ಸ್ ಬೆಲೆ ಏರಿಕೆ ಖಚಿತಪಡಿಸಿದ ಸಿಇಓ

ಇದಲ್ಲದೆ, 10 ರಿಂದ 12 ಪ್ರತಿಶತದಷ್ಟು ದರ ಹೆಚ್ಚಳವು (Price Hike) ಸ್ಥಿರವಾದ ಚಂದಾದಾರರ ಏರಿಕೆಯೊಂದಿಗೆ ಜಿಯೋ, ವೀ ಮತ್ತು ಏರಟೆಲ್ ತಮ್ಮ ARPU 2023ರ ಅಂತ್ಯದ ವೇಳೆಗೆ ವರ್ಚದಿಂದ ವರ್ಷಕ್ಕೆ 10 ಪ್ರತಿಶತದಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನಾ ಸಂಸ್ಥೆ ವಿಲಿಯಂ ಓ' ನೀಲ್ & ಕೋ ವರದಿ ಹೇಳುತ್ತದೆ. ಇದು ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾದ ARPU ಕ್ರಮವಾಗಿ ರೂ 200, ರೂ 185 ಮತ್ತು ರೂ 135 ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ.

ARPU ಎಂದರೇನು?: ARPU ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ, ಕೆಲವೊಮ್ಮೆ ಪ್ರತಿ ಯೂನಿಟ್‌ಗೆ ಸರಾಸರಿ ಆದಾಯ. ಇದು ಪ್ರಾಥಮಿಕವಾಗಿ ಗ್ರಾಹಕ ಸಂವಹನ, ಡಿಜಿಟಲ್ ಮಾಧ್ಯಮ ಮತ್ತು ನೆಟ್‌ವರ್ಕಿಂಗ್ ಕಂಪನಿಗಳಿಂದ ಬಳಸಲಾಗುವ ಅಳತೆಯಾಗಿದೆ, ಒಟ್ಟು ಆದಾಯವನ್ನು ಚಂದಾದಾರರ ಸಂಖ್ಯೆಯಿಂದ ಭಾಗಿಸಿದಾಗ ARPU ಲಭ್ಯವಾಗುತ್ತದೆ. 

ಎರಡನೇ ಸುತ್ತಿನ ದರ ಹೆಚ್ಚಳದ ಬಗ್ಗೆ ನಾವು ಕೇಳುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ವರ್ಷದ ಆರಂಭದಲ್ಲಿ, ಭಾರ್ತಿ ಏರ್‌ಟೆಲ್ (Airtel) ಎಂಡಿ ಮತ್ತು ಸಿಇಒ ಭಾರತ ಮತ್ತು ದಕ್ಷಿಣ ಏಷ್ಯಾದ ಸಿಇಒ ಗೋಪಾಲ್ ವಿಟ್ಟಲ್ ಅವರು 2022 ರಲ್ಲಿ ಏರ್‌ಟೆಲ್ ಎರಡನೇ ಸುತ್ತಿನ ದರ ಹೆಚ್ಚಳ ಮಾಡಲಿದೆ ಎಂದು ಹೇಳಿದ್ದರು. 

ಇತ್ತೀಚೆಗಷ್ಟೇ ಈ ಸುದ್ದಿಯನ್ನು ಕಂಪನಿ ಸಿಇಒ ಗೋಪಾಲ್ ವಿಟ್ಟಲ್ ಖಚಿತಪಡಿಸಿದ್ದಾರೆ. ಏರ್‌ಟೆಲ್ 2022 ರಲ್ಲಿ ಮತ್ತೆ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಬಾರಿ, ಪ್ರತಿ ಬಳಕೆದಾರರಿಗೆ (ARPU) ಸರಾಸರಿ ಆದಾಯವನ್ನು 200 ರೂ. ಗೆ ನಿಗದಿಪಡಿಸಲಾಗಿದೆ. ಕಳೆದ ವರ್ಷ ನವೆಂಬರ್-ಡಿಸೆಂಬರ್ ನಡುವೆ ಏರ್‌ಟೆಲ್, ವಿ ಮತ್ತು ಜಿಯೋ (Jio) ಭಾರತದಲ್ಲಿ ತಮ್ಮ ಯೋಜನೆಗಳ ದರ ಹೆಚ್ಚಿಸಿದ್ದವು. 

ಇದನ್ನೂ ಓದಿಜಿಯೋ vs ಏರ್‌ಟೆಲ್: ₹666 ಯೋಜನೆಯಲ್ಲಿ ಯಾವುದು ಉತ್ತಮ ಡೀಲ್?