ರೂಟರ್‌ನ ಮೇಲೆ ನಾಣ್ಯ ಇರಿಸುವುದರಿಂದ ವೈ-ಫೈ ವೇಗ ಅಥವಾ ಸಿಗ್ನಲ್ ಸುಧಾರಿಸುತ್ತದೆ ಎಂಬುದನ್ನು ದೃಢೀಕರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಲ್ಲದೆ, ವಸ್ತುಗಳಿಂದ ರೂಟರ್‌ನ ಗಾಳಿಯಾಡುವ ರಂಧ್ರಗಳನ್ನು ಮುಚ್ಚುವುದರಿಂದ ಅದು ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಆದ್ದರಿಂದ, ಈ ವೈರಲ್ ತಂತ್ರವನ್ನು ಪ್ರಯತ್ನಿಸುವ ಬದಲು, ರೂಟರ್ ಅನ್ನು ಸೂಕ್ತವಾದ ಸ್ಥಳದಲ್ಲಿ ಇರಿಸುವುದು ಉತ್ತಮ.

ರೂಟರ್ ಮೇಲೆ ನಾಣ್ಯ ಇಡುವುದರಿಂದ ಸಿಗ್ನಲ್ ಗುಣಮಟ್ಟ ಹೆಚ್ಚಾಗುವುದಿಲ್ಲ, ಅಲ್ಲದೇ ರೂಟರ್ ಬಿಸಿಯನ್ನು ಹೊರಕ್ಕೆ ಹಾಕುವ ಮಾರ್ಗಕ್ಕೆ ಅಡ್ಡ ಆಗುವ ಅಪಾಯ ಇರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಈ ಟ್ರಿಕ್ ಹಿಂದಿನ ಸತ್ಯ ಏನು? ರೂಟರ್ ಅನ್ನು ಮನೆಯಲ್ಲಿ ಯಾವ ಭಾಗದಲ್ಲಿಟ್ಟರೆ ಸಿಗ್ನಲ್ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ರೂಟರ್ ಮೇಲೆ ನಾಣ್ಯ ಯಾಕೆ ಇಡುತ್ತಿದ್ದಾರೆ?

ರೂಟರ್ ಮೇಲೆ ನಾಣ್ಯ ಇಟ್ಟರೆ ಸಿಗ್ನಲ್ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಕೆಲವು ಟ್ರಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಲೋಹದಿಂದ ತಯಾರಿಸಿದ ನಾಣ್ಯವೂ ಒಂದು ರೀತಿ ಅಂಟೇನಾ ರೀತಿ ಕೆಲಸ ಮಾಡುತ್ತಿದೆ. ಇದರಿಂದ ಸಿಗ್ನಲ್ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಕೆಲವರು ಸುದ್ದಿ ಹರಡುತ್ತಿದ್ದಾರೆ. ಈ ಇದು ಸತ್ಯ ಅಂತ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ.

ಇಂಟರ್ ನೆಟ್ ಸ್ಪೀಡ್ ಹೆಚ್ಚಾಗುತ್ತಾ?

ನಾಣ್ಯ ಇಡುವುದರಿಂದ ವೈಫೈ ವೇಗ ಹೆಚ್ಚಾಗುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ತಜ್ಞರ ಪ್ರಕಾರ, 2.4GHz, 5GHz ವೈಫೈ ತರಂಗಗಳ ಮೇಲೆ ಒಂದು ಸಣ್ಣ ಯಾವುದೇ ಪ್ರಭಾವ ತೋರುವ ಅವಕಾಶ ಬಹಳ ಕಡಿಮೆ ಎಂದು ಹೇಳಿದ್ದಾರೆ.

ನಾಣ್ಯ ಇಡುವುದರಿಂದ ಏನು ಉಪಯೋಗವಿದೆ?

ಕೆಲವು ಸಂದರ್ಭಗಳ್ಲಿ ರೂಟರ್ ತೂಕ ಕಡಿಮೆ ಇದ್ದರೆ, ಅಥವಾ ಅದರ ಟೇಬಲ್ ಸ್ಥಿರವಾಗಿ ಇಲ್ಲ ಎಂದರೆ, ಆಗ ನಾಣ್ಯ ಅದನ್ನು ಸ್ಥಿರವಾಗಿ ಇರುವಂತೆ ಮಾಡಲು ಬಹಳಕೆ ಮಾಡಬಹುದು. ಆದರೆ ಇದಕ್ಕೂ ವೈಫೈ ಸಿಗ್ನಲ್ ಹೆಚ್ಚಿಸುವ ಟ್ರಿಕ್ನಿಕ್‌ಗೂ ಯಾವುದೇ ಸಂಬಂಧವಿಲ್ಲ.

ರೂಟರ್ ಮೇಲೆ ವಸ್ತುಗಳು ಇಡೋದು ಅಪಾಯಕ್ಕೆ ಕಾರಣ!

ರೂಟರ್ ಕೆಲಸ ಮಾಡುವ ಸಂದರ್ಭದಲ್ಲಿ ಬಿಸಿಯನ್ನು ಉತ್ಪಾದನೆ ಮಾಡುತ್ತದೆ. ಈ ಕಾರಣದಿಂದಲೇ ಬಿಸಿ ಹೊರಹೋಗಲು ರಂಧ್ರಗಳನ್ನು ಮಾಡ್ತಾರೆ. ಆದರೆ ರೂಟರ್ ಮೇಲೆ ಅನಗತ್ಯ ವಸ್ತುಗಳನ್ನು ಇಟ್ಟರೆ ಅದರ ಬಿಸಿ ಹೆಚ್ಚಾಗಿ ರೂಟರ್ ಹಾಳಾಗುವ ಅಪಾಯ ಇರುತ್ತದೆ. ಅಥವಾ ರೂಟರ್ ಕೆಲಸ ಮಾಡುವ ಗುಣಮಟ್ಟ ಕಡಿಮೆಯಾಗುವ ಅವಕಾಶ ಇರುತ್ತದೆ.

ರೂಟರ್ ಅನ್ನು ಎಲ್ಲಿ ಅಳವಡಿಸಬೇಕು?

ರೂಟರ್ ಮೇಲೆ ಹೆಚ್ಚು ನಾಣ್ಯಗಳು ಇಟ್ಟರೆ ಇದರಿಂದ ಸಿಗ್ನಲ್ ವೀಕ್ ಆಗುವ ಅವಕಾಶ ಇರುತ್ತದೆ. ಇದರಿಂದ ಮನೆಯ ಕೆಲವು ಪ್ರದೇಶಗಳಿಗೆ ಸಿಗ್ನಲ್ ಸರಿಯಾಗಿ ತಲುಪದೆ ಇರಬಹದು. ಅಡುಗೆ ಕೋಣೆ, ಮನೆಯ ಕಿಟಕಿ, ದೊಡ್ಡ ಎಲೆಕ್ಟ್ರಿಕ್ ವಸ್ತುಗಳ ಬಳಿ ರೂಟರ್ ಅಳವಡಿಕೆ ಮಾಡುವುದು ಸರಿಯಲ್ಲ. ರೂಟರ್ ಸುತ್ತ ಖಾಲಿ ಸ್ಥಳ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ರೂಟರ್ ಮೇಲೆ ನಾಣ್ಯ ಇಡುವುದಕ್ಕಿಂತ, ರೂಟರ್ ಅನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಅಳವಡಿಸುವುದು ಉತ್ತಮ. ದೊಡ್ಡ ಲೋಹ ಯಂತ್ರಗಳು ಅಥವಾ ವಸ್ತುಗಳು, ಬಿಸಿ ಹೆಚ್ಚಾಗಿರುವ ಪ್ರದೇಶಗಳಿಗೆ ದೂರವಾಗಿ ಅಳವಡಿಸುವುದರಿಂದ ಸಿಗ್ನಲ್ ಗುಣಮುಟ್ಟ ಉತ್ತಮವಾಗಿರುತ್ತದೆ.