Asianet Suvarna News Asianet Suvarna News
breaking news image

ಈ ವಾರ ಯಾವ ರಾಶಿಗೆ ಅನುಕೂಲ, ಯಾವ ರಾಶಿಗೆ ಅನಾನೂಕೂಲ

ನಿಮ್ಮ ರಾಶಿಗೆ ಈ ವಾರ ಹೇಗಿರಲಿದೆ? ಯಾವ ಪ್ರಮುಖ ನಿರ್ಧಾರಗಳನ್ನು ನೀವು ಮಾಡಬಹುದು? ತಾರೀಖು 24 ನೇ  ಜೂನ್‌ ರಿಂದ 30 ನೇ ಜೂನ್‌ 2024ರವರೆಗೆ ನಿಮ್ಮ ಭವಿಷ್ಯ ಹೀಗಿರಲಿದೆ.
 

weekly horoscope from 24th june to 30th june 2024 in kannada suh
Author
First Published Jun 23, 2024, 6:00 AM IST

ಮೇಷ: ವಿದ್ಯಾರ್ಥಿಗಳು ಬಿಂದಾಸ್ ಆಗಿರಬಹುದು. ವಿವಾಹಿತರಿಗೆ ಸಣ್ಣಪುಟ್ಟ ಸಮಸ್ಯೆ ಎದುರಾಗಬಹುದು. ಹಣಕಾಸು ಸ್ಥಿತಿ ಉತ್ತಮ. ಹೆಚ್ಚೆಚ್ಚು ಅಧ್ಯಯನದಲ್ಲಿ ತೊಡಗಿಸಿ. ಜಗತ್ತನ್ನು ನಿಮ್ಮ ಮೂಗಿನ ನೇರದಿಂದ ನೋಡುವುದನ್ನು ತುಸು ಬದಲಿಸಿಕೊಳ್ಳಿ. ವಾಸ್ತವ ಅರಿತರೆ ಬದುಕು ಚೆನ್ನಾಗಿರುತ್ತೆ.

ವೃಷಭ: ತಾಯಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಬರಬೇಕಾದ ಹಣ ಕೈ ಸೇರುವಾಗ ವಿಳಂಬವಾಗುತ್ತದೆ. ಖುಷಿಗಿಂತ ಬೇಸರ ಹೆಚ್ಚಿರಬಹುದು. ಸಂಗಾತಿಯ ಬಗ್ಗೆ ಪಾಸಿಟಿವ್ ಯೋಚನೆ ಬೆಳೆಸಿಕೊಳ್ಳಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಧ್ಯಾನ ಮಾಡಿ, ಮನಃಶಾಂತಿ ಸಿಗುತ್ತೆ.

ಮಿಥುನ: ಪಾಲುದಾರಿಕೆಯಲ್ಲಿ ಬ್ಯುಸಿನೆಸ್ ಆರಂಭಿಸಲು ಸಕಾಲ. ಹೊಸ ಹೊಸ ಪ್ರಾಜೆಕ್ಟ್‌ಗಳು ಕೈ ಹಿಡಿಯಲಿವೆ. ನೀವು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಅದು ನಿಮಗೆ ತಿಳಿದವರೇ ಆಗಿರಬಹುದು. ಲಕ್ಸುರಿ ಐಟಂಗಳು ನಿಮ್ಮ ಪಾಲಾಗಲಿವೆ. ದೂರದೂರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.

ಕಟಕ: ಈ ತಿಂಗಳೇ ನಿಮಗೆ ಭಾಗ್ಯದ ತಿಂಗಳು. ಹೆಚ್ಚು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಪ್ರಸಿದ್ಧಿ ಬರುತ್ತದೆ. ಹೊಸ ಉದ್ಯೋಗದ ಆಫರ್‌ಗಳು ಬರಬಹುದು. ಕೈ ಬಿಡಬೇಡಿ. ನಿಮ್ಮ ಹಾಗೂ ಸಂಗಾತಿಯ ನಡುವೆ ಸರಸ ಹೆಚ್ಚಬಹುದು. ಉದ್ಯೋಗದ ಜೊತೆಗೆ ಫ್ಯಾಮಿಲಿಗೂ ಸಮಯ ಕೊಡಿ.

ಮಿಥುನ ರಾಶಿಯಲ್ಲಿ ಬುಧ ಮತ್ತು ಶುಕ್ರ, ಈ ಮೂರು ರಾಶಿಗಳಿಗೆ ಹಣ

 

ಸಿಂಹ: ನಿಮ್ಮ ಇಗೋವನ್ನು ಸ್ವಲ್ಪ ಒತ್ತಟ್ಟಿಗಿಟ್ಟು ವ್ಯವಹರಿಸಿ. ಇಲ್ಲವಾದರೆ ದೊಡ್ಡ ಸಮಸ್ಯೆ ಬರಬಹುದು. ನಿಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿದರೆ ಹೆಚ್ಚು ಲಾಭ ಬರಬಹುದು. ಅಪಘಾತ ಭೀತಿ ಇದೆ. ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಮಕ್ಕಳ ಬಗ್ಗೆ ವಿಶ್ವಾಸವಿರಲಿ

ಕನ್ಯಾ:ಸಮಯವೇನೋ ಚೆನ್ನಾಗಿಯೇ ಇದೆ. ಆದರೆ ಅವಕಾಶವನ್ನು ಬಳಸಿಕೊಳ್ಳಲು ಸಂಕೋಚ ಬಿಡುವುದಿಲ್ಲ. ಮನೆಯವರ ಪ್ರೀತಿ ನಿಮ್ಮ ಟ್ಯಾಲೆಂಟ್‌ಗೆ ವೇದಿಕೆ ಒದಗಿಸುವುದು. ಹಣಕಾಸು ಸುಧಾರಿಸಬಹುದು. ಪ್ರಿಯರಾದವರು ಇನ್ನಷ್ಟು ಹತ್ತಿರವಾಗುತ್ತಾರೆ.

ತುಲಾ: ದಯಮಾಡಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ದುಡುಕಬೇಡಿ. ಕೆಲಸ ಮಾಡಿದರಷ್ಟೇ ಸಾಲದು, ಅದನ್ನು ಗೊತ್ತಾಗಿಸಬೇಕು ಎನ್ನುತ್ತೆ ಈ ಕಾಲ. ನೀವೂ ಕಾಲಕ್ಕೆ ತಕ್ಕ ಕೋಲ ಕಟ್ಟಬೇಕು. ಆರ್ಥಿಕವಾಗಿ ಸ್ವಲ್ಪ ಕಷ್ಟವಿ

ವೃಶ್ಚಿಕ: ನಿಮಗೆ ಹೆಸರು, ಸ್ಥಾನಮಾನ ಪ್ರಾಪ್ತವಾಗುತ್ತೆ. ನಿಮ್ಮ ಕೆಲಸವನ್ನು ಸುತ್ತಲಿನವರು ಗುರುತಿಸುತ್ತಾರೆ. ಸಂಗಾತಿಯ ಜೊತೆಗೆ ಭಾವನಾತ್ಮಕ ಸಂಬಂಧ ವೃದ್ಧಿಸಲಿದೆ. ಹಣಕಾಸು ಇನ್ಮೇಲೆ ಕಷ್ಟವಾಗದು. ಖರ್ಚುಗಳು ತುಸು ಹೆಚ್ಚು. ಆದರೂ ನಿಭಾಯಿಸುವ ದಾರಿಗಳಿವೆ.

ಧನುಸ್ಸು: ಯಾತನೆ, ನೋವು ಇದನ್ನೆಲ್ಲ ಸೈಡಿಗಿಟ್ಟು ಲೈಫು ಜಿಂಗಲಾಲಾ ಅನಿಸುವ ಟೈಮ್ ಬಂದಿದೆ. ನೋವು ಅದರ ಪಾಡಿಗೆ ಇರಲಿ, ನೀವು ಖುಷಿಯಾಗಿರಿ. ಹಣಕಾಸು ಸುಧಾರಣೆ, ವೈಷಮ್ಯ ಶಮನ. ಹೆಚ್ಚು ಉತ್ಸಾಹದಿಂದಿರುವಿರಿ.

ವೃಷಭ ರಾಶಿಯಲ್ಲಿ ಮಂಗಳ, ಈ 6 ರಾಶಿಯವರ ಭವಿಷ್ಯ ಬದಲಾಗಲಿದೆ

 

ಮಕರ: ನಿರ್ಲಕ್ಷ, ಅಸಡ್ಡೆ ನಿಮ್ಮ ವೈರಿ. ಯಾವುದನ್ನೂ ಕೇವಲವಾಗಿ ನೋಡಬೇಡಿ. ಈ ಬಾರಿ ಸಣ್ಣ ಸಂಗತಿಗಳೇ ನಿಮ್ಮ ಸಹಾಯಕ್ಕೆ ಬರಲಿವೆ. ಹಣದ ಹರಿವು ಸಾಧಾರಣ. ದಾನ ಮಾಡಿ, ಒಳ್ಳೆಯದಾಗುತ್ತೆ. ನಿಮ್ಮ ಬಗ್ಗೆ ಪ್ರೀತಿ ಹೆಚ್ಚಲಿ

ಕುಂಭ: ನಿಮಗಿದು ಎಕ್ಸಾಯಿಟಿಂಗ್ ತಿಂಗಳು. ಹಣ ಹರಿವಿನ ಬೇರೆ ಬೇರೆ ದಾರಿಗಳು ಕಾಣುತ್ತವೆ. ನಿಮಗಿಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ವೃತ್ತಿ ಬದುಕಿನಲ್ಲೂ ಒಳ್ಳೆಯ ಟೈಮ್ ಬಂದಿದೆ. ಮದುವೆ ಬಗ್ಗೆ ಗೊಂದಲ ಮುಂದುವರಿಯಲಿದೆ.

ಮೀನ: ಹಣಕಾಸು ಸ್ವಲ್ಪ ಕಷ್ಟವಾದರೂ ನಿಭಾಯಿಸುವಿರಿ. ಬ್ಯುಸಿನೆಸ್‌ನಲ್ಲಿ ಪಾಸಿಟಿವ್ ವಾತಾವರಣವಿದೆ. ಹಣ ಹೂಡಿಕೆ ಬಗ್ಗೆ ಮನಸ್ಸು ಮಾಡಬಹುದು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಸಂಗಾತಿಯ ಮನಸ್ಸು ಅರಿತು ಮುಂದುವರಿಯಿರಿ.
 

Latest Videos
Follow Us:
Download App:
  • android
  • ios