ಮುಖೇಶ್ ಅಂಬಾನಿಯವರ ಆಂಟಿಲಿಯಾ ಬಂಗಲೆಯನ್ನು ನೀಲಿ ಟಾರ್ಪಾಲಿನ್‌ನಿಂದ ಕವರ್ ಮಾಡಲಾಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಮಳೆಗಾಲಕ್ಕೆ ಕೋಟ್ಯಾಧೀಶರ ಮನೆ ಕೂಡ ಸಾಮಾನ್ಯರ ಮನೆ ರೀತಿ ಸೋರಿಕೆಯಾಗುತ್ತಾ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಮುಖೇಶ್ ಅಂಬಾನಿಯವರ ಆಂಟಿಲಿಯಾ

ಮುಖೇಶ್ ಅಂಬಾನಿಯವರ ಆಂಟಿಲಿಯಾ ಮುಂಬೈನಲ್ಲಿರುವ ಪ್ರಸಿದ್ಧ 27 ಅಂತಸ್ತಿನ ಐಷಾರಾಮಿ ನಿವಾಸ. ಆಂಟಿಲಿಯಾ ನಿರ್ಮಾಣ, ಅಲ್ಲಿನ ಲಕ್ಸುರಿ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇತ್ತೀಚೆಗೆ, ಆಂಟಿಲಿಯಾವನ್ನು ನೀಲಿ ಟಾರ್ಪಲ್ ನಿಂದ ಮುಚ್ಚಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜನರು ಇದನ್ನು ಆಂಟೆಲಿಯಾದಲ್ಲೂ ಮಳೆಯಿಂದ ಸೋರಿಕೆಯಾಗುತ್ತಿದ್ದು, ಅದಕ್ಕಾಗಿ ಟಾರ್ಪಲ್ ಬಳಕೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಆದರೆ ಸತ್ಯ ಏನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿಜವಾಗಿಯೂ ಆಂಟಿಲಿಯಾ ಸೋರುತ್ತಿದೆಯೆ?

ಆಂಟಿಲಿಯಾ ದೇಶದ ಆಗರ್ಭ ಶ್ರೀಮಂತನ ಮನೆ. ಅದರ ನಿರ್ಮಾಣವೂ ಸಂಪೂರ್ಣವಾಗಿ ಆಗಿದೆ. ಅದರ ನಿರ್ವಹಣೆಯಲ್ಲಿ ಸುಮಾರು 600 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದು ಐಷಾರಾಮಿ ನಿವಾಸವಾಗಿರುವುದರಿಂದ, ಇದರಲ್ಲಿ ನೀರಿನ ಸೋರಿಕೆ ಸಮಸ್ಯೆ ಇರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಫೋಟೊ ಆಂಟಿಲಿಯಾ ನಿರ್ಮಾಣ ಹಂತದ ಫೋಟೊ ಆಗಿದೆ. ಆ ಸಮಯದಲ್ಲಿ ಮಳೆಯಿಂದ ರಕ್ಷಿಸಲು ಟಾರ್ಪಲ್ ಬಳಕೆ ಮಾಡಲಾಗಿತ್ತು. ಇದೀಗ ಮಳೆಗಾಲದಲ್ಲಿ ಮತ್ತೆ ಆ ಫೋಟೊ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದೇ ವ್ಯಂಗ್ಯವಾಗಿ ಪೋಸ್ಟ್ ಮಾಡುತ್ತಿದ್ದಾರೆ.

ಆಂಟಿಲಿಯಾ ಹೈ-ಟೆಕ್ ಕಟ್ಟಡ

ಮುಂಬೈನ ಭಾರೀ ಮಳೆಯ ಸಮಯದಲ್ಲಿ ಅನೇಕ ಕಟ್ಟಡಗಳ ಮೇಲೆ ಟಾರ್ಪಲ್ ಸಾಮಾನ್ಯವಾಗಿ ಕಂಡುಬರುತ್ತವೆ, ಆದರೆ ಆಂಟಿಲಿಯಾದಂತಹ ಹೈಟೆಕ್ ಕಟ್ಟಡಕ್ಕೆ ಇದರ ಅಗತ್ಯವಿಲ್ಲ. ಆಂಟಿಲಿಯಾ ಶತಕೋಟಿ ಡಾಲರ್‌ಗಳಷ್ಟು ಮೌಲ್ಯದ್ದಾಗಿದೆ. ಇದರಲ್ಲಿ ಈಜುಕೊಳ, ಹೆಲಿಪ್ಯಾಡ್, ಬಹುಮಹಡಿ ಉದ್ಯಾನಗಳು ಮತ್ತು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದರ ನಿರ್ವಹಣೆಗೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಹಾಗಾಗಿ ಇದಂತೂ ಸೋರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಜನ ಮಾತ್ರ ವೈರಲ್ ಪೋಸ್ಟ್‌ ನೋಡಿ, ಶ್ರೀಮಂತ ಮತ್ತು ಬಡವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಿದ್ದಾರೆ.

ಮುಂಬೈನಲ್ಲಿ ಸೋರಿಕೆ ಸಾಮಾನ್ಯ, ಆದರೆ ಆಂಟಿಲಿಯಾದಲ್ಲಿ ಅಲ್ಲ

ಮುಂಬೈನಲ್ಲಿ ಮಳೆಗಾಲದಲ್ಲಿ ಸೋರಿಕೆ ಸಮಸ್ಯೆಗಳು ಸಾಮಾನ್ಯ, ಆದರೆ ಆಂಟಿಲಿಯಾದಂತಹ ಕಟ್ಟಡಗಳನ್ನು ಸುಧಾರಿತ ವಾಟರ್ ಪ್ರೂಫ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಆದರೆ ಜನರು ಹಳೆಯ ಫೋಟೊವನ್ನು ನೋಡಿ ಶ್ರೀಮಂತರ ಮನೆಯಲ್ಲೂ ಇದೆಂತಹ ಸಮಸ್ಯೆ ಎನ್ನುವಂತೆ, ಹಾಸ್ಯಾಸ್ಪದವಾದ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ನೀವು ಪೋಸ್ಟ್ ಮಾಡುವ ಮುನ್ನ ಫ್ಯಾಕ್ಟ್ ಚೆಕ್ ಮಾಡಲು ಮರೆಯಬೇಡಿ.