ನವದೆಹಲಿ(ನ.17):  ನವರಾತ್ರಿ, ದೀಪಾವಳಿ ಹಬ್ಬಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ವಸ್ತುಗಳು ಮಾರಾಟವಾಗುತ್ತದೆ. ಕಾರಣ ಹೆಚ್ಚಿನ ಡಿಸ್ಕೌಂಟ್, ಹಬ್ಬದ ದಿನ ವಸ್ತುಗಳ ಖರೀದಿ ಶುಭಕರ ಸೇರಿದಂತೆ ಹಲವು ಕಾರಣಗಳಿವೆ. ಇತ್ತೀಚೆಗೆ ಆನ್‌ಲೈನ್ ಶಾಪಿಂಗ್ ಮೂಲಕ ಹಬ್ಬದ ದಿನ ಮೊಬೈಲ್ ಖರೀದಿ ಗಣನೀಯವಾಗಿ ಏರಿಕೆಯಾಗುತ್ತದೆ. ಈ ಬಾರಿಯೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಬಾರಿ ಜನರ ಆಯ್ಕೆ ಮಾತ್ರ ಭಿನ್ನವಾಗಿತ್ತು ಅನ್ನೋದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಟಿಕ್‌ಟಾಕ್, ಶೇರ್‌ಇಟ್ ಬಳಿಕ ಮತ್ತಷ್ಟು ಚೀನಾ ಆ್ಯಪ್ ಬ್ಯಾನ್‌ಗೆ ಕೇಂದ್ರ ನಿರ್ಧಾರ!.

ಗರಿಷ್ಠ ಡಿಸ್ಕೌಂಟ್ ಹಾಗೂ ಕಡಿಮೆ ಬೆಲೆಗೆ ಗರಿಷ್ಠ ಪೀಚರ್ಸ್ ನೀಡುವ ಚೀನಾ ವಸ್ತುಗಳಿಗೆ ಬೇಡಿಕೆ ಇತ್ತು. ಆದರೆ ಗಡಿ ಸಂಘರ್ಷದ ಬಳಿಕ ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಿದ್ದಾರೆ. ಈ ಬಾರಿಯ ಹಬ್ಬದ ಶಾಂಪಿಂಗ್‌ನಲ್ಲಿ ಇದು ಸಾಬೀತಾಗಿದೆ. ಶೇಕಾಡಾ 71 ರಷ್ಟು ಜನ ಖರೀದಿ ವೇಳೆ ಪ್ರಜ್ಞಾಪೂರ್ವಕವಾಗಿ ಚೀನಾ ಬ್ರ್ಯಾಂಡ್ ಬದಲು ಬೇರೆ ಬ್ರ್ಯಾಂಡ್ ಖರೀದಿಸಿದ್ದಾರೆ.

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!..

ಈ ಬಾರಿ ಹಬ್ಬಕ್ಕ ವಸ್ತುಗಳ ಖರೀದಿಸಿದ 14,000 ಮಂದಿಯ ಅಭಿಪ್ರಾಯವನ್ನು ಕ್ರೋಡಿಕರಿಸಲಾಗಿದೆ. ಭಾರತದ 204 ಜಿಲ್ಲೆಗಳಲ್ಲಿ ಆನ್‌ಲೈನ್ ಮೂಲಕ ವಸ್ತುಗಳ ಖರೀದಿಸಿದವರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿ ತಯಾರಿಸಲಾಗಿದೆ. ಶೇಕಡಾ 29 ರಷ್ಟು ಮಂದಿ ಮೇಡ್ ಇನ್ ಚೀನಾ ವಸ್ತು ಖರೀದಿಸಿದ್ದಾರೆ.

ಚೀನಾ ವಸ್ತು ಖರೀದಿಸಿದ ಶೇಕಡಾ 29 ರಷ್ಟು ಮಂದಿಯಲ್ಲಿ ಹಲವರಿಗೆ ಚೀನಾ ಬ್ರ್ಯಾಂಡ್  ಎಂಬುದೇ ಗೊತ್ತಿಲ್ಲ. 2019ಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 19 ರಷ್ಟು ಚೀನಾ ವಸ್ತುಗಳ ಖರೀದಿ ಕಡಿಮೆಯಾಗಿದೆ.  ಆದರೆ ಭಾರತೀಯರು ಇದೀಗ ಪ್ರತಿ ವಸ್ತು ಖರೀದಿಸುವಾಗ ಎಚ್ಚರವಹಿಸುತ್ತಿದ್ದಾರೆ.