ಮೆಟ್ರೋದಲ್ಲಿ ದಿನಕ್ಕೊಂದು ವಿಡಿಯೋ ವೈರಲ್‌ ಆಗ್ತಿರುತ್ತೆ. ಈಗ ಹುಡುಗಿಯೊಬ್ಬಳು ಕೈನಲ್ಲಿ ಹಿಡಿದಿದ್ದ ಪುಸ್ತಕ ವೈರಲ್‌ ಆಗಿದೆ. ಸಿಯಾ ಕೇಸ್‌ ನಂತ್ರ  ಈಕೆೆ ಹಿಡಿದ ಬುಕ್‌ ಸಾಕಷ್ಟು ಸುದ್ದಿ ಮಾಡ್ತಿದೆ.

ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬಳು ಪುಸ್ತಕ ಓದುತ್ತಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ವೈರಲ್‌ ಆಗಲು ಮಹಿಳೆ ಕಾರಣ ಅಲ್ಲ, ಆಕೆ ಹಿಡಿದಿರುವ ಬುಕ್ ಕಾರಣ. ಮೆಟ್ರೋದಲ್ಲಿ ಆಕೆ ಓದುತ್ತಿದ್ದ ಪುಸ್ತಕದ ಹೆಸರು How to Kill Men and Get Away With It. ಯುವತಿ ಸಾಮಾನ್ಯರಂತೆ ಪುಸ್ತಕ ಓದುತ್ತಿದ್ದರೆ, ಜನರ ಕಣ್ಣು ಪುಸ್ತಕದ ಶೀರ್ಷಿಕೆ ಮೇಲೆ ಬಿದ್ದಿದೆ. ಕೆಲವರು ಈ ವಿಡಿಯೋವನ್ನು ತಮಾಷೆಯಾಗಿತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಸಿಯಾ ಸೇರಿದಂತೆ ಹಿಂದೆ ನಡೆದ ಕೆಲ ಘಟನೆಗೆ ಲಿಂಕ್‌ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈರಲ್‌ ವಿಡಿಯೋಕ್ಕೆ ಸಿಕ್ಕಾಪಟ್ಟೆ ಲೈಕ್ಸ್

 ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್‌, ಕಮೆಂಟ್‌ ಪಡೆದಿದೆ. ವಿಡಿಯೋ 19 ಮಿಲಿಯನ್‌ ವೀವ್ಸ್‌ ಮತ್ತು 400,000 ಲೈಕ್ ಪಡೆದಿದೆ. ಆದ್ರೆ ಈ ವಿಡಿಯೋ ಬಗ್ಗೆ ಸ್ಪಷ್ಟತೆ ಇಲ್ಲ. ವಿಡಿಯೋ ಯಾವ ಮೆಟ್ರೋದಲ್ಲಿ ಮಾಡಲಾಗಿದೆ, ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಮಾಹಿತಿ ಇಲ್ಲ.

It's turning point: ಟ್ರಾಫಿಕ್, ನೀರಿನ ಸಮಸ್ಯೆ, ದುಬಾರಿ ಮನೆ ಬಾಡಿಗೆ... ಆದರೂ

ಯುವತಿ ಸ್ವಭಾವ ಹೇಳೋದು ಅಸಾಧ್ಯ 

ಯುವತಿ ಸ್ವಭಾವನನ್ನು ಓದುತ್ತಿರುವ ಪುಸ್ತಕ ನೋಡಿ ಹೇಳಲು ಸಾಧ್ಯವಿಲ್ಲ. ಅವರು ಇದನ್ನು ಓದುತ್ತಿದ್ರೋ ಇಲ್ಲ ಸುಮ್ಮನೆ ಕೈನಲ್ಲಿ ಹಿಡಿದಿದ್ದರೋ ಎಂಬುದನ್ನು ಹೇಳೋದು ಕೂಡ ಕಷ್ಟ. ಗಮನ ಸೆಳೆಯಲು ಪ್ರಚೋದನಾಕಾರಿ ಶೀರ್ಷಿಕೆ ಹಾಕೋದು ಸಾಮಾನ್ಯ. ಇಂತಹ ಶೀರ್ಷಿಕೆಗಳು ಓದುಗರ ಕುತೂಹಲವನ್ನು ಹೆಚ್ಚಿಸುತ್ತವೆ. ಪುಸ್ತಕದ ಹೆಸರನ್ನು ನೋಡಿ ಅದರ ಒಳಗೆ ಏನಿದೆ, ಓದುಗರ ಆಲೋಚನೆ ಹೇಗಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ.

ಬೆಂಗಳೂರಿನಿಂದ ಹೊರಡುವ ಸೂಪರ್ ಫಾಸ್ಟ್ ಹೆಸರಿನ ಈ ರೈಲಿನಲ್ಲಿ ಹೋಗಲು ಸಾವಿರ ಬಾರಿ ಯೋಚಿಸಿ!

ಯಾರ ಪುಸ್ತಕ? 

ಹೌ ಟು ಕಿಲ್ ಮೆನ್ ಅಂಡ್ ಗೆಟ್ ಅವೇ ವಿತ್ ಇಟ್ ಎಂಬುದು ಕೇಟಿ ಬ್ರೆಂಟ್ ಬರೆದ ಡಾರ್ಕ್ ಕಾಮಿಡಿ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ಪುಸ್ತಕವಾಗಿದೆ. ಈ ಪುಸ್ತಕವು ಅದರ ದಿಟ್ಟ ಶೀರ್ಷಿಕೆ ಮತ್ತು ಸಸ್ಪೆನ್ಸ್ ಕಥೆಗಾಗಿ ವಿಶ್ವಾದ್ಯಂತ ಗಮನ ಸೆಳೆದಿದೆ. ಈ ಕಾದಂಬರಿಯ ಮುಖ್ಯ ಪಾತ್ರ ಕಿಟ್ಟಿ ಕಾಲಿನ್ಸ್ ಎಂಬ ಯುವತಿ. ಹೊರನೋಟಕ್ಕೆ ಯಶಸ್ವಿ, ಆಕರ್ಷಕ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯಳಾಗಿ ಕಾಣಿಸಿಕೊಳ್ಳುತ್ತಾಳೆ, ಆದರೆ ಅವಳೊಳಗೆ ಕೋಪ ಮತ್ತು ಹತಾಶೆ ಇರುತ್ತದೆ. ಕಥೆಯಲ್ಲಿ, ಕಿಟ್ಟಿ ಮಹಿಳೆಯರ ವಿರುದ್ಧ ಹಿಂಸೆ, ಕಿರುಕುಳ ಅಥವಾ ಶೋಷಣೆ ಮಾಡುವ ಪುರುಷರನ್ನು ಗುರಿಯಾಗಿಸಿಕೊಳ್ಳುತ್ತಾಳೆ. ಕ್ರಮೇಣ, ಅವಳು ಹಲವಾರು ಕೊಲೆಗಳನ್ನು ಮಾಡುತ್ತಾಳೆ, ಪ್ರತಿ ಬಾರಿಯೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಕಥೆಯು ದ್ವಿಮುಖ ಜೀವನ ತೋರಿಸಿದೆ. ಇದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ನೈಜ ಘಟನೆಯನ್ನು ಆಧರಿಸಿಲ್ಲ.

View post on Instagram