Asianet Suvarna News

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ

Weekly Horoscope Of 03 may to 09 May 2020 in Kannada
Author
Bangalore, First Published May 3, 2020, 7:03 AM IST
  • Facebook
  • Twitter
  • Whatsapp

ಮೇಷ - ಮನೆ ದೇವರಿಗೆ ಪೂಜೆ ಸಲ್ಲಿಸಿಬರುವುದು ಉತ್ತಮ. ಮನಸ್ಸಿನ ನೆಮ್ಮದಿಗೆ ಅಡೆತಡೆ ಉಂಟು ಮಾಡುವ ಸಾಕಷ್ಟು ವಿಚಾರಗಳು ಎದುರಾಗಲಿವೆ. ಸ್ವಲ್ಪ ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಮಕ್ಕಳ ತುಂಟಾಟದಿಂದ ಮನೆಯಲ್ಲಿ ಸಂತೋಷ. ಕೆಲಸದಲ್ಲಿ ಪ್ರಗತಿ.

ವೃಷಭ - ಸಣ್ಣ ವಿಚಾರಗಳಿಂದ ಮನೆಯಲ್ಲಿ ಗೊಂದಲ ಎದುರಾಗಬಹುದು. ಆದಷ್ಟು ತಾಳ್ಮೆ ಕಂಡುಕೊಳ್ಳಿ. ನಿಮ್ಮ ನೇರ ಮಾತುಗಳೇ ನಿಮಗೆ ಮುಳು ವಾಗಬಹುದು. ಮಹಿಳೆಯರಿಂದ ಮನೆ ನಿರ್ವಹಣೆ ಈ ವಾರ ಉತ್ತಮವಾಗಿ ನಡೆಯಲಿದೆ. ಹಿರಿಯರೊಂದಿಗೆ ದೇವಸ್ಥಾನ ಭೇಟಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಮಿಥುನ - ಕೂಲಿ ಕಾರ್ಮಿಕರ ಆದಾಯದಲ್ಲಿ ಹೆಚ್ಚಳವಾಗಲಿದೆ. ಕೆಲಸದ ಬದಲಾವಣೆ ಸಾಧ್ಯತೆ. ವಿದೇಶದಿಂದ ಬಂಧುಗಳ ಆಗಮನ. ಧೈರ್ಯವಾಗಿ ಮುಂದೆ ಸಾಗಿ.
ವಿದ್ಯುತ್ ಉಪಕರಣಗಳನ್ನು ಕೊಂಡುಕೊಳ್ಳುವಿರಿ. ಮನೆಯಲ್ಲಿ ದುಂದುವ್ಯಯಗಳು ಹೆಚ್ಚಾಗಲಿವೆ. 

ಕಟಕ - ನಿಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು ಬೇಡ. ದೇವರ ಪ್ರಾರ್ಥನೆ ಹೆಚ್ಚಿದಷ್ಟು ಆತ್ಮ ಸಂತೋಷ ಹೆಚ್ಚಾಗುತ್ತದೆ. ಮಡದಿ, ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ, ಹೊಸ ಆಲೋಚನೆಗಳು ಹುಟ್ಟಿಕೊಳ್ಳಲಿವೆ. ಹಳ್ಳಿಯ ಬದುಕನನ್ನು ಚೆನ್ನಾಗಿ ಸವಿಯಿರಿ.

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಬಂಧುಗಳ ಕಷ್ಟಕ್ಕೆ ನೆರವಾಗುವಿರಿ. ನಿಮ್ಮ ಅವಶ್ಯಕತೆಗೆ ಏನು ಬೇಕೋ ಅದನ್ನು ಮಾಡಿಕೊಂಡು ಸಮಾಜಕ್ಕೂ ನೆರವಿನ ಹಸ್ತ ಚಾಚಲಿದ್ದೀರಿ. ತಾಳ್ಮೆಯಿಂದ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸಿ. ವಿಷಯ ಪರಿಣತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ.

ಕನ್ಯಾ - ಆದಾಯದ ಮೂಲಗಳಿಗೆ ಪೆಟ್ಟು ಬೀಳಲಿದೆ. ಅದರೆ ಅದು ಅದ್ಯಕ್ಕೆ ಮಾತ್ರ. ಯಾವುದೇ ಆತಂಕಕ್ಕೆ ಒಳಗಾಗದೆ ಜೀವನ ಸಾಗಿಸಿ. ಮನೆ ಮಂದಿಯೊಂದಿಗೆ ಸಂತೋಷದಿಂದ ಇದ್ದಷ್ಟು ಆರೋಗಗ್ಯದಲ್ಲಿ ಚೇತರಿಕೆ ಕಾಣಲಿದೆ. ತಾಜಾ ಹಹಾಗೂ ಶುದ್ಧವಾದ ಅಹಾರ ಕ್ರಮಕ್ಕೆ ಹೊಂದಿಕೊಳ್ಳಿ.

ತುಲಾ - ಅಸಮರ್ಥರು ಆತ್ಮರತಿ ಉಳ್ಳವರೊಂದಿಗೆ ಮಾತನಾಡಿದಷ್ಟೂ ನಿಮಗೇ ಸಮಸ್ಯೆ, ಅವರಿಂದ ದೂರ ಇರುವುದು ಲೇಸು. ಎಲ್ಲವನ್ನೂ ನಾನೇ ಮಾಡಿದೆ ಎಂಬ ಅಹಂ ಬೇಡ. ಮನೆಯ ಕಾರ್ಯಗಳು ಹೆಚ್ಚಾಗಲಿವೆ. ದೇವರ ಕಾರ್ಯದಿಂದ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ. ಶುಭ ವಾರ್ತೆ ಸಿಗಲಿದೆ.

ವೃಶ್ಚಿಕ -ನಿಮ್ಮಿಂದ ಸಮಾಜಕ್ಕೆ ಅನುಕೂಲವಾದರೆ ಮಾಡಿ, ಇಲ್ಲದೇ ಇದ್ದರೆ ಸುಮ್ಮನೆ ಇದ್ದುಬಿಡಿ. ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವುದು ಬೇಡ. ಮಹಿಳೆಯರು ಮನೆಯ ಸ್ವಚ್ಛತೆಗೆ ಆಧ್ಯತೆ ನೀಡಲಿದ್ದಾರೆ. ನಿಮ್ಮ ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿಕೊಳ್ಳಿರಿ.

ಲಲಿತಾ ಸಹಸ್ರನಾಮ ಪಠಿಸಿ, ದೇವಿ ಕೃಪೆಗೆ ಪಾತ್ರರಾಗಿ, ಇಲ್ಲಿವೆ ಸಹಸ್ರ ಲಾಭ

ಧನುಸ್ಸು - ಮಾಡುವ ಕೆಲಸಗಳಲ್ಲಿ ನಿರೀಕ್ಷಿತ ಫಲ ದೊರೆ ಯಲಿದೆ. ಆರೋಗ್ಯದಲ್ಲಿ ತುಸು ಏರುಪೇರು. ಆತಂಕಪಡುವ ಅಗತ್ಯವಿಲ್ಲ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ದೊಡ್ಡ ಕಾರ್ಯಗಳನ್ನು ಮಾಡುವ ಮುನ್ನ ಯೋಚಿಸಿ. ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಶುಭ.

ಮಕರ - ಅಧಿಕ ಧನಾಗಮನವಾಗಲಿದೆ. ಕೆಲಸದಲ್ಲಿ ಆಸಕ್ತಿ ಇರಲಿ. ಗೆಳೆಯರ ಸಾಧನೆಯಿಂದ ಸಂತೋಷಗೊಳ್ಳುವಿರಿ. ಹತ್ತಿರದ ಬಂಧುಗಳೊಂದಿಗೆ ಆರ್ಥಿಕ ವ್ಯವಹಾರ ಬೇಡ. ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆಯಾಗಲಿದೆ. ಆರ್ಥಿಕ ಪ್ರಗತಿ. ವಾರಂತ್ಯದ ವೇಳೆಗೆ ನಿಮ್ಮ ಪಾಲಿಗೆ ಶುಭವಾರ್ತೆ ತಿಳಿಯಲಿದೆ.

ಕುಂಭ - ವಾರದುದ್ದಕ್ಕೂ ಒಂದಿಲ್ಲೊಂದು ತೊಂದರೆಗೆ ಒಳಗಾಗುವ ನೀವು ವಾರಂತ್ಯದಲ್ಲಿ ಯಶಸ್ಸುಮ ಕಾಣಲಿದ್ದೀರಿ. ನಿಮ್ಮ ಒಳ್ಳೆಯ ಮಾತುಗಳು ಇನ್ನಷ್ಟು ಜನರನ್ನು ಆಕರ್ಷಿಸುತ್ತವೆ. ಮತ್ತೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲೇ ಸಮಯ ವ್ಯರ್ಥ ಮಾಡುವುದು ಬೇಡ. ಶುಭ ಕಾರ್ಯಕ್ಕೆ ಅಡ್ಡಿ ಇಲ್ಲ.

ಮೀನ - ಶತ್ರು ಭಾದೆಯಿಂದ ಮುಕ್ತಿ ದೊರೆಯಲಿದೆ. ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ಗಮನವಿರಲಿ. ಖರ್ಚಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ ಹೆಚ್ಚು ಉಪಯೋಗ. ಸ್ನೇಹಿತರಿಗೆ ಸಹಾಯ ಮಾಡಿ. ಪಂಚಮುಖಿ ಗಣೇಶನ ಆರಾಧನೆ ಮಾಡಿ.

Follow Us:
Download App:
  • android
  • ios