ಮೇಷ - ಸಕಾರಾತ್ಮಕ ಆಲೋಚನೆಗನ್ನು ಹೆಚ್ಚಿಸಿಕೊಳ್ಳಿ. ಕ್ಷಣಿಕ ಸುಖಕ್ಕೆ ದಾಸರಾಗಿ ದೊಡ್ಡ ಅನಾಹುತ ಮಾಡಿಕೊಳ್ಳುವುದು ಬೇಡ. ನಿಮ್ಮ ಕಾರ್ಯ ವ್ಯಾಪ್ತಯಲ್ಲಿ ನೀವು ಕಾರ್ಯ ನಿರ್ವಹಿಸಿ. ಎಲ್ಲಾ ವಿಚಾರಗಳಿಗೂ ವಿರೋಧ ಮಾಡುವ ಬದಲಾಗಿ ಒಳ್ಳೆಯ ಅಂಶಗಳಿಗೆ ನಿಮ್ಮ ಬೆಂಬಲ ವ್ಯಕ್ತಪಡಿಸಿ.

ವೃಷಭ - ಶಕ್ತಿಯಿಂದ ಇದ್ದರೆ ಏನು ಬೇಕಾದರೂ ಗೆಲ್ಲಬಹುದು. ದೌರ್ಬಲ್ಯಕ್ಕೆ ತುತ್ತಾಗಿ ಹಾನಿ ಮಾಡಿಕೊಳ್ಳಬೇಡಿ. ಮನಸ್ಸಿನ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ. ನಾಳೆಗಳು ಸುಂದರವಾಗಿರಲಿವೆ. ಅನಾಚಶ್ಯಕವಾಗಿ ಅವಸರಕ್ಕೆ ಬೀಳುವುದು ಬೇಡ. ನಿಮ್ಮ ಆತಂಕವನ್ನು ಮತ್ತೊಬ್ಬರ ಮೇಲೆ ಹೇರಬೇಡಿ.

ಮಿಥನ- ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸದ್ಯದಲ್ಲಿ ಯಾವುದೇ ತಪ್ಪುಗಳಾಗಂದೆ ನೋಡಿಕೊಳ್ಳಿ. ಮಕ್ಕಳಿಗೆ ಧೈರ್ಯ ಹೇಳಿ, ಮುಂದಿನ ದಿನಗಳು ಶುಭ ಫಲ ತರಲಿದೆ. ವ್ಯಸನಕ್ಕೆ ತುತ್ತಾಗಿ ದುಂದುವೆಚ್ಚ ಮಾಡದಿರಿ. ಏಕಾಂತವೇ ಅಧಿಕವಾಗಲಿದೆ.  

ಕಟಕ - ಅಸಮರ್ಥರು ಆತ್ಮರತಿ ಉಳ್ಳವರೊಂದಿಗೆ ಮಾತನಾಡಿದಷ್ಟೂ ನಿಮಗೇ ಸಮಸ್ಯೆ, ಅವರಿಂದ ದೂರ ಇರುವುದು ಲೇಸು. ಎಲ್ಲವನ್ನೂ ನಾನೇ ಮಾಡಿದೆ ಎಂಬ ಅಹಂ ಬೇಡ. ಮನೆಯ ಕಾರ್ಯಗಳು ಹೆಚ್ಚಾಗಲಿವೆ. ದೇವರ ಕಾರ್ಯದಿಂದ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ಶುಭ ವಾರ್ತೆ ಸಿಗಲಿದೆ.

ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

ಸಿಂಹ - ಮನೆಯಿಂದ ವಿನಾ ಕಾರಣ ಹೊರಗೆ ಬರುವ ಪ್ರವೃತ್ತಿ ಬೇಡ. ನಿಮ್ಮ ಒಳಿತಿಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಸರಿಯಾಗಿ ಪಳಾನೆ ಮಾಡಿ. ದೊಡ್ಡ ಅಧಿಕಾರಿಗಳಿಂದ ನಿಮ್ಮ ಕಾರ್ಯಕ್ಕೆ ಪ್ರಶಂಸೆ ದೊರೆಯಲಿದೆ. ನಗುಮುಖದಿಂದಲೇ ಎಲ್ಲವನ್ನೂ ಗೆಲ್ಲಲಿದ್ದೀರಿ, ಆತಂಕಗಳು ದೂರವಾಗಲಿವೆ.

ಕನ್ಯಾ - ಗಲಾಟೆ ಮಾಡಿಕೊಂಡರೆ ನೆಮ್ಮದಿ ಹಾಳಾಗುತ್ತದೆ ಹೊರತು ಮತ್ತೇನೂ ಆಗುವುದಿಲ್ಲ. ಶಾಂತವಾಗಿದ್ದಷ್ಟೂ ಆರೋಗ್ಯ ವೃದ್ಧಿಸಲಿದೆ ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ಎಲ್ಲಾ ಸಂಕಷ್ಟಗಳಿಂದ ಹೊರಗೆ ಬರುತ್ತೇವೆ ಎಂಬ ಛಲವೇ ನಿಮ್ಮನ್ನು ಮುನ್ನಡೆಸಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ. 

ತುಲಾ - ಯಾರೋ ಏನೂ ಹೇಳಿದರೆಂದು ಕಣ್ಣು ಮುಚ್ಚಿ ಅದನ್ನು ಪಾಲನೆ ಮಾಡುವುದು ಬೇಡ. ಇಂದು ನಿಮ್ಮ ಸಹಕಾರ ಇಡೀ ದೇಶಕ್ಕೆ ಬೇಕಾಗಿದೆ. ಸೂಕ್ತವಾಗಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸಮಸ್ಯೆಗಳನ್ನು ತಡೆಯಿರಿ. ಅಧಿಕ ಖರ್ಚು ಬೇಡ. ಧೈರ್ಯವಾಗಿ ಮುನ್ನಡೆಯಿರಿ. 

ವೃಶ್ಚಿಕ - ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗಲಿದೆ. ದೈಹಿಕವಾಗಿ ಗಟ್ಟಿಯಾಗಲಿದ್ದೀರಿ. ಮನೆಯಲ್ಲಿ  ನೆಮ್ಮದಿ ನೆಲೆಸಲಿದೆ. ಮಹಿಳೆಯರ ಪಾಲಿಗೆ ಒಂದಷ್ಟು ಕೆಲಸಗಳು ಹೆಚ್ಚಾಗಲಿದೆ. ಅನಾವಶ್ಯಕವಾಘಿ ಪ್ರಯಾಣ ಮಾಡುವುದು ಬೇಡ, ಒಳಿತಾಗಲಿದೆ.

ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಧನುಸ್ಸು - ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದೇ ಆದಲ್ಲಿ ದೈಹಿಕವಾಗಿಯೂ ನೀವು ಗಟ್ಟಿಯಾಗುವಿರಿ. ಆಧ್ಯಾರ್ತದ ಕಡೆ ಒಲವು ಬೆಳೆಸಿಕೊಳ್ಇ. ನಿಮ್ಮ ನೆರವಿಗೆ ಹಿರಿಯ ಅಧಿಕಾರಿಗಳು ಬರಲಿದ್ದಾರೆ. ಯಾರೊಂದಿಗೂ ಮುನಿಸು ಬೇಡ.

ಮಕರ - ಸಮಸ್ಯೆ ದೊಡ್ಡದು ಎಂದುಕೊಳ್ಳುವುದು ಬೇಡ. ನೀವು ಮನಸ್ಸು ಮಾಡಿದರೆ ಎಂತಹುದೇ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲಿರಿ. ವ್ಯಸನಗಳಿಂದ ದೂರವಾಗಿರಿ. ಮನೆ ಮಂದಿಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗಲಿದೆ.

ಕುಂಭ - ಇರುವ ವ್ಯವಸ್ಥೆಯನ್ನೇ ಬಳಕೆ ಮಾಡಿಕೊಂಡು ದಿನ ದೂಡಿ. ಮನಸ್ಸಲ್ಲಿ ಇರುವ ಆಸೆಗಳನ್ನು ಒಂದಷ್ಟು ದಿನ ಕಟ್ಟಿ ಇಡುವುದು ಸೂಕ್ತ. ಹಿಂದೆ ಆಸಕ್ತಿ ಕಳೆದುಕೊಂಡ ವಿಷಯದಲ್ಲಿ ಇದೀಗ ಮತ್ತೆ ಆಸಕ್ತಿ ಹೆಚ್ಚಾಗಲಿದೆ. ಹೆಚ್ಚು ಸಕ್ರಿಯವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಧನಾಗಮನ.

ಮೀನ - ಮಕ್ಕಳ ಮೇಲೆ ಎಚ್ಚರಿಕೆಯ ಕಣ್ಣಿಡಿ. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಕ್ಷುಲ್ಲಕವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ನಿರ್ಧಾರ ಇಡೀ ಕುಟುಂಬದ ಮೇಲೆ ಬೀರಲಿದೆ. ಅಮಲಿಗೆ ಬಿದ್ದು ಹಾನಿ ಮಾಡಿಕೊಳ್ಳಬೇಡಿ. ದೂರದ ಬೆಟ್ಟ ಯಾವತ್ತೂ ನುಣ್ಣಗೆ ಕಾಣುತ್ತದೆ. ಎಚ್ಚರವಿರಲಿ.