ಬೆಂಗಳೂರು(ಏ.12): ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿ ನಿಮ್ಮ ಹತ್ತಿರ ಬಂದರೆ ಎಚ್ಚರಿಸುವ, ಅಂತಹ ವ್ಯಕ್ತಿಯ ಮೇಲೆ ನಿಗಾ ಇಡುವಂತಹ ಆರೋಗ್ಯ ಸೇತು-19 ಟ್ರ್ಯಾಕರ್‌ ಮೊಬೈಲ್‌ ಅ್ಯಪ್‌ನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಬಿಡುಗಡೆ ಮಾಡಿದೆ.

ಸಚಿವಾಲಯು ಬಿಡುಗಡೆ ಮಾಡಿರುವ ದೃಢೀಕೃತ ವೈರಸ್‌ ಪಾಸಿಟಿವ್‌ ಪ್ರಕರಣಗಳ ಮಾಹಿತಿ ಪಡೆಯಲು Arogya Setu COVID-19 ಆ್ಯಪ್‌ ಕಾರ್ಯ ನಿರ್ವಹಿಸುತ್ತಿದೆ. ವೈರಸ್‌ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್‌ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯನ್ನು ಈ ಮೊಬೈಲ್‌ ಆ್ಯಪ್‌ ಹೊಂದಿದೆ.

ದೇಶದ 200 ವೈದ್ಯ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ!

ಈ ಆ್ಯಪನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಂಡಾಗ ಕೊರೋನಾ ವೈರಸ್‌ ಪಾಸಿಟಿವ್‌ ದೃಢಪಟ್ಟವ್ಯಕ್ತಿ ಬಳಿ ಬಂದರೆ ಅಥವಾ ನಿಮಗೆ ಸಮೀಪದಲ್ಲಿ ಇದ್ದರೆ ಕೂಡಲೇ ಆ್ಯಪ್‌ ಎಚ್ಚರಿಸುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ರಕ್ಷಿಸಿಕೊಳ್ಳಬಹುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳಕೆ ಹೇಗೆ?:

ಈ ಆ್ಯಪ್‌ನನ್ನು ಐಒಎಸ್‌ ಮತ್ತು ಅಂಡ್ರಾಯ್ಡ್‌ ಸ್ಮಾರ್ಟ್‌ ಪೋನ್‌ಗಳಲ್ಲಿ ಬಳಸಬಹುದಾಗಿದೆ. ಡೌನ್‌ ಲೋಡ್‌ ಮಾಡಿಕೊಂಡ ಬಳಿಕ ಬ್ಲೂಟೂತ್‌ ಅಥವಾ ಲೊಕೇಶನ್‌ ಆನ್‌ ಮಾಡಿರಬೇಕು. ಸೆಟ್‌ ಲೋಕೇಶನ್‌ ಎಂದಿರುವುದನ್ನು ‘ಆಲ್ವೇಸ್‌’ ಎಂದು ನಮೂದಿಸಬೇಕು. ಈ ಆ್ಯಪ್‌ನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಸ್ವಯಂ ಸೇವಕರು ಕಡ್ಡಾಯವಾಗಿ ಬಳಸುವಂತೆ ಕೋರಿದ್ದಾರೆ.