Asianet Suvarna News Asianet Suvarna News

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; ಟಿಕ್‌ಟಾಕ್ ಸೇರಿ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!

ಲಡಾಖ್ ಗಡಿಯಲ್ಲಿ ಖ್ಯಾತೆ ತೆಗೆದ ಚೀನಾಗೆ ಇದೀಗ ಭಾರತ ಒಂದರ ಮೇಲೊಂದರಂತೆ ಹೊಡೆತ ನೀಡುತ್ತಿದೆ. ಕೇಂದ್ರ ಸರ್ಕಾರ ಇದೀಗ ಚೀನಾದ 59 ಪ್ರಮುಖ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಟಿಕ್‌ಟಾಕ್, ಶೇರ್ ಇಟ್ ಸೇರಿದಂತೆ ಚೀನಾ ಮೂಲದ ಆ್ಯಪ್‌ಗಳು ಇದೀಗ ಭಾರತದಲ್ಲಿ ಬ್ಯಾನ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Government of India bans 59 Chinese apps including TikTok SHAREit
Author
Bengaluru, First Published Jun 29, 2020, 9:16 PM IST

ನವದೆಹಲಿ(ಜೂ.29): ಲಡಾಖ್ ಗಡಿಯಲ್ಲಿನ ಬಿಕ್ಕಟನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ಚೀನಾ ಗಡಿಯಲ್ಲಿ ಮತ್ತೆ ಖ್ಯಾತೆ ತೆಗೆಯುತ್ತಿದೆ.  ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್ ಬ್ಯಾನ್ ಮಾಡಿದೆ. ಈ ಮೂಲಕ ಚೀನಾಗೆ ಡಿಜಿಟಲ್ ಸ್ಟ್ರೈಕ್ ನೀಡಿದೆ. 

 

ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಸೇನೆ ಸೇರಿಕೊಳ್ಳುತ್ತಿದೆ 6 ರಾಫೆಲ್ ಯುದ್ಧವಿಮಾನ ಹಾಗೂ ಮಿಸೈಲ್!.

ಟಿಕ್‌ಟಾಕ್, ಶೇರ್ ಇಟ್, ಹೆಲೋ, ಯುಸಿ ಬ್ರೌಸರ್ ಸೇರಿದಂತೆ 59 ಆ್ಯಪ್‌ಗಳು ಭಾರತದಲ್ಲಿ ಬ್ಯಾನ್ ಆಗಿವೆ.  ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಕ್ಷನ್ 69Aರ ಅಡಿಯಲ್ಲಿ ಚೀನಾದ 59 ಆ್ಯಪ್ ಬ್ಯಾನ್ ಮಾಡಿದೆ. ಭಾರತದ ಸಮಗ್ರತೆ, ರಕ್ಷಣೆ,  ಮತ್ತು ಸಾರ್ವಜನಿಕ ಭದ್ರತೆಗೆ ಧಕ್ಕೆ ಬರುತ್ತಿರುವ ಕಾರಣದಿಂದ ಚೀನಾ ಮೂಲಕ 59 ಆ್ಯಪ್ ಬ್ಯಾನ್ ಮಾಡುತ್ತಿದೆ ಎಂದು  ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. 

"

ಡಾಟಾ ಸುರಕ್ಷತೆಗೆ ಸಂಬಂಧಿಸಿದ ಅಂಶಗಳು ಮತ್ತು 130 ಕೋಟಿ ಭಾರತೀಯರ ಗೌಪ್ಯತೆಯನ್ನು ಕಾಪಾಡುವಲ್ಲಿ ಈ ಆ್ಯಪ್‌ಗಳು ನಿಯಮ ಉಲ್ಲಂಘಿಸಿದೆ. ಇದು ಆತಂಕಕಾರಿ. ಇಂತಹ ಕಳವಳಗಳು ನಮ್ಮ ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ. 

ಕೇಂದ್ರ ಸರ್ಕಾರ ಬ್ಯಾನ್ ಮಾಡಿ 59 ಚೀನಾ ಆ್ಯಪ್ ವಿವರ ಇಲ್ಲಿದೆ:

Government of India bans 59 Chinese apps including TikTok SHAREit

ಭಾರತೀಯರ ಮಾಹಿತಿ ಶೇಖರಿಸಿಡಲು ಸ್ಥಳೀಯ ಸರ್ವರ್‌ಗಳನ್ನು ಮಾಡದೇ ವಿದೇಶದಲ್ಲಿ ಮಾಹಿತಿ ಶೇಖರಿಸಿಟ್ಟು ಸೋರಿಕೆ ಮಾಡುತ್ತಿದೆ. ಇದು ಬಳಕೆದಾರರ ಡೇಟಾವನ್ನು ಅನಧಿಕೃತ ರೀತಿಯಲ್ಲಿ ಕದಿಯಲು ಮತ್ತು ರಹಸ್ಯವಾಗಿ ರವಾನಿಸಲು ಆಂಡ್ರಾಯ್ಡ್ ಮತ್ತು IOS ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಹಾಗೂ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ದುರುಪಯೋಗದ ಬಗ್ಗೆ ಹಲವಾರು ದೂರಗಳು ಬಂದಿವೆ.    ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಗಂಭೀರ ವಿಚಾರವಾಗಿದ್ದು,  ತುರ್ತು ಕ್ರಮಗಳ ಅಗತ್ಯವಿದೆ. ಹೀಗಾಗಿ 59 ಆ್ಯಪ್ ಬ್ಯಾನ್ ಮಾಡುತ್ತಿದೆ ಎಂದಿದೆ.

Follow Us:
Download App:
  • android
  • ios