ಮೇಷ: ಸಂಬಂಧಗಳ ಕಡೆಗೆ ಹೆಚ್ಚು ಗಮನ ನೀಡುವಿರಿ. ಸೂಕ್ಷ್ಮ ವಿಚಾರಗಳಲ್ಲಿ ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಿ. ಒಳ್ಳೆಯವರು ಅಂದುಕೊಂಡವರಿಂದಲೇ ಹೆಚ್ಚು ಅಪಾಯವಾಗುವ ಸಾಧ್ಯತೆ. ಬಿಚ್ಚು ಮನಸ್ಸಿನಿಂದ ನಿಮ್ಮ ಸಮಸ್ಯೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವಿರಿ. ಶುಭ ಫಲ ದೊರೆಯಲಿದೆ.

ವೃಷಭ: ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹೆಣ್ಣು ಮಕ್ಕಳು ಹೆಚ್ಚು ಅವಸರ ಪಡುವುದು ಬೇಡ. ನಿಮ್ಮಿಂದ ಸಹಾಯ ಪಡೆದವರು ನಿಮಗೆ ಗೌರವ ನೀಡಲಿದ್ದಾರೆ. ದಿನಗೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಇಕ್ಕಟ್ಟು ಉಂಟಾಗಲಿದೆ. ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ.

ಮಿಥುನ: ನಿಮಗೆ ಇಷ್ಟವಿಲ್ಲದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಕೆಲವರಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಮುಂದೆ ಸಾಗಿ. ಎಲ್ಲರನ್ನೂ ಮೆಚ್ಚಿಸಿಕೊಂಡು ಬಾಳುವುದಕ್ಕೆ ಆಗುವುದಿಲ್ಲ. ಸ್ವಾರ್ಥಿಗಳ ನಡುವಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.

ಕಟಕ:  ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಓಡಾಟ ಹೆಚ್ಚಾಗಲಿದೆ. ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಯ. ಆತ್ಮೀಯರಿಂದಲೇ ತೊಂದರೆಯಾಗುವ ಸಾಧ್ಯತೆ. ಸರಿಯಾದ ಸಮಯಕ್ಕೆ ಆಹಾರ ಸೇವನೆಯ ಅಭ್ಯಾಸ ಮಾಡಿ ಕೊಳ್ಳಲಿದ್ದೀರಿ. ಜವಾಬ್ದಾರಿಯುತ ಕೆಲಸ ಹೆಗಲಿಗೆ ಬೀಳಲಿದೆ.

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಸಿಂಹ: ಕನಸುಗಳನ್ನು ಕೂಡಿಟ್ಟುಕೊಳ್ಳುತ್ತಿದ್ದರೆ, ಬೆಟ್ಟದಷ್ಟು ಬೆಳೆದು ನಿಲ್ಲುತ್ತವೆ. ಆದರೆ ಒಂದೊಂದೇ ಕನಸನ್ನು ಆಗಾಗ್ಗೆ ಸಾಕಾರಗೊಳ್ಳುವ ಕಡೆ ಹೆಜ್ಜೆ ಹಾಕಿದರೆ ಬದುಕು ಸುಂದರ. ಸಾವಿರ ಮೆಟ್ಟಿಲು ಹತ್ತ ಬೇಕೆಂದರೆ ಮೊದಲು ನಿಧಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತಲು ಆರಂಭಿಸಬೇಕು. ಆಗ ಗುರಿ ತಲುಪಲು ಸಾಧ್ಯ.

ಕನ್ಯಾ: ನಿಮ್ಮನ್ನು ನೀವು ಮೊದಲು ನಂಬದಿದ್ದರೆ, ಬೇರೆಯವರು ನಿಮ್ಮನ್ನು ನಂಬಬೇಕೆನ್ನುವುದು ತಪ್ಪಲ್ಲವೆ. ನಂಬಿಕೆ ಎನ್ನುವುದು ಕನ್ನಡಿಯಂತೆ ಜೋಪಾನವಾಗಿ ಕಾಪಾಡಬೇಕು. ನಕಾರಾತ್ಮಕ ಆಲೋಚನೆ ಬೇಡ. ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಹೊಸ ಆಲೋಚನೆಗೆ ಹೊಸ ತಿರುವು ಸಿಗಲಿದೆ. ಅದರಲ್ಲಿ ಸಫಲರಾಗುವಿರಿ.

ತುಲಾ: ಪುಸ್ತಕ ಓದುವ ಹವ್ಯಾಸ ಇನ್ನೂ ಹೆಚ್ಚಾಗಲಿದೆ. ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಇನ್ನೊಬ್ಬನಿಲ್ಲ. ದುಃಖ ಹೆಚ್ಚಾದಾಗ, ಬೇಸರವಾದಾಗ ಪುಸ್ತಕ ಓದಿ. ಯಾಂತ್ರೀಕೃತ ಬದುಕಿನಿಂದ ಹೊರ ಬಂದು ವಾರಾಂತ್ಯದಲ್ಲಾದರೂ ಹಸಿರಿನ ಮಧ್ಯೆ ಸ್ವಲ್ಪ ಕಾಲಕಳೆಯಿರಿ. ಇದರಿಂದ ಶಾಂತತೆ, ಸಂತೋಷ ಸಿಗಲಿದೆ.

ವೃಶ್ಚಿಕ:  ಸಂಗಾತಿಯೊಂದಿಗಿನ ಮನಸ್ಥಾಪ ಕ್ಷಣಿಕವಾದದ್ದು, ಅದನ್ನು ತೀರ ಎಳೆದುಕೊಂಡು ಹೋದರೆ ಮಾಯಬೇಕಾದ ಗಾಯ ದೊಡ್ಡದಾಗುತ್ತಾ ಹೋಗುತ್ತದೆ. ಕೈನಲ್ಲೇ ಇರುವ ಪ್ರೀತಿಯ ಅಸ್ತ್ರವನ್ನು ಉಪಯೋಗಿಸಿ.

ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣ ಯಾವುದೆಂದು ತಿಳಿಯಿರಿ!

ಧನುಸ್ಸು: ನಿಮ್ಮ ತಲೆಯಲ್ಲಿ ಅದ್ಭುತ ಐಡಿಯಾಗಳಿವೆ. ಅದನ್ನು ಹೊರಜಗತ್ತಿಗೆ ತಿಳಿಸಲು ಸಂಕೋಚ ಬೇಡ. ಆಪ್ತರಲ್ಲಿ ನಿಮ್ಮ ಚಿಂತನೆಯನ್ನು ತಿಳಿಸಿ. ಅವರು ಅದಕ್ಕೆ ಸರಿಯಾದ ರೂಪ ನೀಡುತ್ತಾರೆ. ಮರೆತಂತಾದ ಹಳೇ ಹವ್ಯಾಸಗಳಿಗೆ ಜೀವ ಕೊಡಿ. ಆರ್ಥಿಕವಾಗಿ ಚೇತರಿಕೆ ಇದೆ.

ಮಕರ: ಹಿಂದಿನ ನೋವುಗಳಿಂದ ತುಸು ಚೇತರಿಕೆ ಸಿಗಬಹುದು. ಕಷ್ಟಕಾಲಗಳೆಲ್ಲ ಕಳೆದವು, ಇನ್ನು ನೆಮ್ಮದಿಯಿಂದಿರಿ. ಗೆಳೆಯರ ಸಹಾಯಕ್ಕೆ ಧಾವಿಸುವ ನಿಮನ್ನು ಮಿತ್ರರು ಕೈ ಹಿಡಿದು ದಡ ಸೇರಿಸುತ್ತಾರೆ. ಆದರೂ ವಾಹನ ಚಲಾಯಿಸುವ ಸಂದರ್ಭ, ದೂರ ಪ್ರಯಾಣದ ಸಂದರ್ಭ ಎಚ್ಚರಿಕೆ ಇರಲಿ.

ಕುಂಭ: ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರುತ್ತವೆ. ಇಡೀ ವಾರ ಕೆಲಸಗಳಲ್ಲಿ ಬ್ಯುಸಿ ಇರುತ್ತೀರಿ. ಗಡಿಬಿಡಿ ಬೇಡ. ಪ್ಲಾನ್ ಮಾಡಿ ಸಾವಧಾನದಿಂದ ಮುಂದುವರಿಯಿರಿ. ಖುಷಿ ಹೆಚ್ಚು. ಫ್ಯಾಮಿಲಿ ಜೊತೆಗೆ ಪ್ರವಾಸದ ಯೋಗವಿ

ಮೀನ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಇದೆ. ವಾರದ ಮಧ್ಯಭಾಗದಿಂದ ಆರ್ಥಿಕ ಚೈತನ್ಯವೂ ಸಿಗುತ್ತದೆ. ನಿಮ್ಮ ಚಿಂತೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವುದರಲ್ಲಿ ಸಫಲರಾಗುವಿರಿ.ಛಲ, ಹಠ, ಕಷ್ಟದಲ್ಲೂ ಜಿಗಿದೇಳುವ ಗುಣ ನಿಮ್ಮನ್ನು ಕಾಯಲಿ.