ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

ಮೇಷ: ಶತ್ರು ಭಾದೆಯಿಂದ ಮುಕ್ತಿ ದೊರೆಯಲಿದೆ. ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ಗಮನವಿರಲಿ. ಖರ್ಚಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ ಹೆಚ್ಚು ಉಪಯೋಗ. ಸ್ನೇಹಿತರಿಗೆ ಸಹಾಯ ಮಾಡಿ. ಪಂಚಮುಖಿ ಗಣೇಶನ ಆರಾಧನೆ ಮಾಡಿ.

Add Asianetnews Kannada as a Preferred SourcegooglePreferred

ವೃಷಭ: ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಲಕ್ಷ್ಮೀ ಕಟಾಕ್ಷ ಹೆಚ್ಚಾಗಿದ್ದು, ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ. ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಿ. ತಲೆ ನೋವು, ಬೆನ್ನು ನೋವುಗಳ ತಾತ್ಕಾಲಿಕ ಶಮನವಾಗಲಿದೆ. ಶುಭ ಲಾಭ. ತಂದೆ-ತಾಯಿ ಮಾತಿಗೆ ಬದ್ಧರಾಗಿ ನಡೆದುಕೊಳ್ಳಿ. 

ಮಿಥುನ: ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಓದುವ ಹವ್ಯಾಸ ಹೆಚ್ಚಾಗಲಿದೆ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ಕಟಕ: ನಿಮ್ಮ ಕೆಲಸಗಳಿಗೆ ಸಾಮಾಜಿಕ ಮಾನ್ಯತೆ ದೊರೆಯಲಿದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಸಿದ್ಧಿಯಾಗಲಿದೆ. ಗೆಳೆಯರೊಂದಿಗಿನ ಭಿನ್ನಾಭಿಪ್ರಾಯದಿಂದ ಮನಸ್ಸಿಗೆ ಕಸಿವಿಸಿ. ಅಂದುಕೊಂಡ ಕಾರ್ಯವನ್ನು ಮುಂದೂಡುವುದು ಬೇಡ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳ ಆರಂಭ. ಈ ವಾರ ಹೆಚ್ಚು ತಾಳ್ಮೆಯಿಂದಿರಿ.

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಸಿಂಹ: ದೂರದಲ್ಲಿರುವ ಮಕ್ಕಳು ಮನೆಗೆ ಬರಲಿದ್ದಾರೆ. ಪುರೋಹಿತರ ಆದಾಯದಲ್ಲಿ ಇಳಿಕೆ. ರೈತರಿಗೆ ಉತ್ತಮ ಮಳೆಯಿಂದ ಅನುಕೂಲವಾಗಲಿದೆ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಹಿರಿಯರ ಮಾತಿಗೆ ಗೌರವ ನೀಡಿ. ಅದರ ಜೊತೆಗೆ ನಿಮ್ಮ ನಿರ್ಧಾರವನ್ನೂ ಗಟ್ಟಿ ಮಾಡಿಕೊಳ್ಳುವುದು ಸೂಕ್ತ. ಸ್ನೇಹಿತರ ವಲಯದಿಂದ ಪ್ರಶಂಸೆ ಸಿಗಲಿದೆ

ಕನ್ಯಾ: ತಮ್ಮನೊಂದಿಗೆ ಹಣಕಾಸಿನ ವಿಚಾರದಲ್ಲಿ ಗೊಂದಲ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ದೂರದ ಬಂಧುಗಳು ಹತ್ತಿರವಾಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚಾಗಲಿವೆ. ಖರ್ಚಿನಲ್ಲಿ ಏರುಪೇರು. ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ಶೀಘ್ರ ಪ್ರಗತಿ.

ತುಲಾ: ಜಾಣತನದಿಂದ ಹಿಡಿದ ಕೆಲಸದಲ್ಲಿ ಉನ್ನತಿ ಸಾಧಿಸುವಿರಿ. ಗೆಳೆಯರ ಸಹಾಯದಿಂದ ಹೊಸ ವಾಹನ ಕೊಳ್ಳುವಿರಿ. ಓದಿನಲ್ಲಿ ಪ್ರಗತಿ. ಮಾತಿನಲ್ಲಿ ಸಂಯಮವಿರಲಿ. ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆತ್ಮೀಯರ ಸಾಧನೆಯಿಂದ ಸಂತೋಷ. ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗಲಿದೆ. 

ವೃಶ್ಚಿಕ: ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ತಂದೆ ತಾಯಿಯ ಸಲಹೆ ಪಡೆಯಿರಿ. ತಮ್ಮನೊಂದಿಗೆ ಹಣಕಾಸಿನ ವಿಚಾರದಲ್ಲಿ ಗೊಂದಲ. ದೂರದ ಬಂಧುಗಳು ಹತ್ತಿರವಾಗಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಹೆಚ್ಚಾಗಲಿವೆ. ಖರ್ಚಿನಲ್ಲಿ ಏರು ಪೇರು. ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಿರಿ.

ಮಂಗಳಾರತಿ ಈ ಕ್ರಮದಲ್ಲಿ ಬೆಳಗಿ, ನಿಮ್ಮ ಆಶಯ ಆಗುವುದು ಪೂರ್ತಿ!

ಧನುಸ್ಸು: ನೂತನ ದಂಪತಿಗಳ ಬಾಳಿನಲ್ಲಿ ಆರ್ಥಿಕ ಸಂಪತ್ತು ಹೆಚ್ಚಲಿದೆ. ಮನೆ ದೇವರಿಗೆ ಪೂಜೆ ಸಲ್ಲಿಸಿಬರುವುದು ಉತ್ತಮ. ಮನಸ್ಸಿನ ನೆಮ್ಮದಿಗೆ ಅಡೆತಡೆ ಉಂಟು ಮಾಡುವ ಸಾಕಷ್ಟು ವಿಚಾರಗಳು ಎದುರಾಗಲಿವೆ. ಸ್ವಲ್ಪ ಧೈರ್ಯದಿಂದ ಎಲ್ಲವನ್ನೂ ಎದುರಿಸಿ.

ಮಕರ: ತೋರ್ಪಡಿಕೆಯಿಂದ ಹೊರಗೆ ಬರುವಿರಿ. ನಿಮ್ಮ ಸುತ್ತ ಮುತ್ತಲೇ ಶತ್ರುಗಳು ಇದ್ದಾರೆ. ಹೆಚ್ಚು ಮಾತನಾಡುವುದು ಒಳಿತಲ್ಲ. ಕೆಲಸದಲ್ಲಿ ಪ್ರವೀಣತೆ ಹೆಚ್ಚಾಗಲಿದೆ. ಎಲ್ಲರನ್ನೂ ಕೆಟ್ಟವರು ಎಂದುಕೊಳ್ಳುವುದು ಬೇಡ. ನಿಮ್ಮ ಪಾಡಿಗೆ ನೀವಿರಿ.

ಕುಂಭ: ಸ್ನೇಹಿತರ ಮೇಲೆ ನೀವಿಟ್ಟದ್ದ ನಂಬಿಕೆ ಈ ವಾರಾಂತ್ಯದಲ್ಲಿ ಹುಸಿಯಾಗಲಿದೆ. ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿದ ನಿಮಗೆ ಇನ್ನು ಮುಂದೆ ಒಳ್ಳೆಯ ದಿನಗಳು ಬಂದೊದಗುವುದು. ಪ್ರಾಣಿ ಹಿಂಸೆ ಬೇಡ. ಮಹಿಳೆಯರು ಗೋಮಾತೆಯ ಪೂಜೆ ಮಾಡಿ

ಮೀನ: ಇಷ್ಟು ದಿನ ಕಾಯುತ್ತಿದ್ದ ಆ ಸಮಯ ನಿಮ್ಮ ಜೀವನದಲ್ಲಿ ಈಗ ಬಂದಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದ್ದು, ಅಂದುಕೊಂಡ ಕೆಲಸಗಳೂ ಈ ವಾರ ಈಡೇರಲಿದೆ. ಸ್ನೇಹಿತರು, ಸಂಬಂಧಿಕರಿಂದ ಪ್ರಶಂಸೆ ಸಿಗಲಿದೆ. ವಾರಾಂತ್ಯದಲ್ಲಿ ಕಹಿ ಸುದ್ದಿಗಳನ್ನು ಕೇಳಲಿದ್ದೀರಿ. ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆ. ಮಹಿಳೆಯರಿಗೆ ಶುಭ ವಾರ.